ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ದೇವೇಗೌಡ ರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು, ಗ್ರಾಮೀಣ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಏಳೂ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೆಲವರು ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ, ಅದು ದೊಡ್ಡದಾ ಇವತ್ತು ಎಂದು ಪ್ರಶ್ನಿಸಿದ ರೇವಣ್ಣ, ವರ್ಕ್ ಆರ್ಡರ್ ತಡೆ ಹಿಡಿಯುವುದೇ ಇವರ ಸಾಧನೆ. ತೋಟಗಾರಿಕಾ ಕಾಲೇಜು ಕಿತ್ತುಕೊಂಡರು. ಆದರೆ ಸ್ಥಳೀಯ ಶಾಸಕರು ಉಸಿರೇ ಬಿಡಲಿಲ್ಲ. ನಾನು ಏನು ಮಾಡಿದ್ದೇನೆ ಎಂಬುದನ್ನು ತೆಗೆದು ನೋಡಲಿ, ರೋಡ್‍ಗೆ ಇವತ್ತು ಟಾರು ಹಾಕಿದ್ರೆ ಬೆಳಗ್ಗೆ ಕಿತ್ತು ಹೋಗ್ತಿದೆ. ಇಂಜಿನಿಯರ್‍ಗಳು, ಕಂಟ್ರ್ಯಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರಾಂಡಿ ಶಾಪ್ ಕೊಟ್ಟು, ಕುಡ್ಕಂಡು ಇರಿ, ಅಂತ ಕೊಡುಗೆ ಕೊಟ್ಟಿದ್ದಾರೆ. ಮೋದಿಯವರೇ ನಿಮ್ಮ ಪಕ್ಷದ ಕೊಡುಗೆ ಸಿಎಲ್-7. ಮನೆ ಒಳಗಡೆ ಇದ್ದರು ಎದ್ದು ಇಂತಹ ಶಕ್ತಿಗಳನ್ನು ದಮನ ಮಾಡಲು ಹೊರಗೆ ಬಂದಿದ್ದಾರೆ ಎಂದು ಪ್ರೀತಂಗೌಡ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿದ ರೇವಣ್ಣ, ಹದಿನೈದು ವರ್ಷದಿಂದ ನಾನು ಸಾಕಿದ ಗಿಣಿ ಇತ್ತು, ಅದರ ಬಳಿ ಒಂದು ಸ್ವಲ್ಪ ದುಡ್ಡಿದೆ ಅಂತ ಕಾಂಗ್ರೆಸ್‍ನವರು ಗೆಲ್ಲುತ್ತೆ ಅಂತ ಕರ್ಕೊಂಡ್ರು. ಅವರು ಪುಕ್ಸಟ್ಟೆ ಯಾವುದನ್ನೂ ಮಾಡಲ್ಲ, ಸಾಕಿದ ಗಿಣಿನಾ ಬೋನಿಗೆ ಬಿಡಬೇಕು, ಈಚೆಗೆ ಬಿಡಬಾರದು ಅಂತ ದೇವರೇ ನಮ್ಮ ಹತ್ರ ಸಂತೋಷ್ ಅವರನ್ನು ಕಳುಹಿಸಿದ್ದಾನೆ ಎಂದರು.
ಸಾಕಿದ ಗಿಣಿಗೆ ಬಲೆ ಬೀಸಿ ಕಾಂಗ್ರೆಸ್‍ನವರು ಇಟ್ಕಂಡವ್ರೆ, ಜನರೇ ಹದ್ದಾಗಿ ಕುಕ್ತಾರೆ ಎಂದು ಭವಿಷ್ಯ ನುಡಿದರು. ತಾಲೂಕಿನಲ್ಲಿ ಜೆಡಿಎಸ್‍ಗೆ 13 ಸಾವಿರ ವೋಟು ಇತ್ತು, ನಾನು ಬಂದ ಮೇಲೆ ಜಾಸ್ತಿ ಆಯ್ತು ಅನ್ನುತ್ತಿರುವವರು ಕಾಂಗ್ರೆಸ್ ಬಿಟ್ಟು ಸ್ಪರ್ಧೆ ಮಾಡಲಿ. ಎಷ್ಟು ವೋಟು ತಗೋತಾರೆ ನೋಡೋಣ ಎಂದು ಸವಾಲು ಹಾಕಿದರು. ಜೆಡಿಎಸ್ ಪಕ್ಷಕ್ಕೆ ವೋಟು ಕೊಡಿ, ಸ್ವರೂಪ್ ಅವರನ್ನು ಗೆಲ್ಲಿಸಿ. ಅವರ ತಂದೆ ಪ್ರಾಮಾಣಿಕವಾಗಿದ್ರು. ಸ್ವರೂಪ್ ಯುವಕ ಇದ್ದಾನೆ, ಐದು ವರ್ಷ ನೋಡೋಣ. ಸ್ವರೂಪ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು, ಸ್ವರೂಪ್ ಅವರನ್ನು ಗೆಲ್ಲಿಸಲು ಬೆಂಬಲ ಕೊಟ್ಟಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ದುಡ್ಡಿಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ಏಳು ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಕೆಲಸ ತಪ್ಪದೇ ಮಾಡ್ತೀವಿ ಎಂದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…