ಬೆಳ್ಳಾರೆ ಚರಂಡಿ ಪಾಲೋಅಪ್‌ | ಗ್ರಾಮಸಭೆಯ ಚರ್ಚೆ – ನಿರ್ಣಯಗಳಿಗೂ ಬೆಲೆ ಇಲ್ಲ…!! |

March 27, 2022
9:06 AM

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ಕಳೆದ  ವರ್ಷಗಳಿಂದ ಚರಂಡಿ ಅವ್ಯವಸ್ಥೆ ಇದೆ. ಇದರಿಂದಾಗಿ ಜನರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಇಲಾಖೆಗಳು, ಸ್ಥಳೀಯ ಪಂಚಾಯತ್‌ ಸೇರಿದಂತೆ ಯಾರೊಬ್ಬರೂ ಗಂಭೀರವಾಗಿ ಈ ಸಮಸ್ಯೆ ತೆಗೆದುಕೊಳ್ಳುತ್ತಿಲ್ಲ. ವಾರ್ಡ್‌ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚೆಯಾಗಿ ನಿರ್ಣಯವಾದರೂ ಪರಿಹಾರ ಮಾತ್ರಾ ಮರೀಚಿಕೆಯಾಗಿದೆ.

ಸಣ್ಣ ಮಳೆಗೆ ಆಗಿರುವ ಸಮಸ್ಯೆ

ಬೆಳ್ಳಾರೆಯ ಚರಂಡಿ ಸಮಸ್ಯೆ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆಯಾಗಿದೆ. ಈ ಬಾರಿಯ ಗ್ರಾಮ ಸಭೆಯಲ್ಲೂ ಚರ್ಚೆಯಾಗಿದೆ. ಜನರ ಸಮಸ್ಯೆಯನ್ನು ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಿದ ಬಳಿಕವೂ ಅನುಷ್ಟಾನವಾಗುತ್ತಿಲ್ಲ ಎನ್ನುವುದು  ಜನರ ಆರೋಪ. ಗ್ರಾಮ ಸಭೆ ಎಂದರೆ ಗ್ರಾಮದ ಸಂಸತ್ತು, ಇಲ್ಲಿನ ನಿರ್ಣಯಕ್ಕೆ ಬೆಲೆ ಇದೆ, ಆದರೆ ಬೆಳ್ಳಾರೆಯ ಈ ಪ್ರಕರಣದಲ್ಲಿ ಮಾತ್ರಾ ಅನುಷ್ಟಾನ ಆಗಿಲ್ಲ, ಚರಂಡಿಯ ಕೊಳಚೆಯಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ, ಹಾಗಿದ್ದರೂ ಆರೋಗ್ಯ ಇಲಾಖೆ ಕೂಡಾ ಈ ಬಗ್ಗೆ ಮೌನ ವಹಿಸಿದೆ ಎಂದು ಜನರು ಹೇಳುತ್ತಾರೆ.ಸ್ವಚ್ಛ ಭಾರತದ ಕನಸು ಈಡೇರಲು ಇನ್ನೂ ಎಷ್ಟು ದಿನಗಳು ಬೇಕಾದೀತೋ ಎನ್ನುವುದು ಪ್ರಶ್ನೆಯಾಗಿದೆ.

ರೂರಲ್‌ ಮಿರರ್‌.ಕಾಂ ನಿರಂತರವಾಗಿ ಫಾಲೋಅಪ್‌ ವರದಿಯನ್ನು ಮಾಡುತ್ತಿದೆ. ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೆ ಜನರ ಸಮಸ್ಯೆಯನ್ನು ಇಲಾಖೆಗಳ, ಜನಪ್ರತಿನಿಧಿಗಳ ಗಮನಕ್ಕೆ ರೂರಲ್‌ ಮಿರರ್‌ ತರುತ್ತದೆ.

 

ಚರಂಡಿ ಅವ್ಯವಸ್ಥೆ | ಬೆಳ್ಳಾರೆಯಲ್ಲಿ ಈಗ ಕೊಳಚೆ ನೀರಿನ ಸಮಸ್ಯೆ….! | ದಿವ್ಯ ಮೌನವೇಕೆ ಎಂಬುದು ಜನರ ಪ್ರಶ್ನೆ…? |

ಚರಂಡಿ ಅವ್ಯವಸ್ಥೆ | ಬೆಳ್ಳಾರೆಯಲ್ಲಿ ಈಗ ಕೊಳಚೆ ನೀರಿನ ಸಮಸ್ಯೆ….! | ದಿವ್ಯ ಮೌನವೇಕೆ ಎಂಬುದು ಜನರ ಪ್ರಶ್ನೆ…? |

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror