ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ

February 6, 2026
6:49 AM

“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು  ದ. ರಾ. ಬೇಂದ್ರೆ ಅವರ ಸಾಲುಗಳು.  ಬಹಳ ಸುಂದರವಾದ ಸಾಲುಗಳು ಇವು…

ತಿಂದು ಬದುಕುವುದು ಎಂದರೆ ತಿನ್ನುವುದು ಅಲ್ಲ,  ಇಲ್ಲಿ ಶೋಷಣೆ, ಅಸೂಯೆ, ಸ್ವಾರ್ಥ ಮತ್ತು ಮತ್ತೊಬ್ಬರ ದುಃಖದ ಮೇಲೆ ನಿಲ್ಲುವ ಬದುಕಿನ ಸಂಕೇತ. ಇಂತಹ ಬದುಕು ಕ್ಷಣಿಕ ಲಾಭ ನೀಡಬಹುದು, ಆದರೆ ಅಂತಃಕರಣವನ್ನು ಯಾವಾಗಲೋ ಒಂದು ಸಂದರ್ಭ ಹಿಂಸಿಸುತ್ತದೆ,  ಬೇಂದ್ರೆ ಇಲ್ಲಿ ಎಚ್ಚರಿಸುವುದು ಇದನ್ನು. ಇತರರನ್ನು ಕುಗ್ಗಿಸಿ, ಹಿಂಸಿಸಿ ಮೇಲೇರಿದ ಬದುಕು ನಿಜವಾದ ಮಾನವೀಯ ಬದುಕಾಗಲಾರದು. ಅದು ಕಾಡುವುದೂ ನಿಶ್ಚಿತವೇ ಆಗಿರುತ್ತದೆ. ಆಗ ಕಾಲವೂ ಕಳೆದಿರುತ್ತದೆ, ಕಾಲವೂ ದೂರವಾಗಿರುತ್ತದೆ.

ತಿಳಿದು ಬದುಕಬೇಕು ಎನ್ನುವುದೇ ನಿಜವಾದ ಬದುಕು. ಇದು ಬದುಕಿಗೆ ನೀಡುವ ಸಂದೇಶ, ಬೆಳಗಿನ ಚಿಂತನೆಗೆ ದಾರಿದೀಪ. ತಿಳಿದು ಬದುಕುವುದು ಎಂದರೆ  ಮಾತು, ನಡೆ ಮತ್ತು ನಿರ್ಧಾರಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿತು ನಡೆಯುವುದು. ದಿನದ ಆರಂಭದಲ್ಲೇ ಈ ಅರಿವು ಬಂದರೆ, ಬದುಕು ಹಗುರವಾಗುತ್ತದೆ, ಸಂಬಂಧಗಳು ಮೃದುಗೊಳ್ಳುತ್ತವೆ. ಯಾರು ಯಾರನ್ನೂ ನೋಯಿಸದೇ, ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ, ಅದೇ ನಿಜವಾದ ಸಂತೋಷ. ಇಂದಿನ ದಿನವನ್ನು ಈ ಚಿಂತನೆಯೊಂದಿಗೆ ಆರಂಭಿಸೋಣ….. ಶುಭದಿನ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ….

ಬದುಕು ಎಂದರೆ ಪ್ರತಿದಿನದ ಹೊಸ ಆರಂಭ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror