ಅರಸಿನಮಕ್ಕಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ | ಪ್ರಧಾನಿ ಕಾರ್ಯಾಲಯದಿಂದ ತ್ವರಿತ ಸ್ಪಂದನೆ | ಬಿ ಎಸ್‌ ಎನ್‌ ಎಲ್‌ ಸ್ಪಂದಿಸುವುದೇ ?

October 9, 2021
9:04 AM

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ತಲೆದೋರಿರುವ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ನೀಡಿದ ದೂರಿಗೆ ತಕ್ಷಣ ಸ್ಪಂದನೆ ದೊರೆತಿದ್ದು ಹೊಸ ಬ್ಯಾಟರಿ ಅಳವಡಿಕೆಗೆ ಮುಂದಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಹೊಸ ಬ್ಯಾಟರಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಮಂಜೂರಾತಿ ದೊರೆತ ಕೂಡಲೇ ಅಳವಡಿಸುವುದಾಗಿ ಪ್ರಧಾನಿಯವರ ಕಾರ್ಯಾಲಯದಿಂದ ಪ್ರತ್ಯುತ್ತರ ಬಂದಿದೆ. ಆದರೆ ಬಿ ಎಸ್‌ ಎನ್‌ ಎಲ್‌ ಇದಕ್ಕೆ ಸ್ಪಂದಿಸುವುದೇ ಎನ್ನುವುದು  ಈಗಿರುವ ಪ್ರಶ್ನೆಯಾಗಿದೆ.

Advertisement
Advertisement

ಅರಸಿನಮಕ್ಕಿಯಲ್ಲಿ ಬಿಎಸ್ಸೆನ್ನೆಲ್ ಟವರ್ ಇದ್ದು ಬಹಳ ಹಿಂದೆ ಬಿಎಸ್ಸೆನ್ನೆಲ್ ಉತ್ತಮ ಸೇವೆ ನೀಡುತ್ತಿದ್ದುದರಿಂದ ಅತ್ಯಧಿಕ ಬಳಕೆದಾರರಿದ್ದರು. ಆದರೆ ಇತ್ತೀಚೆಗೆ ಹಲವಾರು ಸಮಯದಿಂದ ವಿದ್ಯುತ್ ಹೋದಾಗ ಬ್ಯಾಟರಿ ಬ್ಯಾಕಪ್ ಇಲ್ಲದಿರುವುದರಿಂದ, ಪರ್ಯಾಯ ಬ್ಯಾಟರಿ ವ್ಯವಸ್ಥೆ ಇಲ್ಲದಿರುವುದರಿಂದ ಟವರ್ ಆಫ್ ಆಗಿ ನೆಟ್‌ವರ್ಕ್ ಹೋಗುತ್ತಿತ್ತು. ಇದರಿಂದಾಗಿ ಶಿಶಿಲ, ಶಿಬಾಜೆ, ರೆಖ್ಯ, ಹತ್ಯಡ್ಕ ಗ್ರಾಮಗಳ ಕೇಂದ್ರ ಸ್ಥಾನವಾದ ಅರಸಿನಮಕ್ಕಿಯಲ್ಲಿ ಆಧಾರ್ ನೋಂದಣಿ, ಕೋವಿಡ್ ಸಂದರ್ಭದಲ್ಲಿ ಸರಕಾರದ ಪ್ಯಾಕೇಜ್ ಘೋಷಣೆಯಾದಾಗ ಕಾರ್ಮಿಕರು, ರಿಕ್ಷಾ ಚಾಲಕರಿಗೆ ಸೌಲಭ್ಯಗಳಿಗೆ ನೋಂದಣಿಗೆ, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪಡೆಯಲು ಆನ್‌ಲೈನ್ ನೋಂದಣಿಗೆ, ಪಡಿತರ ಪಡೆಯಲು ಬರುವವರಿಗೆ ಮೊಬೈಲ್‌ಗೆ ಒಟಿಪಿ ಪಡೆಯಲು ತೀವ್ರ ಸಮಸ್ಯೆಗಳು ಉಂಟಾಗುತ್ತಿತ್ತು.

Advertisement

ಜೊತೆಗೆ ನೆಟ್‌ವರ್ಕ್ ಇದ್ದರೂ ಕೀಪ್ಯಾಡ್ ಹ್ಯಾಂಡ್‌ಸೆಟ್‌ಗಳಲ್ಲಿ ವಾರಗಟ್ಟಲೆ ಫೋನ್ ಕರೆ ಹೋಗದಿರುವುದು, ಸ್ಮಾರ್ಟ್ ಫೋನ್ ಇರುವವರಿಗೆ ಮಾತ್ರ ಕರೆಗಳು, ಡಾಟಾ ಸೌಲಭ್ಯ ಸಿಗುವ ಸಮಸ್ಯೆಯೂ ಉಂಟಾಗಿತ್ತು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಾದ ವೃಷಾಂಕ್ ಖಾಡಿಲ್ಕರ್‌ ಅವರು ಸೆ.22 ರಂದು ಪ್ರಧಾನಮಂತ್ರಿಯವರ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ದೂರು ಸಲ್ಲಿಸಿದ್ದು ಖಾಸಗಿ ಕಂಪೆನಿಗಳ ಟವರ್‌ಗಳನ್ನೂ ಹೆಚ್ಚಿಸುವಂತೆಯೂ ತಿಳಿಸಿದ್ದರು. ಇದೀಗ ದೂರು ನೀಡಿದ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಬಂದಿದೆ. ಈ ಪ್ರತಿಕ್ರಿಯೆ ಬಂದಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲತೆಗೂ ಪ್ರಧಾನಮಂತ್ರಿಯವರ ಕಾರ್ಯಾಲಯ ವಿಷಾದ ವ್ಯಕ್ತಪಡಿಸಿದೆ. ‌

Advertisement

ಹಲವು ಕಡೆಗಳಲ್ಲಿ  ಇಂತಹದ್ದೇ ಪ್ರತಿಕ್ರಿಯೆ ಪ್ರಧಾನಿಗಳ ಕಾರ್ಯಾಲಯದಿಂದ ಬಂದಿದೆ. ಸದ್ಯವೇ ಬ್ಯಾಟರಿ ಬದಲಾವಣೆ ಎಂದೂ ಉತ್ತರ ಬಂದಿದೆ. ಬ್ಯಾಟರಿ ಲಭ್ಯವಾದ ಕೂಡಲೇ ಬದಲಾವಣೆ ಎಂದೂ ಹೇಳುವ ಬಿ ಎಸ್‌ ಎನ್‌ ಎಲ್‌ ಇದುವರೆಗೂ ಬ್ಯಾಟರಿ ಅಳವಡಿಕೆ ಕಾರ್ಯ ಹಲವು ಕಡೆ ನಡೆಸಿಲ್ಲ. ಪ್ರಧಾನಿ ಕಾರ್ಯಾಲಯದ ಪ್ರತಿಕ್ರಿಯೆಯ ವೇಗದಲ್ಲಿಯೇ ಬಿ ಎಸ್‌ ಎನ್‌ ಎಲ್‌ ಕೂಡಾ ಸ್ಪಂದಿಸಿದೆ ಗ್ರಾಮೀಣ ಭಾಗದ ಅತ್ಯಂತ ಸುದೃಢ ನೆಟ್ವರ್ಕ್‌ ಬಿ ಎಸ್‌ ಎನ್‌ ಎಲ್‌ ಆಗುವುದರಲ್ಲಿ ಸಂಶಯವಿಲ್ಲ.

ಮೊಬೈಲ್ ನೆಟ್‌ವರ್ಕ್ ಎಂಬುದು ಪ್ರಸ್ತುತ ರಸ್ತೆ, ಕುಡಿಯುವ ನೀರಿನಂತೆಯೆ ಜನರ ಮೂಲಭೂತ ಆವಶ್ಯಕತೆಯಾಗಿದ್ದು ಅರಸಿನಮಕ್ಕಿಯ ಬಿಎಸ್ಸೆನ್ನೆಲ್ ಟವರ್ ಸಮಸ್ಯೆಗೆ ಪ್ರಧಾನಿಯವರ ಕಾರ್ಯಾಲಯದಿಂದ ಸಿಕ್ಕಿರುವ ಸ್ಪಂದನೆ ಈಡೇರುವ ಭರವಸೆ ಇದೆ.
  – ವೃಷಾಂಕ್ ಖಾಡಿಲ್ಕರ್, ಅರಸಿನಮಕ್ಕಿ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror