ಮದುರಂಗಿಯಲ್ಲಿ ಬದುಕಿನ ರಂಗು | ಅನೇಕ ರೋಗಗಳಿಗೆ ಮನೆ ಮದ್ದು ಈ ಗೋರಂಟಿ

April 11, 2023
3:11 PM
Advertisement

ಹೆನ್ನಾ ( Henna ) ಎಂಬ ಹೆಸರು ಹೆಚ್ಚು ಪ್ರಚಲಿತ. ಮಾನವ ಕುಲದ ಮೊದಲ ಸೌಂದರ್ಯ ವರ್ಧಕ. ಉತ್ತರ ಆಫ್ರಿಕಾ ಮೂಲದ ಈ ಸಸ್ಯ ಸುಮಾರು 5,000 ವರ್ಷಗಳ ಕೆಳಗೆ ಪರ್ಶಿಯ ದೇಶದಲ್ಲಿ ಅತ್ಯಂತ ಪ್ರಚಲಿತವಿದ್ದ ಅಂದಿನ ಹೆಣ್ಣು ಮಕ್ಕಳ ಸೌಂದರ್ಯ ಸಾಧನ. ನಂತರ ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದು. ಮದರಂಗಿ (ಗೋರಂಟಿ) ಇದನ್ನು ಹೆಚ್ಚಾಗಿ ಚರ್ಮಕ್ಕೆ, ಕೂದಲಿಗೆ ಬಣ್ಣ ಬರಿಸಲು ಉಪಯೋಗಿಸುತ್ತಾರೆ. ಇದರ ಬೇರು ಕಾಂಡ ಎಲೆ ಹೂ ಕಾಯಿ ಎಲ್ಲವನ್ನೂ ಔಷಧೀಯ ರೂಪದಲ್ಲಿ ಉಪಯೋಗಿಸುತ್ತಾರೆ.

Advertisement
Advertisement
Advertisement

1) ಇದರ ಎಲೆಯನ್ನು ಮತ್ತು ನೀಲಿ ಸೊಪ್ಪು ಸೇರಿಸಿ ಅರೆದು ತಲೆಗೆ ಪ್ಯಾಕ್ ಹಾಕುವುದರಿಂದ ಕೂದಲು ಕಪ್ಪು ಮಿಶ್ರಿತ ಕೆಂಪು ಬಣ್ಣ ಬರುತ್ತದೆ. ಇದು ನ್ಯಾಚುರಲ್ ಹೇರ್ ಡೈ.
2) ಮದರಂಗಿಯ ಎಲೆಗಳನ್ನು ಪೇಸ್ಟ್ ಮಾಡಿ ಬಾಯಿ ಹುಣ್ಣಿಗೆ ಹಚ್ಚುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
3) ಇದರ ಎಲೆಯ ಕಷಾಯ ಮಾಡಿ ಹಾಲು ಹಾಕಿ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ದೇಹದಲ್ಲಿ ಬಲ ಉಂಟಾಗುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ.
4) ಗೋರಂಟಿ ಸೊಪ್ಪು ಬೆಳ್ಳುಳ್ಳಿ ಮೆಣಸು ನಿಂಬೆರಸ ಸೇರಿಸಿ ಅರೆದು ಪೇಸ್ಟ್ ಮಾಡಿ ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ.
5) ಸೊಪ್ಪನ್ನು ನಿಂಬೆಹುಳಿಯಲ್ಲಿ ಅರೆದು ಅಂಗಲಿಗೆ ಹಚ್ಚುವುದರಿಂದ ಅಂಗಾಲು ಉರಿ ಗುಣವಾಗುತ್ತದೆ.
6) ಒಂದು ಭಾಗ ಸೊಪ್ಪು ರಸ ತೆಗೆದು ಮೂರು ಭಾಗ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ಎಣ್ಣೆ ಹಚ್ಚುವುದರಿಂದ ನೆತ್ತಿ ತಂಪಾಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ.
7) ಗೋರಂಟಿಯ ಹೂ ಗೊಂಚಲನ್ನು ಕೂದಲಿಗೆ ಮುಡಿಯುವುದರಿಂದ ಅಥವಾ ತಲೆದಿಂಬಿನಲ್ಲಿಟ್ಟು ಮಲಗುವುದರಿಂದ ಚೆನ್ನಾಗಿ ನೆಮ್ಮದಿಯ ನಿದ್ದೆ ಬರುತ್ತದೆ.
8) ಗೋರಂಟಿಯ ಹೂವಿನೊಂದಿಗೆ ಪಚ್ಚ ಕರ್ಪೂರ ಸೇರಿಸಿ ಪರಿಮಳ ತೆಗೆದುಕೊಳ್ಳುವುದರಿಂದ ತಲೆನೋವು ಗುಣವಾಗುತ್ತದೆ.
9) ಗೋರಂಟಿಯ ಬೀಜದ ರಸ ತೆಗೆದು ಅಕ್ಕಿ ತೊಳೆದ ನೀರಿನಲ್ಲಿ ಸೇರಿಸಿ ಸೇವಿಸುವುದರಿಂದ ಕಾಮಾಲೆ ಗುಣವಾಗುತ್ತದೆ.
10) ಗೋರಂಟಿ ಬೀಜವನ್ನು ಕೆಂಡದಲ್ಲಿ ಹಾಕಿ ಘಾಟನ್ನು ಕಿವಿಯಲ್ಲಿ ತೆಗೆದುಕೊಳ್ಳುವುದರಿಂದ ಬಾಯಲ್ಲಿ ಹುಳುಗಳು ಬಿದ್ದು ಹಲ್ಲು ನೋವು ಗುಣವಾಗುತ್ತದೆ. ಇದುನ್ನು ಹಿರಿಯರು ಹಲ್ಲು ನೋವು ನಿವಾರಣೆಗಾಗಿ ಮಾಡುತ್ತಿದ್ದ ಔಷಧಿ.
11) ಸೊಪ್ಪನ್ನು ನಾಟಿ ಹಸುವಿನ ಹಾಲಿನಲ್ಲಿ ಸೇವಿಸುವುದರಿಂದ ಕಾಮಾಲೆ ಮತ್ತು ಕಾಮಾಲೆಯಿಂದ ಆದ ಸುಸ್ತು ಗುಣವಾಗುತ್ತದೆ.
12) ಗೋರಂಟಿ ಗಿಡದ ಚಕ್ಕೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಮೂತ್ರದ ಕಲ್ಲು ನಿವಾರಣೆ ಆಗುತ್ತದೆ.
13) ಕೂದಲಿನ ಎಣ್ಣೆಯಲ್ಲಿ ಗೋರಂಟಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ತಲೆಗೆ ಹಚ್ಚುವ ಸೋಪಿನಲ್ಲಿಯೂ ಗೋರಂಟಿಯನ್ನು ಬಳಸಲಾಗುತ್ತದೆ.
14)) ಉತ್ತರ ದಿಕ್ಕಿಗೆ ಹೋದ ಗೋರಂಟಿ ಬೇರನ್ನು ಅಮಾವಾಸ್ಯೆ ಯಂದು ಕಿತ್ತು ಪೂಜಿಸಿ ಕೊರಳಲ್ಲಿ ಕಟ್ಟುವುದರಿಂದ ಯಕೃತ್ತಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಮೂಢನಂಬಿಕೆಯಲ್ಲ. ಸ್ನಾನ ಮಾಡುವಾಗ ಎದೆಯ ಭಾಗದಿಂದ ನೀರು ಬಿದ್ದು ಈ ಕ್ರಿಯೆ ಇಂದ ಸರಿ ಹೋಗಿರುತ್ತದೆ .
15) ವರ್ಷಕ್ಕೆ ಒಮ್ಮೆ ನಾಗರ ಪಂಚಮಿಯಲ್ಲಿ ಸಾಂಪ್ರದಾಯಿಕವಾಗಿ ಉಗುರಿಗೆ ಉಪಯೋಗಿಸುತ್ತಾರೆ. ಇದರಿಂದ ಉಗುರಿನ ಅನೇಕ ಕಾಯಿಲೆಗಳು ಗುಣವಾಗುತ್ತದೆ. ಇದು ನಮ್ಮ ಹಿರಿಯರು ರಕ್ತ ಶುದ್ದಿಗೆ ಕಾಣಿಸಿಕೊಂಡ ಉಪಾಯ.

Advertisement

ಮಾಹಿತಿ – ಸುಮನಾ ಮಳಲಗದ್ದೆ

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror