Advertisement
ಅನುಕ್ರಮ

ಮತಾಂಧತೆಯ ಅಮಲು ಆತ್ಮಾಹುತಿಯ ತೆವಲು

Share
ಇದೇ 2025ರ ನವೆಂಬರ್ 10ರಂದು ಸಂಜೆ  ಸೂರ್ಯಾಸ್ತಮಾನದ ಹೊತ್ತಿಗೆ ದೆಹಲಿಯ ಕೆಂಪುಕೋಟೆಯ ಸಮೀಪದ ಮೆಟ್ರೊ ಸ್ಟೇಶನ್ ಬಳಿ ಒಂದು ಅಸಾಧಾರಣ ಸ್ಫೋಟ ಸಂಭವಿತು. ವಾಹನಗಳ ನಡುವೆ ವಿಧಾನವಾಗಿ ತೆವಳುತ್ತ ಬಂದ ಕಾರು ಅದನ್ನು ಚಲಾಯಿಸುತ್ತಿದ್ದವನ ಸಹಿತ ಸ್ಫೋಟಗೊಂಡಿತು. ಆ ಹೊತ್ತಿನಲ್ಲಿ ಅಲ್ಲಿದ್ದವರಲ್ಲಿ ಹತ್ತು ಮಂದಿ ಅಮಾಯಕರ ದೇಹಗಳು ಛಿದ್ರ ಛಿದ್ರವಾಗಿ ಪರಿಚಯವೇ ಸಿಗದಂತೆ ಎಲ್ಲೆಲ್ಲಿಗೋ ಎಸೆಯಲ್ಪಟ್ಟುವು. ಇನ್ನು ಅನೇಕರು ವಿವಿಧ ಮಟ್ಟದಲ್ಲಿ ಗಾಯಗೊಂಡು ಆಸ್ಪತ್ರೆಗಳಿಗೆ ಸೇರಿಸಲ್ಪಟ್ಟರು. ಅದೆಷ್ಟೋ ಮನೆಗಳಲ್ಲಿ ಹೊರಗೆ ಹೋದವರು ಇನ್ನು ಯಾಕೆ ಹಿಂದಿರುಗಿಲ್ಲವೆಂಬ ನಿರೀಕ್ಷೆಯಿಂದ ಕಾದಿದ್ದರು. ದೂರದರ್ಶನಗಳಲ್ಲಿ ವಾರ್ತೆಗಳು ಬಿತ್ತರವಾಗುತ್ತಿದ್ದರೂ ಸ್ಫೋಟಕ್ಕೆ ಬಲಿಯಾದವರ ಮಾಹಿತಿಗಳು ತಿಳಿಯುವಂತಿರಲಿಲ್ಲ. ಆದರೆ ದೇಶದ ಕೇಂದ್ರ ಸ್ಥಾನದಲ್ಲಿ ನಡೆದ ವಿಸ್ಫೋಟದ ಸುದ್ದಿ ವ್ಯಾಪಕವಾಗಿ ಬಿತ್ತರವಾಗಿತ್ತು. ಇಂತಹ ಘಾತಕ ಸುದ್ದಿಯು ದೇಶದ ಪ್ರಜೆಗಳನ್ನು ತಲ್ಲಣಗೊಳಿಸಿತ್ತೆಂಬುದರಲ್ಲಿ ಅತಿಶಯೋಕ್ತಿ ಇಲ್ಲ.
ಸ್ಫೋಟ ಸಂಭವಿಸಿದ ಸೋಮವಾರ ರಾತ್ರಿ ಪ್ರಧಾನಿಯವರಿಗೂ, ಗೃಹಸಚಿವರಿಗೂ, ಆಸ್ಪತ್ರೆಯವರಿಗೂ, ವಾರ್ತಾವಾಹಿನಿಗಳ ಸುದ್ದಿಗ್ರಾಹಕರಿಗೂ, ಟಿವಿ ವೀಕ್ಷಕರಿಗೂ ನಿದ್ರೆ ಇಲ್ಲದೆ ಕಳೆಯಿತು. ತಕ್ಷಣ ತನಿಖೆ ಹಾಗೂ ಅಪರಾಧಿಗಳ ಪತ್ತೆ ಕಾರ್ಯ ಆರಂಭವಾದರೂ ಉದ್ವೇಗದಿಂದ ಎಡವುವಂತಿರಲಿಲ್ಲ. ಇದು ಯೋಜಿತವೋ ಅಥವಾ ಭಯದಿಂದ ಉಂಟಾದ ಆಕಸ್ಮಿಕವೋ ಎಂಬ ಒಂದು ಸ್ಪಷ್ಟತೆಯನ್ನು ಪಡೆಯಬೇಕಾಗಿತ್ತು. ಏನಿದ್ದರೂ ಅದು ಒಂದು ಧಾಳಿಯ ಸಿದ್ಧತೆಯ ಭಾಗವಾಗಿತ್ತೆಂಬ ವಿಷಯದಲ್ಲಿ ಪ್ರಶ್ನೆಗಳು ಉಳಿದಿಲ್ಲ. ಒಂದು ವೇಳೆ ಕಾರಿನಲ್ಲಿ ಸ್ಫೋಟಕವನ್ನು ಒಯ್ಯುತ್ತಿದ್ದ ವೈದ್ಯ ಡಾ. ಉಮರ್ ಮಹಮ್ಮದ್ ಸಿಕ್ಕಿಬಿದ್ದು ಸಾಯುವ ಭಯದಿಂದ ಬಟನ್ ಒತ್ತಿದ್ದರೂ ಆತನೊಡನೆ ಇದ್ದ ವಸ್ತುಗಳು ಎಲ್ಲಿಗಾದರೂ ವಿನಾಶಕ್ಕಾಗಿಯೇ ಇದ್ದವುಗಳೆಂಬುದರಲ್ಲಿ ಎರಡು ಮಾತಿಲ್ಲ.
ಸುಟ್ಟು ಕರಕಲಾಗಿದ್ದ ಕಾರು, ಅಲ್ಲಲ್ಲಿ ಬಿದ್ದ ವಿವಿಧ ವಾಹನಗಳ ಬಿಡಿಭಾಗಗಳು, ಯಾರ್ಯಾರದೋ ಶರೀರಗಳ  ತುಂಡುಗಳು ಹೀಗೆ ಭಯಾನಕವಾಗಿದ್ದ ಯುದ್ಧಕ್ಷೇತ್ರದಂತಿದ್ದ ಆ ಸ್ಥಳದಲ್ಲಿ ಅಪರಾಧದ ಕುರುಹುಗಳನ್ನು ಹುಡುಕಲು ಅಪರಾಧ ನಿಗ್ರಹದಳ ಹಾಗೂ ಓIಂ ತಂಡಗಳು ತೊಡಗಲು ತಡ ಮಾಡಲಿಲ್ಲ. ಮುಂದೆ ಯೋಜಿತ ಅಪರಾಧವೆಸಗುವ ಸಿದ್ಧತೆಗಳ ಕುರುಹುಗಳು ದೊರೆಯುತ್ತ ಹೋದಂತೆ ತನಿಖೆಯ ವ್ಯಾಪ್ತಿಯು ವಿಸ್ತರಿಸುತ್ತಿದೆ. ಹಾಗೆಯೇ ದುಷ್ಟ ಚಿಂತನೆಯ ದ್ರೋಹಿಗಳ ಜಾಡು ಒಂದೊಂದಾಗಿ ಪತ್ತೆಯಾಗುತ್ತಿದೆ.
ಪ್ರಸ್ತುತ ಸ್ಫೋಟವು ಘಟಿಸಿದ್ದರ ಕೆಲವೇ ಗಂಟೆಗಳ ಮೊದಲು ಜಮ್ಮು ಕಾಶ್ಮೀರ ಪೊಲೀಸರು ಹರ್ಯಾನಾದ ಫರೀದಾಬಾದ್‍ನ ಒಂದು ವಾಸ್ತವ್ಯದ ಮನೆಯಲ್ಲಿ 29 ಕ್ವಿಂಟಾಲ್ ನಷ್ಟು ಸ್ಪೋಟಕಗಳನ್ನು ಪತ್ತೆ ಹಚ್ಚಿ ಅಪರಾಧಿಗಳನ್ನು ವಶಕ್ಕೆ ಪಡೆದಿದ್ದರು. ಫರೀದಾಬಾದ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್‍ನ್ನು ವಶಪಡಿಸಿದ ಬಳಿಕ ಪ್ರಮುಖ ಆರೋಪಿಗಳಾದ ಡಾ ಮುಜಮ್ಮಿಲ್ ಶಕೀಲ್ ಮತ್ತು ಡಾ ಅದಿಲ್ ರಾಥರ್ ಇವರನ್ನು ಬಂಧಿಸಲಾಯಿತು. ಅವರಂತೆ ತಾನು ಸೆರೆ ಸಿಕ್ಕಬಾರದೆಂದು ಡಾ. ಉಮರ್ ಮಹಮ್ಮದ್ ತನ್ನಲ್ಲಿದ್ದ ಸ್ಫೋಟಕವನ್ನು ಬೇರೆಡೆಗೆ ಸಾಗಿಸುತ್ತಿದ್ದನೋ ಏನೋ ಎಂಬ ಊಹೆಗೆ ಇನ್ನು ಉತ್ತರ ಸಿಕ್ಕುವುದು ಕಷ್ಟ.
ಪ್ರಪಂಚದ ಇಸ್ಲಾಮಿಕರಣವೇ ಮುಸ್ಲಿಂ ಧರ್ಮದ ಗುರಿ. ಅದಕ್ಕಾಗಿಯೇ ಯುರೋಪಿನಲ್ಲಿ ಕ್ರಿಶ್ಚಿಯನ್  ಧರ್ಮೀಯರ  ಮೇಲೆ ನೂರು ವರ್ಷಗಳ ಯುದ್ಧ ನಡೆಯಿತು. ಆದರೆ ಅದು ಯಶಸ್ವಿಯಾಗದಷ್ಟು ಬಲವಾಗಿ ಕ್ರಿಶ್ಚಿಯನ್ ಧರ್ಮ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಯೂರಿದೆ. ಏಕೆಂದರೆ ಧರ್ಮ ಪ್ರಸಾರದ ಗೀಳು ಕ್ರಿಶ್ಚಿಯನ್ನರಿಗೂ ಇದೆ. ತಾವು ಇಲ್ಲದಲ್ಲಿ ದೇವರು-ಧರ್ಮ ಇಲ್ಲವೆಂಬ ತರ್ಕ ಈ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮ ಪ್ರಸಾರಕರಲ್ಲಿದೆ. ತಾವು ಹೋದಲ್ಲೆಲ್ಲ ಧರ್ಮಪ್ರಸಾರ ಮಾಡಿ ಧಾರ್ಮಿಕ ಆಕ್ರಮಣ ಮಾಡುವ ಗೀಳು ಈ ಎರಡೂ ಧರ್ಮಗಳಿಗೆ ಇದೆ. ಹಾಗಾಗಿ ಮತಾಂತರಕ್ಕೆ ತೊಡಗುತ್ತಾರೆ. ಕ್ರಿಶ್ಚಿಯನ್ನರು ಗುಪ್ತಗಾಮಿನಿಯಂತೆ ಬಡವರಿಗೆ ಆಮಿಶಗಳನ್ನು ಒಡ್ಡಿ ಮತಾಂತರ ಮಾಡುತ್ತಾರೆ. ಮುಸ್ಲಿಮರು ಖಡ್ಗದ ಮೊನೆಯಲ್ಲಿ ಮಾಡುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಕಾಶ್ಮೀರ ಫೈಲ್ಸ್, ಬೆಂಗಾಲ್ ಫೈಲ್ಸ್, ಕೇರಳ ಸ್ಟೋರಿ ಮುಂತಾದುವು ಮುಸ್ಲಿಮರ ಧರ್ಮಾಂಧತೆಯ ಬಣ್ಣ ಬಯಲು ಮಾಡಿವೆ. ಭಾರತದಲ್ಲಿ ಹಿಂದೂ ಧರ್ಮ ಮತ್ತು ಜ್ಞಾನದ ಕಣಜಗಳಿರುವುದೇ ಮತಾಂತರ ಮಾಡುವವರಿಗೆ ಸವಾಲು. ಹಾಗಾಗಿ ಇಲ್ಲಿಯ ದೇವಾಲಯಗಳ ನಾಶ, ನಂಬಿಕೆ-ಆಚರಣೆಗಳ ನಾಶ, ಜೀವನ  ಪದ್ಧತಿಯ ನಾಶ ಮತ್ತು ಇದಕ್ಕಾಗಿ ಆಸ್ತಿಗಳ ನಾಶ ಮಾಡಿಯಾದರೂ ಇಸ್ಲಾಂ ಧರ್ಮದ ವಿಸ್ತರಣೆ ಮಾಡುವ ಗೀಳನ್ನು ಅವರು ಬಿಡುವುದಿಲ್ಲ. ಎಲ್ಲಿ ಧರ್ಮಾನುಷ್ಟಾನಗಳಿವೆಯೋ ಅಲ್ಲಿ ನಮಗೆ ಕೆಲಸವಿಲ್ಲ ಎಂದು ಮತಾಂತರವಾದಿಗಳು ತಿಳಿಯುವುದಿಲ್ಲ. ಬದಲಾಗಿ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿ ಮಾಡಲು ಹಿಂದೂ ಧರ್ಮವನ್ನೇ ನಿರ್ನಾಮ ಮಾಡಬೇಕೆಂಬ ಗುರಿಯು ಇಸ್ಲಾಂ ಮೂಲಭೂತವಾದಿಗಳದ್ದಾಗಿದೆ. ಇದಕ್ಕೆ ಅವರು ಮಹಿಳೆಯರನ್ನು ಮತ್ತು ಮಕ್ಕಳನ್ನು ಬಳಸಿಕೊಳ್ಳುವುದು, ಸೈನ್ಯದೊಳಗೆ ಕ್ರಾಂತಿಗಾಗಿ ಯತ್ನಿಸುವುದು, ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುವುದು, ದೇವಾಲಯ ಮತ್ತು  ದೈವ ಸಂಕೇತಗಳ ನಾಶ ಇತ್ಯಾದಿಗಳನ್ನು ಕೂಡಾ ಮಾಡಲು ಹೇಸುವುದಿಲ್ಲ. ಸದ್ಯ ಯುನಿವರ್ಸಿಟಿಗಳಲ್ಲೂ ನುಗ್ಗಿ ಅಲ್ಲಿಯೂ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದ್ದಾರೆ.
ಮನುಷ್ಯರನ್ನು ದೈವತ್ವಕ್ಕೆ ಏರಿಸುವ ದಾರಿ ಜ್ಞಾನ ಪ್ರಸರಣವೇ ಹೊರತು ಚರ್ಚ್ ಮತ್ತು ಮಸೀದಿಗಳ ಸ್ಥಾಪನೆಯಲ್ಲವೆಂಬುದನ್ನು ವಿಶ್ವದ ಧರ್ಮಗುರುಗಳು ಹೇಳುತ್ತಿಲ್ಲ. ಭಾರತದಲ್ಲಿ ಜ್ಞಾನವೂ ಇದೆ, ಧರ್ಮಾಚರಣೆಗಳೂ ಇವೆ. ಇಲ್ಲಿರುವ ಸಾಮಾಜಿಕ ನ್ಯೂನತೆಗಳ ಪರಿಹಾರಗಳು ಇಲ್ಲೇ ಇವೆ. ಅವುಗಳನ್ನು ವಿದೇಶಗಳಿಂದಾಗಲೀ ಪರಧರ್ಮಗಳಿಂದಾಗಲೀ ಹೇರುವ ಅಗತ್ಯವಿಲ್ಲ. ಸಂದರ್ಭಗಳು ಬಂದಾಗ ಜೈನ ಧರ್ಮ, ಬೌದ್ಧ ಧರ್ಮ, ಲಿಂಗಾಯತ ಧರ್ಮ ಇತ್ಯಾದಿಗಳ ಉಗಮದ ಮೂಲಕ ಪರಿಹಾರಗಳು ಗೋಚರಿಸಿವೆ. ಬ್ರಹ್ಮ ಸಮಾಜ, ಆರ್ಯ ಸಮಾಜ, ಭಕ್ತಿ ಪಂಥ ಮುಂತಾದ ಧಾರ್ಮಿಕ ಸುಧಾರಣೆಯ ಚಳುವಳಿಗಳು ನಡೆದಿವೆ. ಹಾಗಾಗಿ ಇಲ್ಲಿ ಹೊರಗಿನಿಂದ ಅಮಲು ಏರಿಸುವ ಧರ್ಮ ಪಾಠಗಳು ಹಿಂದೂಗಳಿಗೆ ಬೇಕಾಗಿಲ್ಲ. ಕತ್ತಿಯ ಮೊನೆಯನ್ನು ಚುಚ್ಚಿ ಧರ್ಮಾಂತರದ ಪ್ರಯತ್ನಗಳು ಅಗತ್ಯವಿಲ್ಲ. ಇಷ್ಟನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮ ಪ್ರತಿಪಾದಕರು ತಿಳಿದುಕೊಂಡರೆ ಸಾಕು. ಭಾರತದಲ್ಲಿ ಹಿಂದೂ ಧರ್ಮವು ಪ್ರತಿಕ್ರಿಯಾತ್ಮಕ ರೂಪ ತಾಳಬೇಕಾಗಿಲ್ಲ.
ದೇವರ ಪರಿಕಲ್ಪನೆಯಲ್ಲಿ ಸನಾತನ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಡುವೆ ಒಂದು ಮುಖ್ಯವಾದ ಭಿನ್ನತೆ ಇದೆ. ಸ್ಥಳೀಯ ಮುಸ್ಲಿಂ ತತ್ವಜ್ಞರೊಡನೆ ಮಾತಾಡಿದಾಗ ತಿಳಿದ ವಿಷಯ ಇದು. ಇಸ್ಲಾಂನಲ್ಲಿ ಸೃಷ್ಠಿಯೆಲ್ಲವೂ ದೇವರದ್ದು. ಬೆಂಕಿ, ನೀರು, ಗಾಳಿ, ಬೆಳಕು, ಸೂರ್ಯ, ನದಿ, ಮರಗಿಡಗಳು, ಅದಿರು, ಮನುಷ್ಯರು, ಪ್ರಾಣಿಗಳು ಎಲ್ಲವೂ ದೇವರ ಸೃಷ್ಠಿ. ದೇವರಿಗೆ ಮಾತ್ರ ಅವುಗಳ ಮೇಲೆ ಅಧಿಕಾರ ಎಂಬುದು ಇಸ್ಲಾಂನ ತತ್ವ.  ದೇವರ ಸೃಷ್ಟಿಯನ್ನು ನಾವು ನಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಆದರೆ ಸನಾತನ ಚಿಂತನೆಯ ಪ್ರಕಾರ ಬೆಂಕಿ, ನೀರು, ಗಾಳಿ, ಬೆಳಕು, ಆಕಾಶ ಇವೆಲ್ಲ ಪಂಚತತ್ವಗಳು. ಮರ, ಗಿಡ, ಪ್ರಾಣಿಗಳಲ್ಲೂ, ನಮ್ಮೆದುರು ಸಿಗುವ ಪ್ರತಿ ವ್ಯಕ್ತಿಯಲ್ಲೂ ದೇವರಿದ್ದಾನೆ. ಅಂದರೆ ದೇವರು ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞ. ಹಾಗಾಗಿ ಪ್ರತಿಯೊಂದರ ರಕ್ಷಣೆ ನಮ್ಮ ಕರ್ತವ್ಯ.
ಸನಾತನ ಪರಿಕಲ್ಪನೆಯಲ್ಲಿ ನದಿಗಳು, ಬೆಟ್ಟಗಳು, ಕಲ್ಲುಗಳು, ಭೂಮಿ ಇವೆಲ್ಲವೂ ದೈವ ಸ್ವರೂಪಿಗಳಾಗಿವೆ. ಹಾಗಾಗಿ ಕಡಿಯುವುದು, ಕೊಲ್ಲುವುದು, ವಿಷ ಹಾಕುವುದು, ಸ್ಫೋಟಿಸುವುದು ಇತ್ಯಾದಿಗಳು ಹಿಂದೂ ಧರ್ಮದ ಪರಿಕಲ್ಪನೆಯಲ್ಲಿಲ್ಲ. ಅವೆಲ್ಲವೂ ಪಾಪ ಕಾರ್ಯಗಳು. ಅಂದರೆ ದೇವರ ಪ್ರೀತಿಗಾಗಿ ಇವು ಯಾವುದನ್ನೂ ನಾಶ ಮಾಡುವ ಪಾಠ ಹಿಂದೂ ಧರ್ಮದಲ್ಲಿ ಇಲ್ಲ. ಅರ್ಥಾತ್ ಯಾರನ್ನಾದರೂ ಧಾರ್ಮಿಕ ಚಿಂತನೆಯ ದಾರಿಗೆ ಸೆಳೆಯಲು ಹಿಂಸೆಯ ಅಗತ್ಯವಿಲ್ಲ. ಮನಸ್ಸನ್ನು ಪ್ರಭಾವಿಸಿದರೆ ಸಾಕು.  ಮನಸ್ಸನ್ನು ಒಲಿಸಲು ಸಾಧ್ಯವಿಲ್ಲದಿರುವಾಗ ಧಾರ್ಮಿಕ ಬೋಧನೆಯನ್ನು ನಿಲ್ಲಿಸಬೇಕು. ಆದರೆ ಇಸ್ಲಾಂನಲ್ಲಿ ಇಂತಹ ಸಂದರ್ಭದಲ್ಲಿ ಹಿಂಸೆಯನ್ನಾದರೂ ಮಾಡಿ ವ್ಯಕ್ತಿಗಳ ಧರ್ಮ ಪರಿವರ್ತಿಸಲು ಅವಕಾಶವಿದೆ. ಏಕೆಂದರೆ ಮುಸ್ಲಿಮರ ದೇವರನ್ನು ಒಪ್ಪಿಕೊಂಡಲ್ಲಿಗೆ ಧರ್ಮ ಪರಿವರ್ತನೆಯಾಗುತ್ತದೆ. ದೇವರ ಸೇವಕರಾಗಿ ಎಷ್ಟು ಹೆಚ್ಚು ಮಂದಿಯನ್ನು ತಯಾರಿಸಿದಿರೆಂದರೆ ದಯಾಮಯನಾದ ದೇವರ ಅನುಗ್ರಹ ಅಷ್ಟು ಹೆಚ್ಚಾಗಿ ಸಿಗುತ್ತದೆ ಎಂಬುದು ಅವರ ನಂಬಿಕೆ.
ಮನುಷ್ಯನ ದೇಹ, ಮನಸ್ಸು ಮತ್ತು ಆರೋಗ್ಯಗಳನ್ನು ಕಲಿತು ಕಲಿಸಬಲ್ಲ ಮತ್ತು ಚಿಕಿತ್ಸೆ ನೀಡಬಲ್ಲ ವೈದ್ಯರು ಕೂಡ ಇಂತಹ ಭಯ ಹುಟ್ಟಿಸಿಯಾದರೂ ಮತಾಂತರ ಮಾಡುವ ಆಲೋಚನೆಯನ್ನು ಏಕೆ ಮಾಡುತ್ತಾರೆ? ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಾಡಲು ಬೇಕಾದಷ್ಟು ಸೇವಾಕಾರ್ಯಗಳು ಇರುವಾಗ ಇಂತಹ ಅಮಾನವೀಯ ಕಾರ್ಯಗಳಿಗೆ ಮಂತ್ರಾಲೋಚನೆ ಮಾಡಲು ಸಮಯವನ್ನು ವ್ಯಯಿಸುತ್ತಾರಲ್ಲ; ಮುಸ್ಲಿಂ ಧರ್ಮಗುರುಗಳು ಇಂತಹ ವಿದ್ಯಮಾನಗಳು ಸಂಭವಿಸದಂತೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ. ಅಪರಾಧಿಗಳು ಸರಿಯಾದ ಮುಸ್ಲಿಮರಲ್ಲ ಎಂದು ಟಿ.ವಿ. ಚರ್ಚೆಗಳಲ್ಲಿ ಹೇಳಿ ಸಮಸ್ಯೆಯನ್ನು ಪೊಲೀಸರ ಅಂಗಳಕ್ಕೆ ಎಸೆಯುವುದು ಸರಿಯಾಗದು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

7 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

7 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

9 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

9 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

9 hours ago

ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್

ಅಧಿಕ ಎಣ್ಣೆ ಅಂಶವುಳ್ಳ ತಿಂಡಿಗಳು, ಶೇಖರಿಸಿಕೊಂಡಿರುವ ಆಹಾರಗಳ ಸೇವನೆಯು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.…

9 hours ago