Advertisement
MIRROR FOCUS

ಮಾವಿನ ಹಣ್ಣು ಕೊಳ್ಳುವ ಮುನ್ನ ಎಚ್ಚರ | ಮಾರುಕಟ್ಟೆಯಲ್ಲಿ ವಿಷಕಾರಿ ಮಾವಿನ ಹಣ್ಣಿನ ಮಾರಾಟ | ರಾಸಾಯನಿಕಯುಕ್ತ ಕಲಬೆರಕೆ ಮಾವಿನ ಹಣ್ಣುಗಳ ಖರೀದಿಸದಿರಿ

Share

ಎಲ್ಲೂ ನೋಡಿದರಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನದ್ದೇ(mango) ಕಾರುಬಾರು. ಸದ್ಯ ಮಾವಿನ ಹಣ್ಣಿನ ಸೀಸನ್. ಮಾರಾಟ ಬಲು ಜೋರಾಗಿಯೇ ಇದೆ. ಎಲ್ಲೇ ನೋಡಿದರೂ ಬಗೆಬಗೆಯ ಮಾವಿನ ಹಣ್ಣುಗಳನ್ನು ಕಾಣಬಹುದು. ಮಾವು ಪ್ರಿಯರು ಬಹಳ ಆಸೆ ಪಟ್ಟು ಮಾವಿನ ಹಣ್ಣು ಖರೀದಿ ಮಾಡುತ್ತಾರೆ.  ಆದರೆ ಮಾವು ಪ್ರಿಯರಿಗೆ(Mango lovers) ಕಹಿಸುದ್ದಿಯೊಂದು ಇದೆ. ನೀವು ಯಾಮಾರಿದ್ರೆ ಆರೋಗ್ಯಕ್ಕೆ(Health) ಕಂಟಕವಾಗುವ ಸನ್ನಿವೇಶ ಸೃಷ್ಟಿಯಾಗಬಹುದು. ಹೀಗಾಗಿ ಬಾಯಿ ಚಪ್ಪರಿಸುತ್ತ ಮಾವಿನ ಹಣ್ಣು ತಿನ್ನುವವರು ಎಚ್ಚರಿಕೆ ವಹಿಸಬೇಕಿದೆ. ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ(Market) ಹಲವು ಬಗೆಯ ಮಾವಿನ ಹಣ್ಣುಗಳು ಲಭ್ಯವಿದ್ದು, ಚೌಸಾ, ಲಾಂಗ್ರಾ, ಅಲ್ಫೊನ್ಸೋ, ಹ್ಯಾಪುಸ್‌ ಸೇರಿದಂತೆ ಹಲವು ಬಗೆಯ ಮಾವಿನ ಹಣ್ಣುಗಳ ಮಾರಾಟ ನಡೆಯುತ್ತಿದೆ.

Advertisement
Advertisement
Advertisement

ಉತ್ತಮ ತಾಜಾ ಮತ್ತು ರುಚಿಕರವಾದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಆತಂಕದ ಸಂಗತಿ ಎಂದರೆ ಮಾರುಕಟ್ಟೆಗೆ ರಾಸಾಯನಿಕಯುಕ್ತ ಕಲಬೆರಕೆ ಮಾವಿನ ಹಣ್ಣುಗಳೂ ಬರುತ್ತಿವೆ. ಆದರೆ ನೀವು ಖರೀದಿಸುವ ಮಾವು ಕಲಬೆರಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೇ ಕಂಡುಹಿಡಿಯಬಹುದು.ಮಾರುಕಟ್ಟೆಯಲ್ಲಿ ಮಾವು ಕೊಳ್ಳುವಾಗ ಕಲಬೆರಕೆ ಇದೆಯೋ ಇಲ್ಲವೋ ಎಂಬುದನ್ನು ಮುಟ್ಟಿ ನೋಡಿಯೇ ತಿಳಿಯಬಹುದು. ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿದರೆ, ನಿಮ್ಮ ಬೆರಳು ಮಾವಿನ ಹಣ್ಣಿನಲ್ಲಿ ಸಿಲುಕಿಕೊಂಡರೆ ಅದಕ್ಕೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಅರ್ಥ. ಹೀಗಾಗಿ ಅದನ್ನು ನೀವು ಖರೀದಿಸಬೇಡಿ.

Advertisement

ಇದಲ್ಲದೇ ಮಾವಿನ ಹಣ್ಣು ಕೊಳ್ಳಲು ಹೋದಾಗ ಮಾವಿನ ಹಣ್ಣಿನ ಸಿಪ್ಪೆಯ ಬಗ್ಗೆಯೂ ಖಂಡಿತಾ ಗಮನ ಕೊಡಿ. ಸಿಪ್ಪೆಯ ಮೇಲೆ ಯಾವುದೇ ರೀತಿಯ ಕಲೆ ಗೋಚರಿಸಿದರೆ, ಅದರಲ್ಲಿ ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುತ್ತದೆ. ಹಣ್ಣನ್ನು ನೈಸರ್ಗಿಕವಾಗಿ ಹಣ್ಣು ಮಾಡಿದರೆ, ನೀವು ಅದರಲ್ಲಿ ಯಾವುದೇ ಕಲೆಗಳನ್ನು ಕಾಣುವುದಿಲ್ಲ. ಹೀಗಾಗಿ ಸಿಪ್ಪೆಯಿಂದಲೂ ನೀವು ಕಂಡುಹಿಡಿಯಬಹುದು. ಮಾವಿನಹಣ್ಣುಗಳನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದು ಭಾರತದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಹಿಂದಿನ ಸಂಪ್ರದಾಯವಾಗಿದೆ. ವರದಿಯೊಂದರ ಪ್ರಕಾರ, ಈ ಸಂಪ್ರದಾಯವನ್ನು ಶ್ಲಾಘಿಸಿದ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಮುಖ್ಯ ಡಯೆಟಿಷಿಯನ್ ಸುಷ್ಮಾ ಪಿಎಸ್, ಮಾವಿನಹಣ್ಣನ್ನು ಕೇವಲ ಒಂದು ಗಂಟೆ ನೀರಿನಲ್ಲಿ ನೆನೆಸಿಡುವುದರಿಂದ ಅವುಗಳಲ್ಲಿನ ಫೈಟಿಕ್ ಆಮ್ಲದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ನೀವು ಮಾವಿನ ಹಣ್ಣುಗಳನ್ನು ಖರೀದಿಸುವಾಗ, ಅವುಗಳ ಮೇಲೆ ಯಾವುದೇ ಸುಕ್ಕುಗಳು ಅಥವಾ ಗೆರೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇಂತಹ ಮಾವಿನ ಹಣ್ಣಿನಲ್ಲಿ ಕಲಬೆರಕೆ ಇರುತ್ತದೆ. ಇದರೊಂದಿಗೆ ಜಿಗುಟಾದ ಮಾವಿನ ಹಣ್ಣುಗಳನ್ನು ಸಹ ಖರೀದಿಸಬಾರದು. ಕಳೆದ ತಿಂಗಳು ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಕಾಯಿ ಹಣ್ಣು ಮಾಡುವ ಆರೋಪದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, ಮಾವಿನ ಹಣ್ಣು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು.

Advertisement
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…

8 hours ago

ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |

ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…

17 hours ago

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

22 hours ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

22 hours ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

1 day ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

2 days ago