Advertisement
ರಾಜ್ಯ

ಬಿಪಿಎಲ್ ಕಾರ್ಡ್‍ದಾರರೇ ಎಚ್ಚರಿಕೆ : ಅನರ್ಹ ಕಾರ್ಡ್‍ಗಳ ರದ್ದು

Share

ಐಷಾರಾಮಿ ವಾಹನ, ಹೆಚ್ಚು ಆದಾಯ, ಸರ್ಕಾರಿ ನೌಕರಿ, ಹೆಚ್ಚು ಜಾಗ ಮತ್ತು ಭೂಮಿ ಇರುವ ಕುಟುಂಬಗಳ ಕಾರ್ಡ್‍ಗಳನ್ನೂ ಗುರುತಿಸಿಕೊಂಡು ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ತೆರಿಗೆ ಸಲ್ಲಿಸುತ್ತಿರುವವರ ವಿವರಗಳನ್ನು ಆಹಾರ ಇಲಾಖೆಗೆ ಒದಗಿಸುತ್ತಿದೆ. ಈ ಕಾರಣದಿಂದ ಬಿಪಿಎಲ್‍ಗಳನ್ನು ಅನರ್ಹ ಎಂಬ ಪಟ್ಟಿಯಲ್ಲಿ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಕೆಲವು ಬಿಪಿಎಲ್ ರೇಷನ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ರಾಜ್ಯಾದ್ಯಂತ ತೀವ್ರಗೊಂಡಿದೆ. ಈಗಾಗಲೇ ಬೆಂಗಳೂರು, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‍ಗಳು ರದ್ದಾಗಿವೆ.

ಒಂದು ವೇಳೆ ಬಿಪಿಎಲ್ ಕಾರ್ಡ್‍ಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿರುವವರು ಈ ಷರತ್ತುಗಳನ್ನು ಒಳಗೊಂಡಿರಬೇಕು.

  • ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  • ಯಾವ ಸದಸ್ಯರು ಸರ್ಕಾರಿ ಹುದ್ದೆ ಅಥವಾ ಖಾಯಂ ನೌಕರಿಯಲ್ಲಿ ಇರಬಾರದು.
  • ನಗರದಲ್ಲಿ 1000 ಚದರ ಅಡಿಗಿಂತ ಹೆಚ್ಚು ಮನೆ ಜಾಗ ಇರಬಾರದು.
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚು ಭೂಮಿ ಇರಬಾರದು.
  • ನಾಲ್ಕು ಚಕ್ರ ವಾಹನ ಇರಬಾರದು ಹಾಗೂ ಸದಸ್ಯರೂ ಆದಾಯ ತೆರಿಗೆ ಪಾವತಿಸುತ್ತಿರಬಾರದು.

ಸರ್ಕಾರದ ಈ ನಿಯಮಗಳಿಂದ ಕೆಲವೊಮ್ಮೆ ಅನರ್ಹರನ್ನು ತೆಗೆದುಹಾಕೊ ನಿಜವಾದ ಬಡವರ ಕಾರ್ಡ್ ರದ್ದುಗಿಳಿಸಿರುತ್ತದೆ. ಒಂದುವೇಳೆ ಈ ಎಲ್ಲಾ ಷರತ್ತುಗಳು ಒಳಗೊಂಡಿದ್ದರೂ, ಬಿಪಿಎಲ್ ಕಾರ್ಡ್ ಅನರ್ಹ ಎಂದು ರದ್ದಾಗಿದೆ ಎಂದರೆ ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು.

ನಿಮ್ಮ ಕಾರ್ಡ್ ರದ್ದು ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ವಿಧಾನ ನೋಡಿ:  https://mahitikanaja.karnataka.gov.in/FCS/MyRationCard ಈ ಲಿಂಕ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ತದನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಟೈಮ್ ಮಾಡಿ  ಕ್ಲಿಕ್ ಮಾಡಿದರೆ ಸಾಕು.  ಕಾರ್ಡ್ ಸ್ಥಿತಿ ಆಕ್ಟೀವ್ ಎಂದು ಕಾಣಿಸಿದರೆ ನಿಮ್ಮ ಕಾರ್ಡ್ ಸುರಕ್ಷಿತ‌,   ಇನ್‍ ಆಕ್ಟೀವ್ ಎಂದು ಕಾಣಿಸಿಕೊಂಡರೆ ರದ್ದು ಆಗಿದೆ ಎಂದು ಅರ್ಥ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

14 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago