Advertisement
ಸುದ್ದಿಗಳು

ಭಾರತೀಯ ಜನತಾ ಪಾರ್ಟಿಯಿಂದ 41ನೇ ಸ್ಥಾಪನಾ ದಿನಾಚರಣೆ | ಪಕ್ಷಗಳು ಏಕೆ ಸೋಲುತ್ತವೆ ಎಂದು ಅಡ್ವಾಣಿ ಹೇಳಿದ ಮಾತುಗಳು ಮಾರ್ಮಿಕ |

Share

ಭಾರತೀಯ ಜನತಾ ಪಾರ್ಟಿಯಿಂದ ತನ್ನ 41ನೇ ಸ್ಥಾಪನಾ ದಿನ ಆಚರಿಸಲಾಯಿತು. 1980ರ ಏಪ್ರಿಲ್ 6 ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ಜನಸಂಘದಲ್ಲಿದ್ದ ಸದಸ್ಯರು ಬಿಜೆಪಿ ಸ್ಥಾಪಿಸಿದ್ದರು.

Advertisement
Advertisement
Advertisement

ವಾಜಪೇಯಿ ಹಾಗೂ ದೀರ್ಘ ಕಾಲದಿಂದ ಅವರ ನೆರಳಿನಂತಿದ್ದ ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ  ಸೇರಿ 1984 ರಲ್ಲಿ ಎರಡು ಸ್ಥಾನದಲ್ಲಿದ್ದ ಪಕ್ಷವನ್ನು 1998ರ ವೇಳೆಗೆ 182 ಸ್ಥಾನಕ್ಕೇರುವಂತೆ ಮಾಡಿದ್ದರು. ಹಿಂದುತ್ವ ಹಾಗೂ ರಾಮ ಜನ್ಮಭೂಮಿ ಅಜೆಂಡಾ ಜೊತೆ ಮುಂದೆ ಸಾಗಿದ ಬಿಜೆಪಿ 2014ರಲ್ಲಿ ತನ್ನದೇ ಬಲದಿಂದ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತದ ರುಚಿಯನ್ನುಂಡಿತು. 2014ರಲ್ಲಿ 282 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಪಕ್ಷ, 2019ರಲ್ಲಿ 300 ಅಂಕಿಯನ್ನು ದಾಟಿ ಗೆಲುವಿನ ನಗೆ ಬೀರಿತ್ತು.

Advertisement

ಅಡ್ವಾಣಿ ತಮ್ಮ ಆತ್ಮಕಥೆ ‘ಮೇರಾ ದೇಶ್, ಮೇರಾ ಜೀವನ್'(ನನ್ನ ದೇಶ, ನನ್ನ ಜೀವನ)ದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ ಕುರಿತಾಗಿ ಇಡೀ ಒಂದು ಚಾಪ್ಟರ್ ಬರೆದಿದ್ದಾರೆ. ‘ಕಮಲವರಳಿದ್ದು, ಭಾರತೀಯ ಜನತಾ ಪಾರ್ಟಿಯ ಜನ್ಮ’ ಎಂಬ ಚಾಪ್ಟರ್‌ನಲ್ಲಿ ಯಾವ ರೀತಿ ಜನಸಂಘ  ಬಿಜೆಪಿಯಾಯಿತು ಎಂಬುವುದನ್ನು ಅಡ್ವಾಣಿ ಉಲ್ಲೇಖಿಸಿದ್ದಾರೆ.

ದಾರಿ ತಪ್ಪಿದ ರಾಜಕೀಯ ಪಕ್ಷಕ್ಕೆ ಪಾಠ ಕಲಿಸಲು ಮತದಾರ ಬಯಸಿದಾಗ, ಅದು ಹೆಚ್ಚಾಗಿ ಆ ಪಕ್ಷದ ವಿರುದ್ಧದ ಅಸಮಾಧಾನದಿಂದಾಗಿ ಆಗಿರುತ್ತದೆ- ಎಲ್‌ ಕೆ ಅಡ್ವಾಣಿ

ಅಡ್ವಾನಿ ಈ ಬಗ್ಗೆ ಬರೆಯುತ್ತಾ’ನನ್ನ ಇಡೀ ರಾಜಕೀಯ ಜೀವನದಲ್ಲಿ ನನ್ನನ್ನು ಅಚ್ಚರಿಗೊಳಿಸಿದ ಒಂದು ವಿಚಾರವೆಂದರೆ ಭಾರತೀಯ ಮತದಾರರು ಯಾವ ರೀತಿ ತಮಗಿಷ್ಟವಾದವರನ್ನು ಹೇಗೆ ಆಯ್ಕೆ ಮಾಡುತ್ತಾರೆ? ಎಂಬುವುದು. ಕೆಲವು ಬಾರಿ ಫಲಿತಾಂಶ ಊಹಿಸಬಹುದು. ಆದರೆ ಅನೇಕ ಬಾರಿ ಇದು ಸಾಧ್ಯವಿಲ್ಲ. ಭಾರತೀಯ ಮತದಾರರ ವಿಶಾಲ ವಿವಿಧತೆ ಎದುರು ಸಾಮಾನ್ಯ ಚುನಾವಣೆಯ ಫಲಿತಾಂಶವನ್ನು ಸರಿಯಾಗಿ ಊಹಿಸುವುದು ಸಾಧ್ಯವಿಲ್ಲ. ಆದರೆ ಕೆಲ ಬಾರಿ ಮತದಾರರ ಸಾಮೂಹಿಕ ಪ್ರತಿಕ್ರಿಯೆ, ವ್ಯವಹಾರ ಯಾವುದಾದರೂ ಒಂದು ಪಕ್ಷದೆಡೆ ವಾಲಿಕೊಂಡಿರುತ್ತದೆ. ಹೀಗಿರುವಾಗ ಊಹಿಸಬಹುದಾಗಿದೆ. ಹೀಗಿದ್ದರೂ ಔಪಚಾರಿಕ ಶಿಕ್ಷಣ ಇಲ್ಲದಿದ್ದರೂ ರಾಜಕೀಯ ಕಾರ್ಯಕರ್ತನಾಗಿ ಜನರ ಒಲವು ಯಾವ ಕಡೆಗಿದೆ ಎಂಬುವುದನ್ನು ಅಂದಾಜಿಸಬಹುದು’ ಎಂದು ಅವರು ಬರೆದಿದ್ದಾರೆ.

Advertisement

ತಾನು ಹೀಗೆ ತುರ್ತು ಪರಿಸ್ಥಿತಿ ಹೇರಿದ ಬಳಿಕ ಅಂದರೆ 1977ರ ಸಾಮಾನ್ಯ ಚುನಾವಣೆ ಹಾಗೂ 1980ರ ಆರಂಭದಲ್ಲಿ, ಆರನೇ ಲೋಕಸಭೆ ಕೊನೆಗೊಂಡು ಮಧ್ಯಂತರ ಚುನಾವಣೆ ನಡೆದಾಗ ತಾನು ಹೀಗೆ ಮಾಡಿದ್ದೆ ಎಂದೂ ಅಡ್ವಾಣಿ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇತ್ತು, 1977 ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮೇಲಿನ ಕೋಪವು ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರೆ, ಮತ್ತೊಂದು ಸಾಮೂಹಿಕ ಜಗಳದಿಂದಾಗಿ ಜನತಾ ಪಕ್ಷ ಸರ್ಕಾರದ ಪತನದಿಂದ ಉಂಟಾದ ಹತಾಶೆ ಜನರ ಗೊಂದಲ ಅಂತ್ಯಗೊಳಿಸಿತ್ತು. ಇದು ಮತದಾರರ ಮೇಲೆ ಪರಿಣಾಮ ಬೀರಿತ್ತು ಎಂದಿದ್ದಾರೆ.

Advertisement

ಜನತಾ ಪಕ್ಷದ ಸೋಲು ಮತದಾರರ ಮತದಾರರ ನಡವಳಿಕೆಯ ಮತ್ತೊಂದು ಮುಖವನ್ನೂ ಪರಿಚಯಿಸಿತ್ತು. ದಾರಿ ತಪ್ಪಿದ ರಾಜಕೀಯ ಪಕ್ಷಕ್ಕೆ ಪಾಠ ಕಲಿಸಲು ಮತದಾರ ಬಯಸಿದಾಗ, ಅದು ಹೆಚ್ಚಾಗಿ ಆ ಪಕ್ಷದ ವಿರುದ್ಧದ ಅಸಮಾಧಾನದಿಂದಾಗಿ ಆಗಿರುತ್ತದೆ. 1980 ರಲ್ಲಿ, ಆಳವಾದ ಭ್ರಮನಿರಸನವು ತನ್ನ ಆಶಯಗಳಿಗೆ ತಕ್ಕಂತೆ ವರ್ತಿಸದ ಪಕ್ಷವನ್ನು ಶಿಕ್ಷಿಸಲು ನಮ್ಮನ್ನು ಪ್ರಚೋದಿಸುತ್ತದೆ ಎಂದೂ ಕಲಿಸಿದೆ ಎಂದಿದ್ದಾರೆ ಅಡ್ವಾಣಿ.

ಚುನಾವಣೆಯಲ್ಲಾದ ಸೋಲು ಜನತಾ ಪಕ್ಷದೊಳಗೆ ಉಭಯ ಸದಸ್ಯತ್ವ ವಿವಾದವನ್ನು ಮತ್ತಷ್ಟು ಗಾಢಗೊಳಿಸಿತು. ಇದು ಸಂಸತ್‌ ಚುನಾವಣೆ ಮೇಲೂ ಪ್ರಭಾವ ಬೀರಿತು. 1980ರ ಫೆಬ್ರವರಿ 25ರಂದು ಜಗಜೀವನ್‌ ರಾಮ್ ಪಕ್ಷದ ಅಧ್ಯಕ್ಷ ಚಂದ್ರಶೇಖರ್‌ರಿಗೆ ಪತ್ರವೊಂದನ್ನು ಬರೆದು ಈ ವಿಚಾರದ ಬಗ್ಗೆ ಚರ್ಚೆ ನಡೆಸುವಂತೆ ಬೇಡಿಕೆ ಇಟ್ಟಿದ್ದರು. ಹೀಗಿರುವಾಗ ಈ ಸೋಲಿನ ಹೊಣೆ ಜನಸಂಘದ ಜೊತೆ ಸಂಬಂಧವಿಟ್ಟುಕೊಂಡವರ ಹಾಗೂ ಸಂಘದ ಜೊತೆ ಸಂಬಂಧ ಮುರಿದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದವರ ಮೇಲೆ ಹೊರಿಸಲು ಯತ್ನಿಸಿದರು.

Advertisement

ಅಡ್ವಾನಿ ತಮ್ಮ ಕೃತಿಯಲ್ಲಿ ಬಿಜೆಪಿ ಹುಟ್ಟಿಕೊಂಡ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆಯೂ ಬರೆದಿದ್ದಾರೆ. ಜನತಾ ಪಾರ್ಟಿಯೊಳಗಿದ್ದ ಸಂಘ ವಿರೋಧಿ ಅಭಿಯಾನ 1980ರ ಲೋಕಸಭೆ ಚುನಾವಣೆಯ ಕಾರ್ಯಕರ್ತರ ಉತ್ಸಹವನ್ನೂ ಕುಗ್ಗಿಸಿತ್ತು. ಇದು ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತು ಹಾಗೂ ಪಕ್ಷದ ಪ್ರದರ್ಶನ ಕಡಿಮೆ ಮಾಡಿತು. ಹೀಗಿರುವಾಗಲೇ ಏಪ್ರಿಲ್ 4ರಂದು ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಒಂದು ಮಹತ್ವದ ಸಭೆ ನವದೆಹಲಿಯಲ್ಲಿ ನಡೆಯಿತು. ಇದರಲ್ಲಿ ಉಭಯ ಸದಸ್ಯತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು.

Advertisement

‘ಮೊರಾರ್ಜಿ ದೇಸಾಯಿ ಮತ್ತು ಇತರ ಕೆಲವು ಸದಸ್ಯರು ಪರಸ್ಪರ ಒಪ್ಪಂದದ ಅಂಗೀಕಾರದ ಆಧಾರದ ಮೇಲೆ ನಮ್ಮನ್ನು ಜನತಾ ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸುತ್ತಲೇ ಇದ್ದರು. ಆದರೆ ಭವಿಷ್ಯ ಬರೆದಾಗಿತ್ತು. ಜನತಾ ಪಕ್ಷದ ರಾಷ್ಟ್ರೀಯ ಕಾರ್ಯನಿರ್ವಾವಾಹಕವು, ಒಪ್ಪಂದದ ಸೂತ್ರವನ್ನು 14ರ ಹೋಲಿಕೆಯಲ್ಲಿ 17 ಮತಗಳಿಂದ ತಿರಸ್ಕರಿಸಿತು. ಈ ಮೂಲಕ ಮಾಜಿ ಜನ ಸಂಘ ಸದಸ್ಯರನ್ನು ಹೊರಹಾಕಬೇಕೆಂದು ನಿರ್ಣಯವನ್ನು ಅಂಗೀಕರಿಸಲಾಯಿತು.

ಆರಂಭದಿಂದಲೂ ನಮಗೆ ಜನಸಂಘಕ್ಕೆ ಮರಳುವ ಉದ್ದೇಶವಿರಲಿಲ್ಲ, ಬದಲಾಗಿ ಹೊಸದೊಂದು ಆರಂಭ ಮಾಡಬೇಕೆಂಬ ಉದ್ದೇಶವಿತ್ತು. ಇದು ಪಕ್ಷದ ಹಿರಿಯ ನಾಯಕರು ಹೊಸ ಪಕ್ಷದ ಹೆಸರಿನ ಬಗ್ಗೆ ದೀರ್ಘವಾದ ಚರ್ಚೆ ನಡೆಸುತ್ತಿರುವುದರಿಂದಲೂ ಸ್ಪಷ್ಟವಾಗಿತ್ತು. ಕೆಲವರು ಇದನ್ನು ಭಾರತೀಯ ಜನಸಂಘ ಎಂದು ಕರೆಯಲಿಚ್ಛಿಸಿದ್ದರು.

Advertisement

ಆದರೆ, ಅಟಲ್‌ಜೀ ನೀಡಿದ್ದ ಭಾರತೀಯ ಜನತಾ ಪಾರ್ಟಿ ಹೆಸರನ್ನು ಬಹುತೇಕರು ಬೆಂಬಲಿಸಿದ್ದರು. ಇದು ನಮ್ಮ ಭಾರತೀಯ ಜನಸಂಘ ಹಾಗೂ ಜನತಾ ಪಾರ್ಟಿ ಎರಡರ ಸಂಬಧವನ್ನು ತೋರಿಸಿ ಕೊಡುತ್ತಿತ್ತು. ಜೊತೆಗೆ ನಾವು ಹೊಸದೊಂದು ಪರಿಕಲ್ಪನೆ ಹಾಗೂ ಪಕ್ಷದ ಜೊತೆ ಮರಳಿದ್ದೇವೆಂದು ತೋರಿಸಿಕೊಡುತ್ತಿತ್ತು ಎಂದಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…

10 mins ago

ಅಡಿಕೆಯಲ್ಲಿ ಮಿಶ್ರ ಬೆಳೆ ಏಕೆ..? ಹೇಗೆ ಮತ್ತು ಯಾವ ಬೆಳೆಯನ್ನು ಮಾಡಬಹುದು..?

ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…

45 mins ago

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ

25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

19 hours ago

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |

ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…

24 hours ago

ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?

ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..

1 day ago