ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು, ರಥಸಪ್ತಮಿ(Ratha Saptami) ಎಂದು ಆಚರಿಸಲಾಗುತ್ತದೆ, ರಥಸಪ್ತಮಿಯ ದಿನದಂದು ಭಗವಂತ ಶ್ರೀ ಸೂರ್ಯನಾರಾಯಣನನ್ನು(Sun), ಪೂಜಿಸಲಾಗುತ್ತದೆ. ಅಲ್ಲದೇ ರಥಸಪ್ತಮಿಯ ಮತ್ತೊಂದು ವಿಶೇಷವೇನೆಂದರೆ, ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ(Temple) ಈ ದಿನ ವಿಶೇಷ ಪೂಜೆ ನಡೆಯುತ್ತದೆ.
ರಥಸಪ್ತಮಿಯು ಪಂಚಾಂಗದ ಪ್ರಕಾರ ಫೆ.15 ರಂದು ಗುರುವಾರ ಬೆಳಗ್ಗೆ ಬೆಳಿಗ್ಗೆ,10:12ರಿಂದ, ಫೆ.16 ಶುಕ್ರವಾರ ಬೆಳಿಗ್ಗೆ 08:54ರ ವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ರಥಸಪ್ತಮಿಯನ್ನು ಫೆಬ್ರವರಿ 16ರಂದು ಆಚರಿಸಲಾಗುತ್ತದೆ.
ಈ ದಿನ ಸ್ನಾನದ ಸಮಯ ಈ ರೀತಿ ಇರುತ್ತದೆ: ಬೆಳಿಗ್ಗೆ 05: 17am ರಿಂದ06:59am ರ ನಡುವೆ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿರುತ್ತದೆ, ಈ ದಿನದಂದು ಸ್ನಾನ ಮತ್ತು ದಾನಕ್ಕೆ ಮಹತ್ವವಿದೆ, ರಥಸಪ್ತಮಿಯ ಶುಭ ಯೋಗ ಈ ರೀತಿ ಇರುತ್ತದೆ, ರಥಸಪ್ತಮಿಯ ದಿನ ಮಧ್ಯಾಹ್ನ 03:18pm ರವರೆಗೆ ಬ್ರಹ್ಮ ಯೋಗವು ರೂಪುಗೊಳ್ಳುತ್ತದೆ. ಈ ದಿನ ಇಂದ್ರ ಯೋಗವು ಸಹರೂಪಗೊಳ್ಳುತ್ತದೆ. ರಥಸಪ್ತಮಿಯ ದಿನದಂದು ಭದ್ರನು ಸ್ವರ್ಗದಲ್ಲಿ ನೆಲೆಸುತ್ತಾನೆ ಮತ್ತು ಭೂಲೋಕದ ಜನರಿಗೆ ಕಲ್ಯಾಣವನ್ನು ನೀಡುತ್ತಾನೆ ಎಂದು ನಂಬಲಾಗಿದೆ.
ಪೂಜಾ ನಿಯಮ: ಅಂದು ಮುಂಜಾನೆ ಪೂರ್ಣ ಹೃದಯದಿಂದ ಸೂರ್ಯ ದೇವರಿಗೆ ನಮಸ್ಕರಿಸಿ ಪೂಜಾ ಕೋಣೆಯನ್ನು ಶುದ್ಧಗೊಳಿಸಿ ಪೂಜಾ ಸಾಮಾನುಗಳನ್ನು ಹೊಂದಿಸಿಕೊಳ್ಳಿ ಹಾಗೂ ಸೂರ್ಯದೇವನನ್ನು ಸ್ಥಾಪಿಸಿ, ಹೂವು, ಹಣ್ಣು, ಕುಂಕುಮ, ನೈವೇದ್ಯ ಎಲ್ಲವನ್ನು ಅರ್ಪಿಸಬೇಕು. ಅಲ್ಲದೆ ಕೆಂಪು ಹೂಗಳನ್ನು ನೀರಿನಲ್ಲಿ ಸೇರಿಸಿ ಅರ್ಗ್ಯವನ್ನು ಅರ್ಪಿಸಬೇಕು ಹಾಗೂ ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ ನಿಮ್ಮ ಪೂರ್ಣ ಹೃದಯದಿಂದ ಸೂರ್ಯ ಚಾಲಿಸಾ ಅಥವಾ ಸೂರ್ಯ ಕವಚವನ್ನು ಪಠಿಸಿದರೆ ಉತ್ತಮ
ಬರಹ: ಎಲ್.ವಿವೇಕಾನಂದ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…