ಶಾಲಾ ಮೇಸ್ಟ್ರಾಗಿದ್ದವರು ಭಾಗೀರಥಿ ಮುರುಳ್ಯ | ಸಾಮಾನ್ಯ ಮಹಿಳೆ ಸುಳ್ಯ ಬಿಜೆಪಿ ಅಭ್ಯರ್ಥಿ

April 12, 2023
11:18 AM

ಸುಳ್ಯ ಮೀಸಲು ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತೆಗೆ ಮಣೆ ಹಾಕಿದೆ. ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್  ಘೋಷಣೆ ಮಾಡುವ ಮೂಲಕ ಪಕ್ಷವು ಹೊಸ ಭಾಷ್ಯ ಬರೆದಿದೆ.

ಭಾಗೀರಥಿ ಮುರುಳ್ಯ ಅವರು ಸುಳ್ಯದ ಮುರುಳ್ಯ ಗ್ರಾಮದ ಶಾಂತಿನಗರ ನಿವಾಸಿ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಆದಿ ದ್ರಾವಿಡ ಸಮುದಾಯದವರು.  ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಎಂಬಲ್ಲಿ ನಾಲ್ಕು ವರ್ಷಗಳ ಕಾಲ  ಮೇಸ್ಟ್ರು ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳಿಗೆ ಪಾಠ ಹೇಳಿಕೊಟ್ಟ ಅನುಭವ ಅವರದು. ಬಳಿಕ ಟೈಲರಿಂಗ್ ಮತ್ತು ಹೈನುಗಾರಿಕೆಗೂ ತೊಡಗಿಸಿಕೊಂಡಿದ್ದಾರೆ.

ಸುಳ್ಯ ಬಿಜೆಪಿಯಲ್ಲಿಗುರುತಿಸಿಕೊಂಡಿರುವ ಇವರು, ಹಲವು ಸಂಘ ಸಂಸ್ಥೆಗಳ್ಲಲಿ ಉನ್ನತ ಸ್ಥಾನ ಸಮರ್ಥವಾಗಿ ನಿಭಾಯಿಸಿದವರು. ಜಿಲ್ಲಾ ಪಂಜಾಯತ್ ಸದಸ್ಯೆ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಆಗಿ ಕಾರ್ಯನಿರ್ವಹಿಸಿದವರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿ, ಬೆಳ್ತಂಗಡಿ ಮತ್ತು ಪುತ್ತೂರು ಬಿಜೆಪಿ ಘಟಕದ ಸಹ ಪ್ರಭಾರಿ ಆಗಿ ಕಾರ್ಯನಿರ್ವಹಿಸಿದ ಅನುಭವದ  ಇವರದು. ಈಗ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಕೊಡಗು ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಆಗಿ ಕೂಡ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಸುಳ್ಯದಲ್ಲಿ ಜಾತಿ ರಾಜಕೀಯ ಕೆಲಸ ಮಾಡುತ್ತಿದ್ದು, ಸುಳ್ಯದಲ್ಲಿ ನಿರ್ಣಾಯಕವಾಗಿರುವ ಆದಿದ್ರಾವಿಡ ಸಮುದಾಯದ ಜನರಿಗೆ 30 ವರ್ಷಗಳಿಂದ ಇಲ್ಲಿಯತನಕ ಒಮ್ಮೆಯೂ ಅವಕಾಶ ನೀಡಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಆದಿದ್ರಾವಿಡ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕು. ಒಂದು ವೇಳೆ ಟಿಕೆಟ್‌ ತಪ್ಪಿದ್ದಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆದಿದ್ರಾವಿಡ ಸಂಘದ ಪ್ರಮುಖರು ಎಚ್ಚರಿಕೆ ನೀಡಿದ್ದರು.

ಆದಿದ್ರಾವಿಡ ಸಮುದಾಯಕ್ಕೆ ಟಿಕೆಟ್ ನೀಡಿದರೇ ಪಕ್ಷಾತೀತವಾಗಿ ನಮ್ಮ ಸಮುದಾಯದ ಮತವನ್ನು ವರ್ಗೀಕರಣ ಆಗದಂತೆ ನೋಡಿಕೊಳ್ಳುವುದಾಗಿಯೂ ಸಮುದಾಯದವರು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಅಂದುಕೊಂಡತೆ ಭಾಗೀರಥಿ ಅವರಿಗೆ ಟಿಕೆಟ್ ನೀಡಿರುವುದು ಈ ಸಮುದಾಯಕ್ಕೆ ಖುಷಿ ತಂದಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ
September 30, 2026
10:51 PM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು
September 30, 2026
9:10 PM
by: ದ ರೂರಲ್ ಮಿರರ್.ಕಾಂ
ಹಿಂಗಾರು ಬೆಳೆಗಳಿಗೆ ಕೇಂದ್ರದಿಂದ ಬೆಂಬಲ ಬೆಲೆ ಹೆಚ್ಚಳ
September 30, 2026
8:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-09-2026 | ಅರಬ್ಬಿ ಸಮುದ್ರದ ಗಾಳಿ ದುರ್ಬಲ… ಕರ್ನಾಟಕದ ಮಳೆಯ ಸ್ವರೂಪ ಬದಲಾಗುತ್ತಾ?
September 30, 2026
8:13 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror