ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ಕಳೆದ ವರ್ಷಗಳಿಂದ ಚರಂಡಿ ಅವ್ಯವಸ್ಥೆ ಇದೆ. ಇದರಿಂದಾಗಿ ಜನರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಇಲಾಖೆಗಳು, ಸ್ಥಳೀಯ ಪಂಚಾಯತ್ ಸೇರಿದಂತೆ ಯಾರೊಬ್ಬರೂ ಗಂಭೀರವಾಗಿ ಈ ಸಮಸ್ಯೆ ತೆಗೆದುಕೊಳ್ಳುತ್ತಿಲ್ಲ. ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚೆಯಾಗಿ ನಿರ್ಣಯವಾದರೂ ಪರಿಹಾರ ಮಾತ್ರಾ ಮರೀಚಿಕೆಯಾಗಿದೆ.
ಸಣ್ಣ ಮಳೆಗೆ ಆಗಿರುವ ಸಮಸ್ಯೆ
ಬೆಳ್ಳಾರೆಯ ಚರಂಡಿ ಸಮಸ್ಯೆ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆಯಾಗಿದೆ. ಈ ಬಾರಿಯ ಗ್ರಾಮ ಸಭೆಯಲ್ಲೂ ಚರ್ಚೆಯಾಗಿದೆ. ಜನರ ಸಮಸ್ಯೆಯನ್ನು ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಿದ ಬಳಿಕವೂ ಅನುಷ್ಟಾನವಾಗುತ್ತಿಲ್ಲ ಎನ್ನುವುದು ಜನರ ಆರೋಪ. ಗ್ರಾಮ ಸಭೆ ಎಂದರೆ ಗ್ರಾಮದ ಸಂಸತ್ತು, ಇಲ್ಲಿನ ನಿರ್ಣಯಕ್ಕೆ ಬೆಲೆ ಇದೆ, ಆದರೆ ಬೆಳ್ಳಾರೆಯ ಈ ಪ್ರಕರಣದಲ್ಲಿ ಮಾತ್ರಾ ಅನುಷ್ಟಾನ ಆಗಿಲ್ಲ, ಚರಂಡಿಯ ಕೊಳಚೆಯಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ, ಹಾಗಿದ್ದರೂ ಆರೋಗ್ಯ ಇಲಾಖೆ ಕೂಡಾ ಈ ಬಗ್ಗೆ ಮೌನ ವಹಿಸಿದೆ ಎಂದು ಜನರು ಹೇಳುತ್ತಾರೆ.ಸ್ವಚ್ಛ ಭಾರತದ ಕನಸು ಈಡೇರಲು ಇನ್ನೂ ಎಷ್ಟು ದಿನಗಳು ಬೇಕಾದೀತೋ ಎನ್ನುವುದು ಪ್ರಶ್ನೆಯಾಗಿದೆ.
ರೂರಲ್ ಮಿರರ್.ಕಾಂ ನಿರಂತರವಾಗಿ ಫಾಲೋಅಪ್ ವರದಿಯನ್ನು ಮಾಡುತ್ತಿದೆ. ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೆ ಜನರ ಸಮಸ್ಯೆಯನ್ನು ಇಲಾಖೆಗಳ, ಜನಪ್ರತಿನಿಧಿಗಳ ಗಮನಕ್ಕೆ ರೂರಲ್ ಮಿರರ್ ತರುತ್ತದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…