ಕಳಪೆ ಗುಣಮಟ್ಟದ ಅಡಿಕೆ | 8 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶ ಪಡಿಸಿಕೊಂಡ ನಾಗಪುರದ ಪೊಲೀಸರು |

October 8, 2022
11:06 PM

ನಾಗಪುರದ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ಅವರು ಕಳಪೆ ಅಡಿಕೆಯ ಸರಬರಾಜು ಪತ್ತೆ ಕಾರ್ಯಾಚರಣೆ ಮಾಡಿದ್ದರು. ಈ ಸಂದರ್ಭ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ತಿನ್ನಲು ಯೋಗ್ಯವಲ್ಲ ಎಂದು  ಆಹಾರ ಮತ್ತು ಔಷಧ ಆಡಳಿತ ಇಲಾಖೆಗೆ (ಎಫ್ ಡಿಎ) ಹೇಳಿದೆ. 

ವಶಪಡಿಸಿಕೊಂಡ ಸುಮಾರು 8 ಕೋಟಿ ಮೌಲ್ಯದ ಅಡಿಕೆಯ ಮಾದರಿ ತೆಗೆದುಕೊಳ್ಳಲಾಗಿದ್ದು ಎಲ್ಲಾ ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಅಂದರೆ ಈ ಅಡಿಕೆ ತಿನ್ನಲು ಯೋಗ್ಯವಿಲ್ಲ ಎಂದು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಹೇಳಿತ್ತು. ಈ ನಡುವೆ ಕಳ್ಳದಾರಿಯ ಮೂಲಕ ದೇಶದ ವಿವಿದೆಡೆಗೆ  ಅದೇ ಮಾದರಿಯ ಅಡಿಕೆ ಬರುತ್ತಿದೆ. ಪೊಲೀಸರಿಗೆ ಸುಳಿವು ಸಿಗದಂತೆ ಹಲವು ಕಡೆಗೆ ಸಾಗಿಸುವುದು ಹಾಗೂ ಗ್ರಾಮೀಣ ಭಾಗಗಳಲ್ಲಿ ಅಡಿಕೆ ದಾಸ್ತಾನು ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಆಮದು ಮಾಡಿದ ಅಡಿಕೆಯನ್ನು ಕೆಲವು ಕಡೆ ಸುರಿದು ಇಲ್ಲಿನ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ.

ಆದರೆ ಮುಂಬೈ ಕೆಲವು ಪ್ರದೇಶದ ವ್ಯಾಪಾರಿಗಳು ತಪ್ಪು ಮಾಹಿತಿ ನೀಡಿ ಬೇರೆ ಬೇರೆ ಬಂದರಿನಲ್ಲಿ ಸರಕುಗಳನ್ನು ಆರ್ಡರ್ ಮಾಡುತ್ತಾರೆ.  ಪ್ಲಾಸ್ಟಿಕ್ ಸರಕುಗಳ ಹೆಸರಿನಲ್ಲಿ 4.60 ಕೋಟಿ ರೂ. ಹಾಗೂ ಅದೇ ರೀತಿ ಮುಂದ್ರಾ ಬಂದರಿನಿಂದ ಕಂಟೈನರ್ ಗಳಲ್ಲಿ ಸರಕು ತರಲಾಗುತ್ತಿದೆ. ಈ ರೀತಿಯ ಕಳಪೆ ಅಡಿಕೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಅಡಿಕೆ ಆಮದು ಮೇಲೆ ಶೇ.100  ಸುಂಕ ಇದ್ದದೂ ಕದ್ದು ಆಮದು ಮಾಡಲಾಗುತ್ತಿದೆ. ಇದರಿಂದ  ಕೇಂದ್ರ ಸರ್ಕಾರಕ್ಕೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ. ಕೆಲವು ಇಲಾಖೆಗಳೂ ಮೌನವಾಗಿದೆ. ಹೀಗಾಗಿ ಅಡಿಕೆ ಆಮದು ಭಾರತದ ಕೃಷಿಕರ ಮೇಲೆ ಪರಿಣಾಮ ಬೀರುವುದು ನಿಶ್ಚಿತ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ
September 24, 2026
1:40 PM
by: ಸಾಯಿಶೇಖರ್ ಕರಿಕಳ
ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ
September 24, 2026
7:23 AM
by: ದ ರೂರಲ್ ಮಿರರ್.ಕಾಂ
ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ
September 23, 2026
9:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!
September 23, 2026
1:58 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror