MIRROR FOCUS

ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ : ವಿಶ್ವಕಪ್‌ನಲ್ಲಿ ಜನ್ಮದಿನದಂದೇ ಸೆಂಚುರಿ ಭಾರಿಸಿದ ಕೊಹ್ಲಿ

Share

ಭಾರತೀಯರ ಸಂಭ್ರಮಕ್ಕೆ ಕಾರಣವಾಯ್ತು ಇಂದಿನ ವಿಶ್ವಕಪ್‌ ಪಂದ್ಯ. ಕೋಲ್ಕತ್ತಾದ ಈಡನ್ ಗಾರ್ಡನ್(Eden Garden) ಮೈದಾನದಲ್ಲಿ ನಡೆದ ಭಾರತ(India)ಹಾಗೂ ದಕ್ಷಿಣ ಆಫ್ರಿಕಾ(South Africa) ನಡುವಿನ ಹೈವೋಲ್ಟೇಜ್ ಕದನ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಭಾರತದ ಹುಲಿಗಳ ಅಬ್ಬರಕ್ಕೆ ನಡುಗಿದ ಹರಿಣಗಳು ಕೇವಲ 83 ರನ್​ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 243 ರನ್​ಗಳಿಂದ ಸೋಲು ಕಂಡಿದೆ.

ಕಿಂಗ್ ಕೊಹ್ಲಿ (Virat Kohli) ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೊಸ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ (W0rld Cup) ಪಂದ್ಯದಲ್ಲಿ ಬರ್ತ್ಡೇಯಂದೇ ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ತನ್ನ ವೃತ್ತಿ ಬದುಕಿನ 49ನೇ ಏಕದಿನ ಶತಕ ದಾಖಲಿಸಿದರು. 101 ರನ್ ಗಳಿಸಿದ ಕೊಹ್ಲಿ ಅಜೇಯರಾಗಿಯೇ ಉಳಿದರು. ಅಲ್ಲದೆ ವಿಶ್ವಕಪ್‌ನಲ್ಲಿ 4ನೇ ಸೆಂಚುರಿ ಬಾರಿಸಿದರು. ಈ ಮೂಲಕ 49 ಶತಕ ಬಾರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು.

The high-voltage battle between India and South Africa at the Eden Gardens in Kolkata ended in a one-sided affair. Harinas, shaken by the roar of the Indian Tigers, were bowled out for just 83 runs and lost by a total of 243 runs.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!

ನಿಯಮಗಳು ಎಷ್ಟೇ ಇದ್ದರೂ ಹಲವು ಸಂದರ್ಭದಲ್ಲಿ ಅಭದ್ರತೆಯೂ ಅಷ್ಟೇ ಇದೆ...ಸಹಕಾರಿ ಸಂಘದಲ್ಲಿ ಇದೆಲ್ಲಾ…

3 hours ago

ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |

ಕುಂಭಮೇಳದ ಪಯಣದ ಅನುಭವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರು ಕಳೆದ 8…

4 hours ago

3 ರಾಶಿಗಳಿಗೆ ಅದೃಷ್ಟ, ರಾಜಯೋಗ ಮತ್ತು ಸಂಪತ್ತಿನ ದೃಷ್ಟಿಯಿಂದ ಅತ್ಯುತ್ತಮ ಸಮಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ ಮರಗಳನ್ನು ಕಟಾವು ಮಾಡಲು ಅನುಮತಿ | 2 ವರ್ಷದಲ್ಲಿ 189241 ಮರ ಕಡಿಯಲು ಅನುಮತಿ |

ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ, ಬೀಟೆ, ರೈನ್, ಫೆಲೋಫಾರಂ, ಹುಣಸೆ, ಬೇವು,…

12 hours ago

ಮಹಾಕುಂಭದ ವೇಳೆ ಗಂಗಾ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು |

ಮಹಾ ಕುಂಭಮೇಳದಲ್ಲಿ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಕೇಂದ್ರ ಪರಿಸರ…

12 hours ago

ರಾಜ್ಯದಲ್ಲಿ ಮುಂದುವರಿದ ಒಣಹವೆ | ಕರಾವಳಿಯಲ್ಲಿ ಬಿಸಿ ತಾಪಮಾನ ಸಾಧ್ಯತೆ | ಸಿಂಧನೂರಿನಲ್ಲಿ 41.4 ಡಿಗ್ರಿ ಉಷ್ಣಾಂಶ ದಾಖಲು

ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಬಿಸಿ ತಾಪಮಾನವಿರುವ ಸಾಧ್ಯತೆಯಿದೆ ಎಂದು ಹವಾಮಾನ…

12 hours ago