ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೊರಾರಿ ಬಾಪು ಅವರಿಂದ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾಗವಹಿಸಿದರು. ನಾನು ಪ್ರಧಾನಿಯಾಗಿ ಬಂದಿಲ್ಲ, ಹಿಂದುವಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಧ್ಯಾತ್ಮಿಕ ಬೋಧಕ ಮೊರಾರಿ ಬಾಪು ಅವರಿಂದ ರಾಮಕಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಮಕಥೆಯಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆಲ ಸಾಧಕರು ಅದೆಷ್ಟೇ ದೊಡ್ಡ ಸ್ಥಾನಕ್ಕೇ ಏರಿದರು ತಮ್ಮ ಧರ್ಮಕ್ಕೆ ಗೌರಯುತವಾಗಿ ನಡೆದುಕೊಳ್ಳುವುದನ್ನು ಮರೆಯುವುದಿಲ್ಲ. ಹಾಗೆ ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂವಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದೇ ರಾಮಕಥಾ ಕಾರ್ಯಕ್ರಮ ನಡೆಯಿತು. ನನ್ನ ನಂಬಿಕೆ ವೈಯಕ್ತಿಕವಾದದ್ದು, ಪ್ರಧಾನಿಯಾಗಿರುವುದು ದೊಡ್ಡ ಗೌರವವಾದರೂ ಈ ಹುದ್ದೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಕಠಿಣ ಆಯ್ಕೆಗಳನ್ನು ಮಾಡಬೇಕು. ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ನನ್ನ ಧರ್ಮವು ನನಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ಸಮಸ್ಯೆಗಳನ್ನು ಆಲಿಸಿ, ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳುವಂತೆ ನನ್ನ ಧರ್ಮವು ಹೇಳುತ್ತದೆ ಎಂದು ರಿಷಿ ಸುನಕ್ ಹೇಳಿದರು. ಶ್ರೀರಾಮನು ಯಾವಾಗಲೂ ತನಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿರುತ್ತಾನೆ. ರಾಮನು ಯಾವಾಗಲೂ ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ನಮ್ರತೆಯಿಂದ ಆಡಳಿತ ಮಾಡಲು ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಲು ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾನೆ, ಎಂದು ಅವರು ಹೇಳಿದರು.
ಮೊರಾರಿ ಬಾಪು ಅವರ ಆಸನದ ಹಿಂದೆ ಹನುಮಂತನ ವಿಗ್ರಹವನ್ನು ಹೇಗೆ ಇರಿಸಲಾಗಿದೆಯೋ ಅದೇ ರೀತಿ ಗಣೇಶನ ವಿಗ್ರಹವನ್ನು ನನ್ನ ಕಚೇರಿಯ ಮೇಜಿನ ಮೇಲೆ ಇರಿಸಲಾಗಿದೆ ಎಂದು ಬ್ರಿಟನ್ ಪ್ರಧಾನಿ ಸುನಕ್ ಹೇಳಿದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…