ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಇಲಾಖೆ ,ಭಾರತೀಯ ಅಂಚೆ ಇಲಾಖೆ ಪುತ್ತೂರು ,ಚಿರಾಯು ಸ್ಪೋರ್ಟ್ಸ ಕ್ಲಬ್ ಮಾವಿನಕಟ್ಟೆ ,ಅಮರ ಸಂಘಟನಾ ಸಮಿತಿ ರಿಜಿಸ್ಟರ್ ಸುಳ್ಯ, ಗ್ರಾಮವನ್ ಮಾವಿನಕಟ್ಟೆ ,ಮತ್ತು ಒಡಿಯೂರು ಸ್ವಸಹಾಯ ಸಂಘ ದೇವಚಳ್ಳ ಇವರುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ,ಆರೋಗ್ಯ ತಪಾಸಣಾ ಶಿಬಿರ, ಆಧಾರ ಕಾರ್ಡು ಪರಿಷ್ಕರಣೆ ,ಈ ಶ್ರಮ ಕಾರ್ಡ್ ನೋಂದಣಿ ಮತ್ತು ಹಿರಿಯರ ಗುರುತು ಚೀಟಿ ನೋಂದಣಿ ಕಾರ್ಯಕ್ರಮವು ದೇವಚಳ್ಳ ಗ್ರಾಮ ಪಂಚಾಯತ್ ವಠಾರದಲ್ಲಿ ಜರುಗಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ. ಕುಲದೀಪ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ರೋಟರಿ ಕ್ಲಬ್ಬಿನ ಅಧ್ಯಕ್ಷರು ಬ್ಲಡ್ ಬ್ಯಾಂಕಿನ ಮುಖ್ಯಸ್ಥ ಜಯರಾಜ್ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 103ನೇ ಬಾರಿ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆ ಕಲ್ಲು ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಚಿರಾಯು ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಪ್ರವೀಣ್ ಮಾವಿನಕಟ್ಟೆ, ಅಮರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸಾತ್ವಿಕ್ ಮಡಪ್ಪಾಡಿ, ಲಯನ್ಸ್ ಕಾರ್ಯದರ್ಶಿ ಲಯನ್ ದೊಡ್ಡಣ್ಣ ಬರೆಮೇಲು, ಪಂಚಾಯತ್ ಸದಸ್ಯರುಗಳ ಜಿಲ್ಲಾಧ್ಯಕ್ಷರಾದ ಹರೀಶ್ ರೈ ಉಬರಡ್ಕ ,ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಮೆದು ಹಾಗೂ ದುರ್ಗಾದಾಸ್ ಮೆತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರವೀಣ್ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು 47 ಜನ ರಕ್ತದಾನ ಮಾಡಿದ್ದು ಶೈಲೇಶ್ ಅಂಬೇಕಲ್ಲು 103ನೇ ಬಾರಿ ರಕ್ತದಾನ ಮಾಡಿದರೆ ರಾಜೇಶ್ ರವರು 60ನೇ ಬಾರಿ ರಕ್ತದಾನ ಮಾಡಿದರು.
ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…
ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…
ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…
ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…