ವಿಫಲ ಕೊಳವೆಬಾವಿ ಸಮರ್ಪಕವಾಗಿ ಮುಚ್ಚಲು ಗ್ರಾಮ ಪಂಚಾಯತ್ ಗಳಿಗೆ ತಾಪಂ ಸೂಚನೆ

October 11, 2020
2:31 PM

ಕುಡಿಯುವ ನೀರಿಗಾಗಿ ಕೊಳವೆಬಾವಿ ತೆರೆಯುವ ಸಂದರ್ಭ ವಿಫಲವಾದ ಕೊಳವೆಬಾವಿಗಳನ್ನು  ಸಮರ್ಪಕವಾಗಿ ಮುಚ್ಚಲು ಸುಳ್ಯ ತಾಲೂಕು ಪಂಚಾಯತ್‌ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ ಗಳಿಗೆ ಸೂಚನೆ ನೀಡಿದೆ.

Advertisement
Advertisement

ಸುಳ್ಯ ತಾಲೂಕು ಪಂಚಾಯತ್‌ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಮಿಲದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಗೆ ಕೊಳವೆಬಾವಿ ತೆಗೆದು ಕೇಸಿಂಗ್‌ ಪೈಪ್‌ ಕೂಡಾ ತೆಗೆದು  ಕೊಳವೆಬಾವಿ ಅಪಾಯ ಸ್ಥಿತಿಯಲ್ಲಿ ಇರುವ ಬಗ್ಗೆ ಪ್ರಸ್ತಾಪವಾಗಿತ್ತು.

ಈ ಬಗ್ಗೆ ಮುಖ್ಯಮಂತ್ರಿಗಳ ಟ್ವಿಟ್ಟರ್‌ ಖಾತೆಗೆ ಸಾರ್ವಜನಿಕರಿಂದ ದೂರು ಹಾಗೂ ವಿವಿಧ ಪತ್ರಿಕೆಗಳಲ್ಲಿ  ಬಂದ ವರದಿಯ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಅವರು ಗಮನಿಸಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಚರ್ಚೆ ನಡೆದು ಮುಂದೆ ಇಂತಹ ಪ್ರಕರಣಗಳು ಮುಂದೆಂದೂ ಕಂಡು ಬರದ ರೀತಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌  ವ್ಯಾಪ್ತಿಯಲ್ಲಿ ವಿಫಲವಾದ ಕೊಳವೆಬಾವಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಮಪರ್ಕವಾಗಿ ಮುಚ್ಚಲು ಎಲ್ಲಾ ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ವೈಯಕ್ತಿಕ ಗಮನಹರಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಲಿಖಿತ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ತೆರೆದ ಕೊಳವೆಬಾವಿ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಗೆ ಟ್ವಿಟ್ಟರ್‌ ಮೂಲಕ ನೀಡಿರುವ ದೂರಿಗೆ ತಕ್ಷಣವೇ ಸ್ಪಂದಿಸಿ ಕಚೇರಿಯಿಂದಲೂ ಪರಿಶೀಲನೆ ನಡೆದಿತ್ತು. ಬಳಿಕ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.

ಜಾಹ್ನವಿ ಕಾಂಚೋಡು
ತೆರೆದ ಕೊಳವೆಬಾವಿಗಳು ಅಪಾಯವನ್ನು ಆಹ್ವಾನ ಮಾಡಿರುವುದು  ಈಗಾಗಲೇ ವಿವಿದೆಡೆ ಕಂಡುಬಂದಿದೆ. ಸುಳ್ಯ ತಾಲೂಕು ಹಾಗೂ ದ ಕ ಜಿಲ್ಲೆಯಲ್ಲಿ ಇಂತಹ ಅಪಾಯಗಳು ಆಗದಂತೆ ಕ್ರಮ ಆಗಲೇಬೇಕಿದೆ. ಸಾಮಾಜಿಕ ಜವಾಬ್ದಾರಿಯಿಂದ ಸೋಶಿಯಲ್‌ ಮೀಡಿಯಾ ಹಾಗೂ ಪತ್ರಿಕೆಗಳಲ್ಲಿ  ಬಂದ ಆಧಾರದಲ್ಲಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿತ್ತು.  – ಜಾಹ್ನವಿ ಕಾಂಚೋಡು, ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ, ಸುಳ್ಯ ತಾಪಂ

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !
June 24, 2025
10:26 AM
by: ದ ರೂರಲ್ ಮಿರರ್.ಕಾಂ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಮಾರುಕಟ್ಟೆ ಏನಾಯ್ತು..? | ವಿಘ್ನೇಶ್ವರ ಭಟ್‌ ವರ್ಮುಡಿ ಅವರ ವಿಶ್ಲೇಷಣೆ …
May 22, 2025
8:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group