ಬಿಜೆಪಿ ಪ್ರಾಬಲ್ಯ ಹೆಚ್ಚಾಗಲು ಸರ್ವವ್ಯಾಪಿಯಾಗಬೇಕು, ಸರ್ವಸ್ಪರ್ಶಿಯಾಗಬೇಕು ಹಾಗೂ ಸರ್ವಗ್ರಾಹಿಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು, ಬೂತ್ ಮಟ್ಟದಿಂದಲೂ ಬಿಜೆಪಿಯು ಯಾವತ್ತೂ ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು.
ಅವರು ಶನಿವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಪ್ರಕೋಷ್ಟಗಳ ಎರಡು ದಿನಗಳ ಚಿಂತನಾ ವರ್ಗದ ಸಮಾರೋಪ ಭಾಷಣ ಮಾಡಿದರು. ಇಂದು ರಾಜ್ಯದಲ್ಲಿ ರಾಜಕೀಯ ಚರ್ಚೆಯ ಮಟ್ಟ ಏರಿಸಬೇಕಿದೆ. ಏಕವಚನ ಸಹಿತ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡು ಪ್ರತಿಪಕ್ಷದ ವಿರುದ್ಧ ಮಾತನಾಡಬೇಕು. ಬಿಜೆಪಿಯಲ್ಲಿ ಪರಿಶ್ರಮದ ಮೇಲೆ ಅರ್ಹತೆಗಳು ಲಭ್ಯವಾಗುತ್ತಿದೆ. ಹೀಗಾಗಿ ಈಗ ಸಾಮಾನ್ಯ ಜನರೂ ಕೂಡಾ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ, ಪ್ರಧಾನಿಗಳ ಕೆಲಸದ ಮೇಲೆಯೇ ಗ್ರಾಪಂ, ಕಾರ್ಪೋರೇಟರ್ ಕೆಲಸವನ್ನೂ ತುಲನೆ ಮಾಡುತ್ತಾರೆ. ಹೀಗಾಗಿ ಪಕ್ಷದ ಹುದ್ದೆಗಳನ್ನೂ, ಸ್ಥಾನಮಾನಗಳನ್ನೂ ಸರಿಯಾಗಿ ನಿರ್ವಹಣೆ ಮಾಡುವ ಮಂದಿಯ ಅಗತ್ಯವಿದೆ ಎಂದ ಬಿ ಎಲ್ ಸಂತೋಷ್, ಕಾರ್ಯಕರ್ತರೆಲ್ಲರೂ ಅಂತ್ಯೋದಯ, ಸರ್ವೋದಯ ಹಾಗೂ ರಾಮರಾಜ್ಯದ ಬಗ್ಗೆ ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರುಗಳಾದ ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಭಾನುಪ್ರಕಾಶ್, ಶಿವಯೋಗಿ ಸ್ವಾಮೀಜಿ ಮೊದಲಾವರು ಇದ್ದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…