ಹಲವು ಸಲ ಕೃಷಿ ಕ್ರಾಂತಿಯ ಬಗ್ಗೆ ಮಾತುಗಳು ಕೇಳುತ್ತವೆ. ಒಂದು ಸಂಸ್ಥೆಯೂ ಕೃಷಿ ಕ್ರಾಂತಿಗೆ ಕಾರಣವಾಗುತ್ತದೆ. ಕೃಷಿಕ ತಾನು ಬೆಳೆದ ಹಾಗೂ ತನಗೆ ನೆರವಾದ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾನೆ. ಇದಕ್ಕೊಂದು ಉದಾಹರಣೆ ಸುಳ್ಯದಲ್ಲಿ ಕಂಡಿತು. ಸುಳ್ಯದ ಭಾರತ್ ಆಗ್ರೋ ಸರ್ವೀಸಸ್ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದು. ನಡು ಮಧ್ಯಾಹ್ನದಿಂದ ತಡರಾತ್ರಿಯವರೆಗೆ ನಡೆದ ಕಾರ್ಯಕ್ರಮದ ಸಭಾಭವನದ ತುಂಬಾ ಕೃಷಿಕರು ಭಾಗವಹಿಸಿದ್ದರು. ಇದು ಕೃಷಿಕ ಹಾಗೂ ಒಂದು ಸಂಸ್ಥೆಯ ನಡುವಿನ ಒಡನಾಟ-ಸಂಬಂಧ.
ಸುಳ್ಯದ ಆಗ್ರೋ ಸರ್ವೀಸಸ್ ಸಂಸ್ಥೆ ಆರಂಭವಾಗಿ 50 ವರ್ಷಗಳು ಸಂದವು. ಸುಳ್ಯ ಕೃಷಿ ಪ್ರದಾನವಾದ ಊರು. ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದೆ. ಸುಮಾರು 50 ವರ್ಷಗಳ ಹಿಂದೆ ಸುಳ್ಯ ಇನ್ನಷ್ಟು ಗ್ರಾಮೀಣ ಭಾಗದಿಂದಲೇ ಇತ್ತು, ಮೂಲಭೂತ ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಇತ್ತು. ಇಂದು ಬೆಳೆಯುತ್ತಾ ಸಾಗಿದೆ, ಅದರಲ್ಲಿ ಕೃಷಿಯೂ ಬೆಳೆದಿದೆ. ಉಳಿದೆಲ್ಲಾ ಬೆಳವಣಿಗೆಗೆ ಇಲ್ಲಿನ ವಿವಿಧ ಸಾಮಾಜಿಕ ಮುಖಂಡರು ಕೆಲಸ ಮಾಡಿದ್ದರೆ ಕೃಷಿ ಬೆಳವಣಿಗೆಗೆ ಆಗ್ರೋ ಸಂಸ್ಥೆ ಕಾರಣವಾಗಿದೆ. ಹೊಸ ಹೊಸ ಪ್ರಯೋಗಗಳನ್ನು ಕೃಷಿಕರಿಗೆ ಪರಿಚಯಿಸಿದೆ. ಹೀಗಾಗಿ ರೈತರ ಒಡನಾಟದ ಸಂಸ್ಥೆಯಾಗಿದೆ. ಹೀಗಾಗಿ ಈಗ 50 ನೇ ವರ್ಷದ ಸಂದರ್ಭ ಆಗ್ರೋ ಸಂಸ್ಥೆಯ ಮಾಲಕ ರಾಮಚಂದ್ರ ಪಿ ಅವರ ಆಹ್ವಾನವನ್ನು ಗೌರವಿಸಿ ಅನೇಕ ರೈತರು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಭಾಗವಹಿಸಿದರು.
ಇಡೀ ಕಾರ್ಯಕ್ರಮ ಆರಂಭವಾದ್ದೇ ಕೃಷಿ ಚಿಂತನದ ಮೂಲಕ. ಇಂದಿನ ಆವಶ್ಯಕತೆಗಳಲ್ಲಿ ಒಂದಾದ ನೀರಾವರಿ ವಿಷಯವೇ ಚಿಂತನದ ವಿಷಯವಾಗಿತ್ತು. ಮಧ್ಯಾಹ್ನ 3.30 ಕ್ಕೆ ಈ ಕಾರ್ಯಕ್ರಮ ಆರಂಭ. ಕೃಷಿ ಕಾರ್ಯಕ್ರಮ ಎಂದರೆ ಕೃಷಿಕರು ಸೇರುವುದು ಕಷ್ಟ. ತುರ್ತು ಕಾರ್ಯದ ನಡುವೆ ಆಸಕ್ತ ಕೃಷಿಕರು ಬರುತ್ತಾರೆ. ಹಾಗಾಗಿ ಎಲ್ಲೆಡೆಯೂ ಕೃಷಿ ಗೋಷ್ಟಿಗಳು ವಿಫಲ ಕಾಣುತ್ತದೆ. ಆದರೆ ಆಗ್ರೋ ಸುವರ್ಣ ಸಂಭ್ರಮದಲ್ಲಿ ಕೃಷಿ ಗೋಷ್ಟಿಗೇ ಕೃಷಿಕರು ಭಾಗವಹಿಸಿ ಆಸಕ್ತಿಯಿಂದ ಯುವ ಸಂಪನ್ಮೂಲ ವ್ಯಕ್ತಿಗಳ ಅನುಭವ ಕೇಳುತ್ತಿದ್ದರು. ನೀರಾವರಿ ವಿಷಯವೂ ಇಂದು ಕೃಷಿಕರಿಗೆ ಅಗತ್ಯವಾದ ವಿಷಯವೂ ಆಗಿದೆ. ಹೀಗಾಗಿ ಸಂಸ್ಥೆಯೊಂದು ಕೃಷಿಕರ ಪರವಾಗಿ ಹೇಗೆ ಬೆಳೆಯುಬಹುದು ಎನ್ನುದಕ್ಕೂ ಇದೊಂದು ಮಾದರಿ ಕಾರ್ಯಕ್ರಮ.
ಕೃಷಿಕರ ಸಂಸ್ಥೆಯೊಂದು ರೈತಪರವಾಗಿ ಹೇಗೆ ಬೆಳೆಯಬಹುದು ಹಾಗೂ ಆ ಸಂಸ್ಥೆಯ ಪ್ರೀತಿಗೆ ಅಷ್ಟೂ ಜನ ಕಾರ್ಯಕ್ರಮಕ್ಕ ಬರಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಉದ್ಯಮ ಬೆಳೆಯಬೇಕು, ಕೃಷಿಯೂ ಬೆಳೆಯಬೇಕು. ಇದೆರಡೂ ಜೊತೆಯಾಗಿ ಸಾಗಿದರೆ ಮಾತ್ರವೇ ಅಲ್ಲಿ ಪ್ರೀತಿಯೂ ಬೆಳೆಯುತ್ತದೆ. ಅಂತಹದ್ದೊಂದು ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು. ಸುಳ್ಯದ ಕೃಷಿ ಬೆಳೆವಣಿಗೆಯಲ್ಲಿ ಇಂತಹ ಹಲವು ಸಂಸ್ಥೆಗಳ ಪಾಲು ಇದೆ ಎನ್ನುವುದೂ ಸತ್ಯ. ಆಗ್ರೋದಂತಹ ಸಂಸ್ಥೆಗಳು 50 ವರ್ಷಗಳಿಂದ ಕೃಷಿಕರ ಗೂಗಲ್ ಆಗಿತ್ತು. ಏನು ಕೇಳಿದರೂ ಅಲ್ಲಿದೆ ಎನ್ನುವುದೇ ಕೃಷಿಕರ ನಂಬಿಕೆಯಾಗಿತ್ತು, ಅದೇ ವಿಶ್ವಾಸ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…