“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು ದ. ರಾ. ಬೇಂದ್ರೆ ಅವರ ಸಾಲುಗಳು. ಬಹಳ ಸುಂದರವಾದ ಸಾಲುಗಳು ಇವು…
ತಿಂದು ಬದುಕುವುದು ಎಂದರೆ ತಿನ್ನುವುದು ಅಲ್ಲ, ಇಲ್ಲಿ ಶೋಷಣೆ, ಅಸೂಯೆ, ಸ್ವಾರ್ಥ ಮತ್ತು ಮತ್ತೊಬ್ಬರ ದುಃಖದ ಮೇಲೆ ನಿಲ್ಲುವ ಬದುಕಿನ ಸಂಕೇತ. ಇಂತಹ ಬದುಕು ಕ್ಷಣಿಕ ಲಾಭ ನೀಡಬಹುದು, ಆದರೆ ಅಂತಃಕರಣವನ್ನು ಯಾವಾಗಲೋ ಒಂದು ಸಂದರ್ಭ ಹಿಂಸಿಸುತ್ತದೆ, ಬೇಂದ್ರೆ ಇಲ್ಲಿ ಎಚ್ಚರಿಸುವುದು ಇದನ್ನು. ಇತರರನ್ನು ಕುಗ್ಗಿಸಿ, ಹಿಂಸಿಸಿ ಮೇಲೇರಿದ ಬದುಕು ನಿಜವಾದ ಮಾನವೀಯ ಬದುಕಾಗಲಾರದು. ಅದು ಕಾಡುವುದೂ ನಿಶ್ಚಿತವೇ ಆಗಿರುತ್ತದೆ. ಆಗ ಕಾಲವೂ ಕಳೆದಿರುತ್ತದೆ, ಕಾಲವೂ ದೂರವಾಗಿರುತ್ತದೆ.
ತಿಳಿದು ಬದುಕಬೇಕು ಎನ್ನುವುದೇ ನಿಜವಾದ ಬದುಕು. ಇದು ಬದುಕಿಗೆ ನೀಡುವ ಸಂದೇಶ, ಬೆಳಗಿನ ಚಿಂತನೆಗೆ ದಾರಿದೀಪ. ತಿಳಿದು ಬದುಕುವುದು ಎಂದರೆ ಮಾತು, ನಡೆ ಮತ್ತು ನಿರ್ಧಾರಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿತು ನಡೆಯುವುದು. ದಿನದ ಆರಂಭದಲ್ಲೇ ಈ ಅರಿವು ಬಂದರೆ, ಬದುಕು ಹಗುರವಾಗುತ್ತದೆ, ಸಂಬಂಧಗಳು ಮೃದುಗೊಳ್ಳುತ್ತವೆ. ಯಾರು ಯಾರನ್ನೂ ನೋಯಿಸದೇ, ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ, ಅದೇ ನಿಜವಾದ ಸಂತೋಷ. ಇಂದಿನ ದಿನವನ್ನು ಈ ಚಿಂತನೆಯೊಂದಿಗೆ ಆರಂಭಿಸೋಣ….. ಶುಭದಿನ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ….
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…