ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್ ಮುನ್ಸೂಚನಾ ವ್ಯವಸ್ಥೆ- BFS ಗೆ ಕೇಂದ್ರ ಭೂ ವಿಜ್ಞಾನಗಳ ಸಚಿವ ಡಾ. ಜಿತೇಂದ್ರ ಸಿಂಗ್ ದೆಹಲಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, BSF ವ್ಯವಸ್ಥೆ , ಪಂಚಾಯಿತಿ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದು, ಇದರಿಂದ ಅತ್ಯಧಿಕ ಮಳೆ ಸೇರಿದಂತೆ ಎಲ್ಲಾ ರೀತಿಯ ಹವಾಮಾನ ಸ್ಥಿತಿಗತಿಗಳನ್ನು ಅರಿಯಲು ಹಾಗೂ ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು. ಈ ಹವಾಮಾನ ಮುನ್ಸೂಚನಾ ವ್ಯವಸ್ಥೆ, ಸಣ್ಣ ಪ್ರಮಾಣದ ಹವಾಮಾನ ಸ್ಥಿತಿಗತಿಗಳನ್ನು ಅತ್ಯಂತ ನಿಖರವಾಗಿ ಅರಿಯಲು ಸಹಾಯ ಮಾಡುತ್ತದೆ. ಈ ವ್ಯವಸ್ಥೆಯನ್ನು 2022ರಿಂದ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಮುಂಗಾರು ಮಳೆಯ ಮೇಲೆ ನಿಗಾ ಇರಿಸುವುದು. ಚಂಡಮಾರುತಗಳನ್ನು ಅರಿಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಕೃಷಿ, ವಿಪತ್ತು ನಿರ್ವಹಣೆ, ಪ್ರವಾಹ ಮುನ್ನೆಚ್ಚರಿಕೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.
ಭಾರತ್ ಮುನ್ಸೂಚನೆ ವ್ಯವಸ್ಥೆ ಎಂದರೇನು: ಇದು ವಿಶ್ವದ ಅತ್ಯುನ್ನತ ಹವಾಮಾನ ಮುನ್ಸೂಚನೆಯ ಮಾದರಿ. ಭಾರತದ ಹೊಸ ಹೈ-ರೆಸಲ್ಯೂಶನ್ BSF ಮಾದರಿಯು ಪಂಚಾಯತ್ ಮಟ್ಟದಲ್ಲಿ 6-ಕಿಮೀ ನಿಖರತೆಯ ಮುನ್ಸೂಚನೆಗಳನ್ನು ನೀಡುತ್ತದೆ, ಇದು ಯುರೋಪಿಯನ್, ಬ್ರಿಟಿಷ್ ಮೊದಲಾದ ಹವಾಮಾನ ವ್ಯವಸ್ಥೆಗಳನ್ನು ನಿಖರತೆಯಲ್ಲಿ ಮೀರಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಈಗ ಬಿಡುಗಡೆ ಮಾಡಿದ ವಿಶ್ವದ ಮೊದಲ ಸ್ಥಳೀಯ ಹೈ-ರೆಸಲ್ಯೂಶನ್ ಹವಾಮಾನ ಮಾದರಿ, ಭಾರತ್ ಮುನ್ಸೂಚನೆ ವ್ಯವಸ್ಥೆ(BSF) ಅನ್ನು ಪುಣೆಯ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಅಭಾವದಿಂದ ಕಟ್ಟಡ ನಿರ್ಮಾಣ…
ಮಳೆಯ ಕಾರಣದಿಂದ ಅಡಿಕೆಗೆ ಬಾಧಿಸಿದ ಕೊಳೆರೋಗದ ತೀವ್ರತೆ ಹಾಗೂ ನಷ್ಟದ ಬಗ್ಗೆ ಅಖಿಲ…
ಅಡಿಕೆಗೆ ಕೊಳೆರೋಗ ವ್ಯಾಪಕವಾಗುತ್ತಿದೆ. ವಾರದ ಮೊದಲು ಕೆಲವು ಕಡೆ ಮಾತ್ರವೇ ಅಡಿಕೆಗೆ ಕೊಳೆರೋಗ…
ಅರಣ್ಯ ಅಥವಾ ಕಾಡು ಎಂದರೆ ದಟ್ಟವಾದ ಮರಗಳ ಸಮೂಹ ಮಾತ್ರವಲ್ಲ, ಅರಣ್ಯ ಎಂದರೆ…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇಲ್ ಸ್ತರ ಹಾಗೂ ಮಧ್ಯಮ…