ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೃತ್ಯು…! |

November 14, 2022
4:20 PM

ನಿವೃತ್ತ ಸೇನಾ ಯೋಧರೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾವನ್ನಪ್ಪಿದ ಘಟನೆ ಮಂಡ್ಯದ ಸಾತನೂರು ರಸ್ತೆಯಲ್ಲಿ ನಡೆದಿದೆ. ಸಾತನೂರಿನ ಕುಮಾರ್ (37) ಸಾವಿಗೀಡಾದ ನಿವೃತ್ತ ಯೋಧ. ಕುಮಾರ್‌ ತಮ್ಮ ತಂದೆಯ ಜೊತೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು.

ಮಂಡ್ಯದ ಹೊರ ವಲಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದರು. ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಕ್ಕೆ ಬಿದ್ದ ಯೋಧನ ಮೇಲೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಹರಿದಿದೆ. ಪರಿಣಾಮ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಾರ್‌ ಪರೀಕ್ಷೆಯೊಂದನ್ನು ಬರೆಯುವ ಸಲುವಾಗಿ ಊರಿಗೆ ಬಂದಿದ್ದರು. ನಿನ್ನೆ ಸಂಜೆ ತಂದೆಯೊಂದಿಗೆ ಸಾತನೂರಿನಿಂದ ಮಂಡ್ಯಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror