ಗ್ರಾಮೀಣ ಜಾಲಕ್ಕೆ ನೆಟ್ವರ್ಕ್ ಬೂಸ್ಟ್‌ – ಬಿಎಸ್ಎನ್ಎಲ್ ಸುಧಾರಣೆಗೆ ಕೇಂದ್ರದ ಆದ್ಯತೆ

May 3, 2026
7:02 AM
ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.

ಗ್ರಾಮೀಣ ಭಾಗದ ಸಂಪರ್ಕವನ್ನು ಬಲಪಡಿಸುವ ದಿಸೆಯಲ್ಲಿ Bharat Sanchar Nigam Limited (BSNL) ಮಹತ್ವದ ಹೆಜ್ಜೆ ಇಟ್ಟಿದ್ದು, ಜೊಯಿಡಾ ತಾಲ್ಲೂಕಿನ ಬಾಳಶೆಟ್ಟಿಕೊಪ್ಪ ಗ್ರಾಮದಲ್ಲಿ ಹೊಸ ಮೊಬೈಲ್ ಟವರ್ ಉದ್ಘಾಟಿಸಲಾಗಿದೆ. ಈ ವೇಳೆ ಮಾತನಾಡಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ , ಬಿಎಸ್‌ಎನ್‌ಎಲ್ ಸುಧಾರಣೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಟವರ್‌ಗಳಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದ್ದು, ಬಿಎಸ್‌ಎನ್‌ಎಲ್ ಈಗ ಖಾಸಗಿ ಕಂಪನಿಗಳೊಂದಿಗೆ ಗುಣಮಟ್ಟದಲ್ಲಿ ಪೈಪೋಟಿ ನೀಡುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗಕ್ಕೆ 4G ಸಂಪರ್ಕ :  ಗ್ರಾಮೀಣ ಪ್ರದೇಶಗಳಲ್ಲಿ  ಆನ್‌ಲೈನ್ ಶಿಕ್ಷಣ,  ಬ್ಯಾಂಕಿಂಗ್ ಸೇವೆಗಳು,  ಸರ್ಕಾರಿ ಯೋಜನೆಗಳಿಗೆ ನೋಂದಣಿ  ಇವುಗಳಿಗೆ ಅಗತ್ಯವಾದ ಸ್ಥಿರ 4G ಸಂಪರ್ಕ ಒದಗಿಸುವುದು ಸರ್ಕಾರದ ಗುರಿಯಾಗಿದೆ.

ಜಿಲ್ಲೆಯಲ್ಲಿನ ಅಭಿವೃದ್ಧಿ ವಿವರ

  • ಹಳೆಯ 250 ಟವರ್‌ಗಳಲ್ಲಿ 163 ಟವರ್‌ಗಳು 4Gಗೆ ಅಪ್‌ಗ್ರೇಡ್
  • ಹೊಸದಾಗಿ 199 ಟವರ್‌ಗಳು 4G ಸೇವೆ ನೀಡುತ್ತಿವೆ
  • ಇನ್ನೂ 75 ಹೊಸ ಟವರ್‌ಗಳಿಗೆ ಮಂಜೂರಾತಿ
  • ಸ್ಥಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ

ಸಮಸ್ಯೆಗಳಿಗೆ ಪರಿಹಾರ : ಜಿಲ್ಲೆಯಲ್ಲಿ ಎದುರಾಗುತ್ತಿರುವ ಬ್ಯಾಟರಿ ಬ್ಯಾಕಪ್ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

BSNL has inaugurated a new 4G mobile tower in Joida, Uttara Kannada. MP Vishweshwar Hegde Kageri stated that the central government is prioritizing BSNL’s development to improve rural connectivity and digital access.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು
July 6, 2026
9:10 PM
by: ದ ರೂರಲ್ ಮಿರರ್.ಕಾಂ
ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್
July 6, 2026
8:41 PM
by: ದ ರೂರಲ್ ಮಿರರ್.ಕಾಂ
E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?
July 6, 2026
3:59 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-07-2026 | ಕರ್ನಾಟಕದಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸೂಚನೆ | ಜುಲೈ 10ರಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಸಾಧ್ಯತೆ
July 6, 2026
3:08 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror