Advertisement
Opinion

ಬಸಳೆ ಸೊಪ್ಪು ಕೇವಲ ಸಾಂಬಾರಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು | ಇದು ಹಲವಾರು ಔಷಧಿಯ ಗುಣಗಳನ್ನು ಹೊಂದಿರುವ ಹಸಿರು ತರಕಾರಿ

Share

ಬಸಳೆಯ ಸೊಪ್ಪು ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಹಸಿರು ತರಕಾರಿಯಾಗಿದೆ. ಇದರಲ್ಲಿ ಹಲವು ಬಗೆಯ ಬಸಳೆ ಸೊಪ್ಪಿನ ವಿಧಗಳಿವೆ, ಅವುಗಳೆಂದರೆ ಹಸಿರು ಬಸಳೆ, ಕೆಂಪು ಬಸಳೆ, ನೆಲಬಸಳೆ ಇತ್ಯಾದಿ. ಬಸಳೆಯು ಒಂದು ಬಳ್ಳಿ ಜಾತಿಯ ಸಸ್ಯವಾಗಿದೆ. ಇದನ್ನು ಹಳ್ಳಿಗಳಲ್ಲಿ ಚಪ್ಪರಗಳನ್ನು ಮಾಡಿ ಬೆಳೆಸುತ್ತಾರೆ. ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತವೆ. ಹೂವುಗಳು ಬಿಳಿಯ ಬಣ್ಣದಾಗಿದ್ದು, ಚಿಕ್ಕದಾಗಿರುತ್ತವೆ. ಇದರ ಬೀಜಗಳಿಂದ ಹಾಗು ಕಾಂಡಗಳಿಂದಲೂ ಬಸಳೆ ಗಿಡವನ್ನು ಬೆಳೆಸಬಹುದು.

Advertisement
Advertisement

ಅಡುಗೆಯಲ್ಲಿ ಬಸಳೆಯನ್ನು ಉಪಯೋಗಿಸಿ ಸಾಂಬಾರ್, ಪಲ್ಯ, ಬಜೆ, ತಂಬುಳಿ ಹಾಗು ಸೂಪಿನಂತಹ ನಾನಾ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಇದು ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯ ಔಷಧ ಸಸ್ಯವಾಗಿದೆ. ಇದು A, B ಜೀವಸತ್ವಗಳು, ಕಬ್ಬಿಣ ಮತ್ತು ಪೊಟ್ಯಾಷಿಯಂ‌ ಪೋಷಕಾಂಶಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶವನ್ನು ಒದಗಿಸುವಲ್ಲಿ ಬಸಳೆಯು ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಿಣಿಯರಿಗೆ ಇದರಿಂದ ತುಂಬಾ ಉಪಯೋಗವಿದೆ. ಬಸಳೆ ಸೊಪ್ಪು ಬೇಸಿಗೆ ಕಾಲಕ್ಕೆ ಉತ್ತಮವಾದ ತರಕಾರಿಯಾಗಿದ್ದರೂ, ಇದು ಎಲ್ಲ ಕಾಲದಲ್ಲೂ ಬೆಳೆಯುತ್ತದೆ, ಬಸಳೆಯು ಲೋಳೆಯ ಅಂಶವನ್ನು ಹೊಂದಿದ್ದು, ನಮ್ಮ ದೇಹಕ್ಕೆ ಹೆಚ್ಚು ತಂಪನ್ನು ನೀಡುತ್ತದೆ.

Advertisement

ಬಸಳೆ ಸೊಪ್ಪಿನ ಔಷಧಿಯ ಗುಣಗಳು: ಹಸಿವೆಯನ್ನು ಹೆಚ್ಚಿಸಲು ಬಸಳೆಯು ಸಹಕಾರಿ – ವಾರದಲ್ಲಿ ಮೂರರಿಂದ ನಾಲ್ಕು ದಿನ ಬಸಳೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣ ಕ್ರಿಯೆಯ ವೇಗ ಹೆಚ್ಚಾಗುತ್ತದೆ. ಆದ್ದರಿಂದ – – ಇದು ಹಸಿವನ್ನು ಹೆಚ್ಚಿಸುತ್ತದೆ. – ಬಾಯಿಯ ಹುಣ್ಣು ಕಡಿಮೆ ಮಾಡಲು ಬಸಳೆಯು ಉಪಯುಕ್ತ – ಬಸಳೆ ಸೊಪ್ಪು ಬಾಯಿಯ ಹುಣ್ಣಿಗೆ ಸುಲಭದ ಮನೆಮದ್ದು. ಬಸಳೆಯ ಎಲೆಯನ್ನು ಚೆನ್ನಾಗಿ ತೊಳೆದು, ಬಾಯಿಯಲ್ಲಿ ನಿಧಾನವಾಗಿ ಜಗಿದರೆ, ಅದರಲ್ಲಿರುವ ಲೋಳೆಯ ಅಂಶವು, ಬಾಯಿಯ ಹುಣ್ಣುಗಳನ್ನು ನಿವಾರಿಸುತ್ತದೆ.

ಅಂಗಾಲಿನ ಉರಿ ಕಡಿಮೆ ಮಾಡಲು ಬಸಳೆಯ ಉಪಯೋಗ, ಅಂಗಾಲಿನ ಉರಿಯನ್ನು ಕಡಿಮೆ ಮಾಡಲು, ಬಸಳೆ ಸೊಪ್ಪನ್ನು ಅರೆದು, ಆ ಮಿಶ್ರಣವನ್ನು ರಾತ್ರೆ ಮಲಗುವಾಗ ಅಂಗಾಲಿಗೆ ಹಚ್ಚಿಕೊಂಡು ಮಲಗಿದರೆ, ಅಂಗಾಲುಗಳ ಉರಿ ಕಡಿಮೆಯಾಗುತ್ತದೆ. ಹಾಗು ಕಾಲು ತಂಪಾಗಿರುತ್ತದೆ. – ಬಸಳೆ ಸೊಪ್ಪು ಕುರುವಿನ ಕೀವು ತೆಗೆಯಲು ಸಹಕಾರಿಯಾಗಿದೆ. ಬಸಳೆ ಸೊಪ್ಪನ್ನು ಅರೆದು, ಕುರುವಿನ ಮೇಲೆ ಹಚ್ಚುವುದರಿಂದ ಕುರುವಿನಲ್ಲಿನ ಕೀವು (ಕೆಟ್ಟ ರಕ್ತ) ಹೊರಗೆ ಬರುತ್ತದೆ. ಮತ್ತು ಉರಿಯೂತ ಕೂಡ ಕಡಿಮೆಯಾಗುತ್ತದೆ.

Advertisement

ಬಸಳೆಯಿಂದ ಮಲಬದ್ಧತೆಯ ನಿವಾರಣೆ – ಮಲಬದ್ಧತೆಯಿಂದ ಬಳಲುತ್ತಿದ್ದವರು ಬಸಳೆ ಸೊಪ್ಪಿನ ಕಷಾಯವನ್ನು ಮಾಡಿ, ಕುಡಿಯುವುದರಿಂದ ಅಥವಾ ಬಸಳೆ ಸೊಪ್ಪನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ, ಚಿಕ್ಕ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿನ ಮಲಬದ್ಧತೆಯ ಸಮಸ್ಯೆಯು ಕಡಿಮೆಯಾಗುತ್ತದೆ.

ಬಸಳೆ ಸೊಪ್ಪು ಸುಟ್ಟ ಗಾಯವನ್ನು ವಾಸಿ ಮಾಡುತ್ತದೆ. ಸುಟ್ಟ ಗಾಯಗಳು ಯಾವಾಗಲೂ ತುಂಬಾ ಉರಿಯುತ್ತಿರುತ್ತವೆ. ಇದನ್ನು ಕಡಿಮೆ ಮಾಡಲು, ಬಸಳೆ ಸೊಪ್ಪಿನ ರಸ ತೆಗೆದು, ಆ ರಸಕ್ಕೆ ಬೆಣ್ಣೆ ಸೇರಿಸಿ, ಸುಟ್ಟ ಗಾಯಕ್ಕೆ ಹಚ್ಚುವುದರಿಂದ, ತಂಪಾಗಿ, ಉರಿ ಕಡಿಮೆಯಾಗುತ್ತಾ ಗಾಯವು ನಿಧಾನವಾಗಿ ವಾಸಿಯಾಗುತ್ತದೆ.

Advertisement

ದೇಹದ ತೂಕವನ್ನು ಹೆಚ್ಚಿಸಲು ಬಸಳೆಯು ಸಹಕಾರಿ. ಬಸಳೆ ಸೊಪ್ಪನ್ನು ವಾರದಲ್ಲಿ 3 ದಿನವಾದರೂ ಬಳಸುವುದರಿಂದ ಸರಾಗವಾಗಿ ಜೀರ್ಣಕ್ರಿಯೆಯಾಗಿ, ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ದೇಹದ ತೂಕ ಕೂಡ ಹೆಚ್ಚುತ್ತದೆ.

ಚರ್ಮದ ಹೊಳಪಿಗೆ ಬಸಳೆ ಸೊಪ್ಪು – ಒಣ ಚರ್ಮಕ್ಕೆ ಬಸಳೆಯನ್ನು ಉಪಯೋಗಿಸಬಹುದಾಗಿದೆ. ಕೆಲವೊಮ್ಮೆ ಚರ್ಮವು ಒಣಗಿದಂತಾಗುತ್ತದೆ. ಆಗ ಬಸಳೆಯನ್ನು ಅರೆದು ಹಚ್ಚಿಕೊಳ್ಳುವುದರಿಂದ ಒಣ ಚರ್ಮವು ತನ್ನ ಹೊಳಪನ್ನು ಪುನಃ ಪಡೆದು ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ಒಣ ಚರ್ಮದ ಕಾರಣದಿಂದ ತುರಿಕೆ ಉಂಟಾಗಿದ್ದರೂ ಕೂಡ ನಿವಾರಣೆಯಾಗುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

13 hours ago

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |

ಕಿಸಾನ್‌ ಸಮ್ಮಾನ್‌ ನಿಧಿಯಿಂದ 9 ಕೋಟಿ 50 ಲಕ್ಷ  ರೈತರಿಗೆ  21 ಸಾವಿರ…

15 hours ago

ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…

15 hours ago

ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ  ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…

15 hours ago

ಹೊರನಾಡು ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…

16 hours ago