ಭಾವಗೀತೆ | ತಂಗಾಳಿ ತಂದ ಬಯಕೆ

December 1, 2020
10:59 PM
ಮಂದ ಮಾರುತ ಬೀಸಿ ಬಂದಿದೆ
ತಂಪು ಹಿತವನು ನೀಡುತ
ಬೆಂದ ಮನಸಿಗೆ ಹಾಸ ತಂದಿದೆ
ಇಂಪು ಗಾನವ ಹಾಡುತ….. ||
ಸುಪ್ತವಾಗಿರೊ ಬಯಕೆ ಉದಿಸಿದೆ
ಹಸ್ತ ಚಾಚುತ ನಿನ್ನೆಡೆ
ಸಪ್ತ ಸ್ವರಗಳ ನಲಿಸಿ ಮೆರೆದಿದೆ
ಚಿಂತೆ ಮರೆಸುತ ಮುನ್ನಡೆ…. ||
ಬಾನಿನಂಚಲಿ ಮೋಡ ಸರಿಯಲು
ಮನಸು ಬೇಗುದಿ ಕಳೆದಿದೆ
ತೇಲಿ ಬಂದಿಹ ಬಾನ ಹಕ್ಕಿಯು
ಕನಸು ಚಿತ್ರಿಸಿ ಹೋಗಿದೆ…. ||
ನಾಳೆ ಬಾಳಿನ ಸುಖವ ಕಾಣುತ
ಮನಕೆ ಸಂತಸ ತಂದಿದೆ
ಹಾಳೆ ಸಾಲಲಿ ಒಲವ ತುಂಬುತ
ಒನಪು ದಿನವಿದು ಎಂದಿದೆ… ||
ಬೇಲಿ ಇಲ್ಲದ ಬದುಕು ಎನ್ನದು
ಬಂಧಿಯಾಗುವ ಆಸೆಯು
ತೋಳ ಚಾಚಲು ಮುಂದೆ ಬರುವೆಯ
ಸೇರಿಕೊಳ್ಳುವ ಬಯಕೆಯು… ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್
March 28, 2026
9:12 AM
by: ದ ರೂರಲ್ ಮಿರರ್.ಕಾಂ
ಸಂಸ್ಥೆಯ ನಿಜವಾದ ಶಕ್ತಿ : ಮಾನವ ಸಂಪನ್ಮೂಲವೇ ಯಶಸ್ಸಿನ ಮೂಲಾಧಾರ
March 27, 2026
2:05 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror