ಬಿಎಸ್‌ಎನ್‌ಎಲ್‌ ನಿಂದ ಭಾರತದ ಮೊದಲ “ಡೈರೆಕ್ಟ್-ಟು-ಡಿವೈಸ್” ಸೇವೆ |

November 14, 2024
6:17 AM
ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಯಾವುದೇ ಸ್ಥಳಗಳಲ್ಲಿ  ಅಡೆತಡೆಯಿಲ್ಲದ ಸಂವಹನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡಲು ಇಲ್ಲಿ ಸಾಧ್ಯವಿದೆ.

ಬಿಎಸ್‌ಎನ್‌ ಎಲ್‌ ಸೇವೆಯು ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತಿದೆ. ದೇಶದ ಗ್ರಾಮೀಣ ಭಾಗದವರೆಗೂ ನೆಟ್ವರ್ಕ್‌ ಹೊಂದಿರುವ ಬಿಎಸ್‌ಎನ್‌ಎಲ್‌ ಇಂದಿಗೂ ಇನ್ನಷ್ಟು ಗ್ರಾಮೀಣ ಭಾಗದವರೆಗೂ ತಪುಪಿಲ್ಲ. ಇದೀಗ ಭಾರತದ ಮೊದಲ ಡೈರೆಕ್ಟ್-ಟು-ಡಿವೈಸ್ ಉಪಗ್ರಹ ಸಂಪರ್ಕ ಸೇವೆಯನ್ನು ಪ್ರಾರಂಭಿಸುತ್ತಿದೆ. ಗ್ರಾಮೀಣ ಭಾಗದ ಬಳಕೆದಾರರಿಗೆ ತಡೆರಹಿತ ಸಂವಹನವನ್ನು ನೀಡುತ್ತದೆ, ಇದನ್ನು  ಯುಸ್‌ ಮೂಲದ ಕಂಪನಿ Viasat ಜೊತೆ ಸೇರಿ ತಂತ್ರಜ್ಞಾನ  ಅಭಿವೃದ್ಧಿಪಡಿಸಲಾಗಿದೆ.

ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಯಾವುದೇ ಸ್ಥಳಗಳಲ್ಲಿ  ಅಡೆತಡೆಯಿಲ್ಲದ ಸಂವಹನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡಲು ಇಲ್ಲಿ ಸಾಧ್ಯವಿದೆ.  ಕ್ಯಾಲಿಫೋರ್ನಿಯಾ ಮೂಲದ Viasat ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಭೌಗೋಳಿಕ ಸವಾಲುಗಳನ್ನು ಲೆಕ್ಕಿಸದೆ ಬಳಕೆದಾರರಿಗೆ ಸಂಪರ್ಕ ಒದಗಿಸಲು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

ಈ ಉಪಗ್ರಹ ಸಂಪರ್ಕ ಸೇವೆಯು  ಕಣಿವೆಯ ಪ್ರದೇಶ, ಹಳ್ಳಿಗಳ ಪ್ರದೇಶದಂತಹ ಕಡೆಗಳಲ್ಲಿ ಯಾವುದೇ ನೆಟ್ವರ್ಕ್‌ ಇಲ್ಲದ ಕಡೆಗಳಲ್ಲಿ ಇರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.  ಉಪಗ್ರಹ ಸಂಪರ್ಕವು ತುರ್ತು ಮತ್ತು ಮಿಲಿಟರಿ ಬಳಕೆಗೆ  ಮಾತ್ರಾ ಲಭ್ಯವಿದ್ದರೂ, ಈ ಸೇವೆಯು ಮೊದಲ ಬಾರಿಗೆ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ, ಸೆಲ್ಯುಲಾರ್ ಅಥವಾ ವೈ-ಫೈ ನೆಟ್‌ವರ್ಕ್‌ಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಬಳಕೆದಾರರು ಸಂಪರ್ಕ ಸಾಧಿಸಲು ಇನ್ನು ಸಾಧ್ಯವಾಗುತ್ತದೆ. ಈ ಸೇವೆಯು ತುರ್ತು ಕರೆ, SoS ಸಂದೇಶ ಕಳುಹಿಸುವಿಕೆ ಮತ್ತು ಇತರ ನೆಟ್‌ವರ್ಕ್‌ಗಳು ತಲುಪದಿರುವಾಗ UPI ಪಾವತಿಗಳನ್ನು ಕೂಡಾ ಮಾಡಲು ಸಾದ್ಯವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Viasat  ಸಹಯೋಗದೊಂದಿಗೆ,ಬಿಎಸ್‌ಎನ್‌ಎಲ್  ದ್ವಿಮುಖ ಉಪಗ್ರಹ ಸಂವಹನವನ್ನು ಸಕ್ರಿಯಗೊಳಿಸಿದೆ, 36,000‌ ಕಿಮೀ  ದೂರದಲ್ಲಿರುವ Viasat  ನ  ಎಲ್-ಬ್ಯಾಂಡ್ ಉಪಗ್ರಹಗಳಿಗೆ ಸಂಪರ್ಕಿಸುತ್ತದೆ. ಆದರೆ ಈ ಉಪಗ್ರಹ ಸಂಪರ್ಕ ಸೇವೆಯನ್ನು ಬಳಕೆದಾರರು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ಬಿಎಸ್‌ಎನ್‌ಎಲ್‌ ಉಲ್ಲೇಖಿಸಲಿಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror