ವಿದ್ಯಾಭ್ಯಾಸ(Education), ನೌಕರಿಯ ಹುಡುಕಾಟ(Searching Job), ಸೂಕ್ತ ವರ(Bride groom) ಸಿಗುತ್ತಿಲ್ಲ, ಹೀಗೆ ನಾನಾ ಕಾರಣಗಳಿಂದಾಗಿ ಹುಡುಗಿಯರು(Girls) ಇಂದು ತಮ್ಮ ಮದುವೆಯನ್ನು(Marriage) ಮುಂದೂಡುತ್ತಾ ಬರುತ್ತಿದ್ದಾರೆ. 30 ವಯಸ್ಸಿನ ನಂತರ ಮದುವೆಯಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಮಕ್ಕಳ(Child) ಕಿರಿ ಕಿರಿ ಇಲ್ಲದೇ ಹಾಯಾಗಿರೋಣ ಎಂದು ಅಮ್ಮನಾಗುವುದನ್ನು(Mother) ಮುಂದೂಡುವವರೂ ಈಗ ಹೆಚ್ಚಾಗಿದ್ದಾರೆ. ಇಂದಿನ ಯುವತಿಯರಲ್ಲಿ ಅದಾಗಲೇ ಅನಿಯಮಿತ ಮುಟ್ಟು, PCOD ಗಳಂತಹ ಸಂತಾನ ಹೀನತೆಯ ಸಮಸ್ಯೆಗಳು ಹೆಚ್ಹು. ಮದುವೆಯ ಮುಖ್ಯ ಉದ್ದೇಶ ಈ ಎಲ್ಲದರ ನಡುವೆ ಕಳೆದುಹೋಗಿದೆ.
ಇದು ಸರಿಯಾದ ನಿರ್ಧಾರವೇ..?? ಖಂಡಿತವಾಗಿಯೂ ಅಲ್ಲ..! : ನಾವು ಅತ್ಯಂತ ಆರೋಗ್ಯವಂತ – ಶಕ್ತಿವಂತರಾಗಿ ಇದ್ದಾಗ ನಮಗೆ ಮಗು ಜನಿಸಿದರೆ, ಆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ನಾವು ಅಶಕ್ತರಾದಾಗ, ಅನಾರೋಗ್ಯ ಹೊಂದಿದಾಗ, ಜನಿಸುವ ಮಗು ಖಂಡಿತವಾಗಿಯೂ ಸದೃಢ ಇರುವುದಿಲ್ಲ. 20 ರಿಂದ 25 ವಯಸ್ಸಿನ ನಡುವೆ ನಾವು ಅತ್ಯಂತ ಶಕ್ತಿವಂತರಾಗಿರುತ್ತೇವೆ. ಹೀಗಾಗಿ ಈ ಅವಧಿಯಲ್ಲಿನ ಮದುವೆ – ಮಕ್ಕಳು ಅತ್ಯಂತ ಸೂಕ್ತ. ಸ್ವಲ್ಪ ತಡವಾಗಿದೆ ಎಂದರೂ ಕೂಡ 30ರೊಳಗೆ ಅಮ್ಮನಾಗುವುದು ಒಳ್ಳೆಯದು. ಏಕೆಂದರೆ 30 ರ ನಂತರ ಸಂತಾನ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. 35 ರಷ್ಟು ಹೊತ್ತಿಗೆ ಮಹಿಳೆಯರ ಸಂತಾನ ಶಕ್ತಿ 50 ಪ್ರತಿಶತ ಕಡಿಮೆಯಾಗಿರುತ್ತದೆ. ಅಂದರೆ ಮಕ್ಕಳಾಗುವ ಸಾಧ್ಯತೆ ಕೇವಲ 50 ಪ್ರತಿಶತ ಮಾತ್ರ. 40 ರ ನಂತರ ಹುಟ್ಟುವ ಮಕ್ಕಳು ಇನ್ನೂ ಅಶಕ್ತ. ಮಕ್ಕಳು ಹುಟ್ಟುವ ಸಾಧ್ಯತೆಯೂ ಕೂಡ ಇನ್ನೂ ಕಡಿಮೆ. ನಮ್ಮ ಆರ್ಥಿಕ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ, ನಮ್ಮ Biology ಮತ್ತು ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದು ಎಷ್ಟು ಸರಿ ಬನ್ನಿ. 30ರೊಳಗೆ ಮದುವೆಯಾಗಿ- ಅಮ್ಮನಾಗಿ. ಇದು ಪುರುಷರಿಗೆ ಕೂಡ ಅನ್ವಯವಾಗುತ್ತದೆ. ಸದೃಢ ಭಾರತವನ್ನು ಕಟ್ಟೋಣ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…