ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಭೇಟಿಯ ವೇಳೆ ಗೈರಾದ ಶಾಸಕ ಅಂಗಾರ | ಸಿಎಂ ಭೇಟಿಯಾದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ | ಅಂಗಾರ ಅವರ ಪರವಾಗಿ ನಿಂತವರು ಒಬ್ಬರು….! |

April 12, 2023
10:40 PM

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಆಗಮಿಸುವ ವೇಳೆ ಶಾಸಕ ಎಸ್‌ ಅಂಗಾರ ಗೈರಾಗಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಈ ಸಂದರ್ಭ ಸುಳ್ಯದ ಬಿಜೆಪಿ ಪ್ರಮುಖರು ಇದ್ದರು.

Advertisement
Advertisement

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆಯಾಗಿದ್ದು ಅಂಗಾರ ಬದಲಾಗಿ ಭಾಗೀರಥಿ ಮುರುಳ್ಯ ಹೆಸರು ಘೋಷಣೆಯಾಗಿದೆ. ತಕ್ಷಣವೇ ಶಾಸಕ, ಸಚಿವ ಅಂಗಾರ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜಕೀಯ ನಿವೃತ್ತಿ ಘೋಷಿಸಿದರು, ಪಕ್ಷದ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅಚ್ಚರಿ ಎಂದರೆ ಸುಮಾರು 30 ವರ್ಷಗಳ ಕಾಲ ಶಾಸಕರಾಗಿದ್ದ ಅಂಗಾರ ಅವರ ಬದಲಾಯಿಸಿದಾಗ ಅವರಿಗೆ ಅಸಮಾಧಾನವಾಗುವುದು ಸಹಜವೇ. ಆದರೆ ಅದೇ ಪಕ್ಷದ ಪ್ರಮುಖರು, ಅಂಗಾರ ಅವರ ಜೊತೆಗೇ ಇದ್ದವರು ಮೌನವಹಿಸಿದ್ದರು. ಒಬ್ಬರು ಮಾತ್ರಾ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು  ಪಕ್ಷದ ಹುದ್ದೆಗೆ ರಾಜೀನಾಮೆ ಘೋಷಿಸಿದರು. ಪಕ್ಷದ ಉಳಿದವರು ಅಂಗಾರ ಅವರ ಬಳಿ ಸುಳಿಯಲಿಲ್ಲ ಎನ್ನುವುದು ಅಂಗಾರ ಅವರ ಆಪ್ತ ವಲಯ ಹೇಳಿಕೊಂಡಿದೆ.

Advertisement

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಕ್ಕೆ ಸುಬ್ರಹ್ಮಣ್ಯ ಭೇಟಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಅವಕಾಶವನ್ನು ಬಿಜೆಪಿ ಅಭ್ಯರ್ಥಿ ಭಾಗೀರಥಿ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಪರಿಚಯಿಸಿಕೊಂಡು, ಸ್ವಾಗತಿಸಿ ಆಶೀರ್ವಾದ ಪಡೆದರು. ಈ ಸಂದರ್ಭ ಸುಳ್ಯದ ಬಿಜೆಪಿಯ ಎಲ್ಲಾ ಪ್ರಮುಖರೂ ಭಾಗಿಯಾಗಿದ್ದರು. ಈ ಮೂಲಕ ಅಂಗಾರ ಅವರಿಗೆ ಟಿಕೆಟ್‌ ತಪ್ಪಿದರೂ ಪಕ್ಷದ ನಿಲುವು ಸರಿಯಾಗಿದೆ ಎನ್ನುವ ಸಂದೇಶವನ್ನು ರವಾನಿಸಿದರು.

ಈ ಮಧ್ಯೆ ಬಿಜೆಪಿ ಪಕ್ಷವು ಅಭ್ಯರ್ಥಿ ಬದಲಾವಣೆ ಮಾಡಿರುವುದನ್ನು ಬಿಜೆಪಿ ಮುಖಂಡ ಎಸ್‌ ಎನ್‌ ಮನ್ಮಥ ಸ್ವಾಗತಿಸಿದ್ದಾರೆ. ಈ ಮೂಲಕ ಬಿಜೆಪಿ ಸ್ವಾಭಿಮಾನಿ ಬಳಗ ಎನ್ನುವ ಬಿಜೆಪಿ ಗುಂಪು ಕೂಡಾ ಅಭ್ಯರ್ಥಿ ಬದಲಾವಣೆಯನ್ನು ಸ್ವಾಗತಿಸಿದೆ ಎನ್ನುವುದು  ಪರೋಕ್ಷವಾದ ಸೂಚನೆಯನ್ನೂ ನೀಡಿದೆ.ಇದೆಲ್ಲಾ ಬೆಳವಣಿಗೆಯು ಸುಳ್ಯ ಬಿಜೆಪಿಯಲ್ಲಿ ಟಿಕೆಟ್‌ ಘೋಷಣೆಯ ಬಳಿಕ ನಡೆದಿದೆ.

Advertisement

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror