ಭಾರತ್ ಜೋಡೋ | ಪೇಸಿಎಂ ಟೀ ಶರ್ಟ್, ಧ್ವಜ ಬಳಸಿ ಯುವಕನ ಯಾತ್ರೆ | ಕೇಸು ದಾಖಲು |

Advertisement
Advertisement

ರಾಜ್ಯದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್, ಧ್ವಜ ಹಿಡಿದು ಯಾತ್ರೆ ನಡೆಸಿದ ಯುವಕನ ಮೇಲೆ ಎಫ್‌ಐಆರ್ ದಾಖಲಾಗಿದೆ.

Advertisement

ವಿಜಯಪುರ ಮೂಲದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಜೋಡೋ ಯಾತ್ರೆಯಲ್ಲಿ ಈತ ಪೇಸಿಎಂ ಎಂಬ ಟೀ ಶರ್ಟ್ ಹಾಗೂ ಧ್ವಜ ಹಿಡಿದು ಯಾತ್ರೆ ಮಾಡಿದ್ದು, ಬಿಜೆಪಿ 40% ಸರ್ಕಾರ, ಯುವಕರಿಗೆ ಉದ್ಯೋಗ ಕೊಡದೆ ಬೀದಿಪಾಲು ಮಾಡುತ್ತಿದೆ. ಈ ಸರ್ಕಾರವನ್ನು ತೆಗೆದೇ ತೆಗೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದರು.

Advertisement
Advertisement

ಗುಂಡ್ಲುಪೇಟೆ ಪುರಸಭಾ ಸದಸ್ಯ ಕಿರಣ್ ಗೌಡ ಹಾಗೂ ಸುರೇಶ್ ಎಂಬುವರು ಚಾಮರಾಜನಗರ ಸಿಇಎನ್ ಠಾಣೆಗೆ ದೂರು ನೀಡಿದ್ದು, ರಾಜ್ಯದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವ ಈ ಯುವಕನನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಬಗ್ಗೆ ಯುವಕನ ವಿರುದ್ಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಭಾರತ್ ಜೋಡೋ | ಪೇಸಿಎಂ ಟೀ ಶರ್ಟ್, ಧ್ವಜ ಬಳಸಿ ಯುವಕನ ಯಾತ್ರೆ | ಕೇಸು ದಾಖಲು |"

Leave a comment

Your email address will not be published.


*