ಸುಳ್ಯ ತಾಲೂಕಿನ ನೀರಾವರಿ ಕೃಷಿ ಪಂಪ್ ಸೆಟ್ಟುಗಳ 2003 ರಿಂದ 2008 ರ ಅವಧಿಯ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸುಳ್ಯ ತಾಲೂಕಿನ ಭಾರತೀಯ ಕಿಸಾನ್ ಸಂಘದ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಇವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಕೃಷಿ ಪಂಪ್‌ಸೆಟ್ಟುಗಳು ಬಾಕಿಯನ್ನು ದ ಕ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮನ್ನಾ ಮಾಡಲಾಗಿತ್ತು. ಹಾಗಿದ್ದರೂ ಸುಳ್ಯ ತಾಲೂಕಿನ ಕೃಷಿ ಪಂಪುಸೆಟ್ಟುಗಳ ಬಾಕಿ ಮನ್ನಾ ಆಗಿರದೆ, ಈಗಲೂ ಹಳೆ ಬಾಕಿ ಎಂದು ನಮೂದಾಗುತ್ತಿತ್ತು.ಇದರಿಂದ ಕೃಷಿಕರ ಕೃಷಿ ಪಂಪ್ ಸೆಟ್ಟುಗಳ ಖಾತೆ ವರ್ಗಾವಣೆಯಾಗುವ ಸಂದರ್ಭ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಭಾ ಕಿ ಸಂ ಈ ಬಾಕಿಯನ್ನು ಸುಳ್ಯ ತಾಲೂಕಿನಲ್ಲೂ ಮನ್ನಾ ಮಾಡುವಂತೆ ಮನವಿ ಮಾಡಿದೆ.ಮನವಿ ನೀಡಿದ ವೇಳೆ ಸಚಿವರು ಮೆಸ್ಕಾಂ ಆಢಳಿತ ನಿರ್ದೇಶಕರ ಜೊತೆ ವಿಮರ್ಶಿಸಿ ಮನ್ನಾ ಮಾಡುವ ಭರವಸೆಯನ್ನು ನೀಡಿದರು. ಇದೇ ವೇಳೆ ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ಕುಳಾಯಿತ್ತೋಡಿಯಲ್ಲಿ ಸ್ಥಾಪನೆಯಾಗಬೇಕಾದ 33 ಕೆ. ವಿ. ಉಪ ವಿದ್ಯುತ್ ಕೇಂದ್ರದ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷರಾದ ಎನ್. ಜಿ. ಪ್ರಭಾಕರ ರೈ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ. ಜಿ. ಎಸ್. ಎನ್. ಪ್ರಸಾದ್, ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಕಾರ್ಯದರ್ಶಿ ಬಿ. ಸಾಯಿಶೇಖರ್, ಖಜಾಂಚಿ ಕೆ. ಸೀತಾರಾಮ್, ನಿಕಟಪೂರ್ವ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಭಟ್ ನೆಟ್ಟಾರು, ಸದಸ್ಯರಾದ ಗೋಪಾಲಕೃಷ್ಣ ಭಟ್ ಕರುವಂಕಲ್ಲು, ಗಬ್ಲಡ್ಕ ಸದಾಶಿವ ಭಟ್, ಯತಿರಾಜ್ ಓಣಿಯಡ್ಕ ಭಾಗವಹಿಸಿದ್ದರು.
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್‌ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…