ಜೀವನದಲ್ಲಿ ಉತ್ತಮ ಶಿಸ್ತು ಹಾಗೂ ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಮಿತ್ರರಂತೆ ವರ್ತಿಸಿದರೆ ಮಕ್ಕಳ ಸರ್ವತ್ತೋಮುಖ ಬೆಳವಣಿಗೆ ಸಾಧ್ಯ ಎಂದು ಬೆಥನಿ ನವಜ್ಯೋತಿ ಪ್ರೊವಿನ್ಸಿನ ಪ್ರೊವಿನ್ಶಿಯಲ್ ಸುಪೀರಿಯರ್ , ದೀಪಿಕಾ ಮಲಯಾಳಂ ಪತ್ರಿಕೆಯ ಅಂಕಣ ಬರಹಗಾರರು ಹಾಗೂ ಉತ್ತಮ ಸಾಹಿತಿಗಳೂ ರೆ|ಫಾ| ಜೋರ್ಜ್ ಅಯ್ಯನೇತ್ ಹೇಳಿದರು.
ಅವರು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿದ ಅಧಿಕೃತ ಭೇಟಿ ಕಾರ್ಯಕ್ರಮದ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಉತ್ತಮ ಮೌಲ್ಯವಿರುವ ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಿ ಉತ್ತಮ ಮೌಲ್ಯಭರಿತ ಭಾರತೀಯ ಸಂಸ್ಕೃತಿಯ ವಾಹಕರಾಗಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ನಿದ್ರೆಯಲ್ಲಿ ಎನು ಮಾಡಲು ಸಾಧ್ಯವಿಲ್ಲ ಎಚ್ಚರದಿಂದಿರುವಾಗ ಮಾತ್ರ ಹೊಸತನ್ನು ಮಾಡಲು ಸಾಧ್ಯ . ಆದುದರಿಂದ ಶಿಕ್ಷಕರಾದವರು ಪ್ರತಿದಿನ ಹೊಸತನ್ನು ಕಲಿಯಬೇಕೆಂದೂ ಹೇಳಿದರು.
ವೇದಿಕೆಯಲ್ಲಿ ,ಆಡಳಿತ ಮಂಡಳಿಯ ಮೊದಲ ಸಲಹೆಗಾರರೂ ಬೆಥನಿ ನವಜ್ಯೋತಿ ಪ್ರೊವಿನ್ಸಿನ ಶಿಕ್ಷಣ ಕ್ಷೇತ್ರದ ಅಧಿಕಾರಿಯೂ ಆದ ರೆ|ಡಾ|ಫಾ| ವರ್ಗೀಸ್ ಕೈಪನಡ್ಕ ಒ.ಐ.ಸಿ, ಪ್ರೊವಿನ್ಶಿಯಲ್ ಕೋಶಾಧಿಕಾರಿಯಾದ ರೆ|ಫಾ| ಜೇಕಬ್ ಈಟಿತಡತ್ತಿಲ್ ಒ.ಐ.ಸಿ , ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ಒ.ಐ.ಸಿ ಹಾಗೂ ಸಂಸ್ಥೆಯ ಉಪ ಪ್ರಾಂಶುಪಾಲರಾದ ಜೋಸ್ ಎಂ.ಜೆ. ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ಒ.ಐ.ಸಿ ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮ ಶೆಣೈ ವಂದಿಸಿದರು. ಶಿಕ್ಷಕಿ ಮಂಜು ಫಿಲಿಪ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಶಿಕ್ಷಕರೊಂದಿಗೆ ಮಕ್ತ ಚರ್ಚೆಗಳು ನಡೆಸಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…