ಮಹಿಳೆಯ ಮೆದುಳು ನಿಷ್ಕ್ರಿಯ | ಅಂಗಾಗ ದಾನ ಮಾಡಿದ ಕುಟುಂಬಸ್ಥರು | 8 ಜನರಿಗೆ ಮರುಜೀವ |

Advertisement
Advertisement

ಮಡಿಕೇರಿಯ ಸುದರ್ಶನ ಬಡಾವಣೆಯ ನಿವಾಸಿ ಆಶಾ ಅವರು ಅನಾರೋಗ್ಯಕ್ಕೆ ತುತ್ತಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಅವರ ಕುಟುಂಬಸ್ಥರು ಅಂಗಾಗ ದಾನ ಮಾಡುವ ಮೂಲಕ 8 ಜನರ ಜೀವ ಉಳಿಸಿದ್ದಾರೆ. ಕಣ್ಣು, ಕಿಡ್ನಿ, ಹೃದಯ, ಲಿವರ್ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

Advertisement

18 ವರ್ಷದಿಂದ ಬೇಬಿ ಸಿಟಿಂಗ್ ನಡೆಸುತ್ತಿದ್ದ ಪಂದ್ಯಂಡ ಆಶಾ (53) ಕಳೆದ ಶನಿವಾರ ಬೆಂಗಳೂರಿನಲ್ಲಿರುವ ಪುತ್ರಿ ಮನೆಗೆ ಹೋಗಿದ್ದರು. ಈ ವೇಳೆ ಅನಾರೋಗ್ಯಕ್ಕೆ ತುತ್ತಾದ ಆಶಾ ಅವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು. ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಹೇಳಿದರು. ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಆಶಾ ಅವರ ಪತಿ, ಮಕ್ಕಳ ಒಪ್ಪಿಗೆ ಪಡೆಯಲಾಯಿತು. ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಅಂಗಾಂಗವನ್ನು ಬೇರ್ಪಡಿಸಿ 8 ಜನರಿಗೆ ಕಸಿ ಮಾಡಲಾಗಿದೆ.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮಹಿಳೆಯ ಮೆದುಳು ನಿಷ್ಕ್ರಿಯ | ಅಂಗಾಗ ದಾನ ಮಾಡಿದ ಕುಟುಂಬಸ್ಥರು | 8 ಜನರಿಗೆ ಮರುಜೀವ |"

Leave a comment

Your email address will not be published.


*