ಅಹಮದಾಬಾದ್ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ

June 14, 2025
7:30 AM

ಅಹಮದಾಬಾದ್ ನಲ್ಲಿ  ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.ಈ ಮುನ್ನ, ಗುಜರಾತ್ ನ ಎಟಿಎಸ್ ತಂಡಕ್ಕೆ ಡಿಜಿಟಲ್ ವಿಡಿಯೋ ರೆಕಾರ್ಡರ್ ಪತ್ತೆಯಾಗಿತ್ತು.ಬ್ಲಾಕ್  ಬಾಕ್ಸ್ ನಲ್ಲಿ  ವಿಮಾನದ ವೇಗ,ಎತ್ತರ, ಎಂಜಿನ್ ಪರಿಸ್ಥಿತಿ, ಕಾಕ್ ಪಿಟ್ ನ ಧ್ವನಿ ದಾಖಲೆ, ಪೈಲೆಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಕೇಂದ್ರದ ನಡುವಿನ ಸಂವಹನ ಮಾಹಿತಿ ಸೇರಿದಂತೆ ಹಲವು ವಿವರಗಳು ಇರಲಿವೆ. ಅಪಘಾತದ ಕಾರಣ ಪತ್ತೆಯಲ್ಲಿ ಈ ಬ್ಲಾಕ್ ಬಾಕ್ಸ್ ಮುಖ್ಯ ಪಾತ್ರ ವಹಿಸಲಿದೆ.

ಈ ಮಧ್ಯೆ, ಗಾಯಾಳುಗಳ ಚಿಕಿತ್ಸೆಗಾಗಿ ಅಹಮದಾಬಾದ್ ನ ಮಿಲಿಟರಿ ದಂಡು ಪ್ರದೇಶದಲ್ಲಿ ಭಾರತೀಯ ಸೇನೆ ರಕ್ತದಾನ ಶಿಬಿರ ಆಯೋಜಿಸಿದ್ದು, ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.ಗಾಯಾಳುಗಳ ಕುಟುಂಬದವರಿಗೆ ಸಿವಿಲ್ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ರಸ್ತೆ ಸಾರಿಗೆ ಮತ್ತು ವಸತಿ ಇಲಾಖೆಯಿಂದ ಕುಟುಂಬದವರಿಗೆ ವಸತಿ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ -ಎನ್ ಡಿಆರ್ ಎಫ್ ಮಹಾನಿರ್ದೇಶಕ ಹರಿ ಓಂ, ಪರಿಹಾರ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ನ ಆರು ತಂಡಗಳು ನಿರತವಾಗಿವೆ. ಕೇಂದ್ರ ಮತ್ತು ರಾಜ್ಯದ ಇತರ ಸಂಸ್ಥೆಗಳೊಂದಿಗೆ ಸಮನ್ವಯದಿಂದ, ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror