ಮಂಗಳೂರಿಗೆ ನವೋದ್ಯಮದ ಹೊಸ ಬೆಳಕು: ‘ಬೊಲ್ಪು’ ಯೋಜನೆಯಲ್ಲಿ 11 ಸ್ಟಾರ್ಟ್‌ಅಪ್ ಆಯ್ಕೆ

February 28, 2026
10:33 PM

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯಡಿ, ಮುಂದಿನ ಐದು ವರ್ಷಗಳಲ್ಲಿ ಮಂಗಳೂರನ್ನು ದೇಶದ ಪ್ರಮುಖ ಸ್ಟಾರ್ಟ್‌ಅಪ್ ಹಾಗೂ ಉದ್ಯಮ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಆರಂಭಿಸಿರುವ ‘ಬೊಲ್ಪು – ಅವಕಾಶ ನವೋದಯ’ ಯೋಜನೆ ಮಹತ್ವದ ಹಂತ ತಲುಪಿದೆ.

ನವೋದ್ಯಮ ಸಂಸ್ಥಾಪಕರಿಗೆ ದಿಕ್ಕುನಿರ್ದೇಶನ ಹಾಗೂ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಆರಂಭವಾದ ಈ ಯೋಜನೆಗೆ ಅಪಾರ ಸ್ಪಂದನೆ ವ್ಯಕ್ತವಾಗಿದೆ. ಅಂತಿಮ ದಿನಾಂಕದವರೆಗೆ 850ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಆಲೋಚನೆಗಳ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ಬಳಿಕ 11 ನವೀನ ಸ್ಟಾರ್ಟ್‌ಅಪ್ ಐಡಿಯಾಗಳು ಅಂತಿಮವಾಗಿ ಆಯ್ಕೆಯಾಗಿವೆ.

ಆಯ್ಕೆಯಾದ ಭಾವಿ ಉದ್ಯಮಿಗಳೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಯೆಯ್ಯಾಡಿಯ ಖಾಸಗಿ ಹೋಟೆಲ್‌ನಲ್ಲಿ ಸಂವಾದ ನಡೆಸಿ, ಅವರ ಆಲೋಚನೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಚೌಟ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 50 ಯಶಸ್ವಿ ಉದ್ಯಮಶೀಲತಾ ಕಥೆಗಳು ನಿರ್ಮಾಣ ಮಾಡುವುದು ‘ಬೊಲ್ಪು’ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ‘ಸ್ಟಾರ್ಟ್-ಅಪ್ ಇಂಡಿಯಾ’ ಯೋಜನೆಯ 11ನೇ ವರ್ಷದಲ್ಲಿ 11 ವಿಭಿನ್ನ ಸ್ಟಾರ್ಟ್‌ಅಪ್ ಆಲೋಚನೆಗಳು ಆಯ್ಕೆಯಾಗಿರುವುದು ವಿಶೇಷ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.

ನವೋದ್ಯಮಿಗಳು ಸವಾಲುಗಳ ಬಗ್ಗೆ ಯೋಚಿಸುವುದಕ್ಕಿಂತ ಅವಕಾಶಗಳತ್ತ ಗಮನಹರಿಸಬೇಕು. ಯಶಸ್ಸು ಅಥವಾ ವೈಫಲ್ಯವು ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಯುವ ಉದ್ಯಮಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮಂಗಳೂರನ್ನು ಮುಂದಿನ ಪ್ರಮುಖ ಸ್ಟಾರ್ಟ್‌ಅಪ್ ಹಬ್ ಆಗಿ ರೂಪಿಸುವ ಗುರಿಯೊಂದಿಗೆ ಯೋಜನೆಯಲ್ಲಿ 50% ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಇರಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಇದೇ ವೇಳೆ ‘ಬೊಲ್ಪು’ ಯೋಜನೆಯ ಮೆಂಟರ್‌ಗಳಿಗೆ ಕೃತಜ್ಞತೆ ಸಲ್ಲಿಸಿದರು.

‘ಬೊಲ್ಪು’ ಯೋಜನೆಯಡಿ ಆಯ್ಕೆಯಾದ ಸ್ಟಾರ್ಟ್‌ಅಪ್ ಆಲೋಚನೆಗಳು ತಂತ್ರಜ್ಞಾನ, ಆರೋಗ್ಯ, ಪರಿಸರ, ಸಂಸ್ಕೃತಿ ಹಾಗೂ ಆಹಾರ ಕ್ಷೇತ್ರಗಳನ್ನು ಒಳಗೊಂಡಿವೆ.

  • ಝಪ್ಪಲ್ ಲ್ಯಾಬ್ಸ್ – ನೀಲ್ ಕೆವಿನ್ ಮಾರ್ಟಿಸ್ (ಬ್ಲಾಕ್‌ಚೈನ್ ತಂತ್ರಜ್ಞಾನ)

  • ಸತ್ವ ಬೆವರೇಜಸ್ – ಅಭಿನಂದನ (ಡೈರಿ ಪಾನೀಯ ಉತ್ಪನ್ನಗಳು)

  • ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ – ಸಿಂಧೂರ ಟಿ.ಪಿ (ಸಂಸ್ಕೃತಿ ಸಂರಕ್ಷಣೆ)

  • ಜೂಸ್ ಬಾಟಲ್ ಐಡಿಯಾ – ಪ್ರೀತಿ & ಗಣೇಶ್ ನಾಯಕ್ (85% ಮಹಿಳಾ ಉದ್ಯೋಗ ಸಬಲೀಕರಣ)

  • ಎಕೋಪೋಲಿ ಬಯೋಟೆಕ್ – ಡಾ. ಚಂದ್ರಿಕಾ ತಂತ್ರಿ (ಪರಿಸರ ತಂತ್ರಜ್ಞಾನ)

  • ಬಯೋಮೆಡ್ ಇಂಪ್ಲಾಂಟ್ಸ್ – ಡಾ. ನಿಖಿಲ್ ಎಸ್. ಶೆಟ್ಟಿ (ಆರೋಗ್ಯ ತಂತ್ರಜ್ಞಾನ)

  • ಅನಾಹತಂ.ಐ – ಸಾಕ್ಷತ್ ರೈ ಕೆ. & ದುರ್ಗಾದಾಸ್ ಶೆಟ್ಟಿ (AI ಆಧಾರಿತ ಆರೋಗ್ಯ ಸೇವೆ)

  • ವ್ಯಾನಿಕಾ ಇನ್ನೋವೇಶನ್ಸ್ – ಶೇಷಪ್ರಸಾದ್ ಭಟ್ (ಎಂಜಿನಿಯರಿಂಗ್ ಪರಿಹಾರಗಳು)

  • ಹೈಡ್ರೋಗ್ರೀನ್ಸ್ – ವಸಂತ್ ಮಾಧವ್ ಕಾಮತ್ (ಕೃಷಿ ನವೀನತೆ)

  • ದಾಸಪೈಲಟ್ (PLUGFLY) – ಮಿಥುಲ್ ದಾಸ್ (ಡ್ರೋನ್ ತಂತ್ರಜ್ಞಾನ)

  • ಕೆನರಾ ಫಾರ್ಮ್ಸ್ – ಗೌರವ್ ಗಣೇಶ್ ಶೆಟ್ಟಿ (ರಾಸಾಯನಿಕ ಮುಕ್ತ ಡೈರಿ ಉತ್ಪನ್ನಗಳು)

‘ಬೊಲ್ಪು’ ತಂಡವು ಆಯ್ಕೆಯಾದ ಎಲ್ಲಾ ನವೋದ್ಯಮಿಗಳಿಗೆ ಮುಂದಿನ ದಿನಗಳಲ್ಲಿ ತಜ್ಞರಿಂದ ನಿರಂತರ ಮಾರ್ಗದರ್ಶನ, ನೆಟ್ವರ್ಕಿಂಗ್ ಹಾಗೂ ಉದ್ಯಮ ರೂಪಾಂತರಕ್ಕೆ ಅಗತ್ಯ ಸಂಪೂರ್ಣ ಬೆಂಬಲ ಒದಗಿಸಲಿದೆ. ಇದರ ಮೂಲಕ ಆಲೋಚನೆಗಳನ್ನು ನೈಜ ಉದ್ಯಮಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.

Under the “Bolpu – Avakasha Navodaya” initiative envisioned by Dakshina Kannada MP Capt. Brijesh Chowta, 11 startup ideas have been selected from over 850 applications after a rigorous three-stage evaluation. The project aims to create at least 50 successful startup stories in Mangaluru within five years and transform the city into a major startup hub, with strong emphasis on mentorship and women entrepreneurship.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ
ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ
July 5, 2026
11:09 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ
July 5, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror