ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಯ ಪ್ರಮುಖ ಕೃಷಿ ಅಡಿಕೆ ಬೆಳೆ. ಪರಂಪರಾಗತವಾಗಿ ಬೆಳೆಯುತ್ತಿದ್ದ ಅಡಿಕೆಗೆ 1970 ರ ಸುಮಾರಿಗೆ 3 ರೂಪಾಯಿಗೆ ಖರೀದಿ ನಡೆಯುತ್ತಿತ್ತು. ಅದಕ್ಕಿಂತಲೂ ಕಡಿಮೆ ಧಾರಣೆಗೆ ಇಳಿಯುವ ಭೀತಿ ಕೃಷಿಕರಿಗೆ ಇತ್ತು. ಈ ಸಂದರ್ಭದಲ್ಲಿ ಬೆಳೆಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಈ ಸಂದರ್ಭ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ವಾರಣಾಸಿ ಸುಬ್ರಾಯ ಭಟ್ಟರು ಸಂಸ್ಥೆಯೊಂದರ ಸ್ಥಾಪನೆಗೆ ಇಳಿದರು. ಈ ಸಾಹಸದ ಬಗ್ಗೆ ಅಂದಿನಿಂದಲೂ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾದ ಬಿ ಟಿ ನಾರಾಯಣ ಭಟ್ ತಮ್ಮ ಮಾತಿನ ಮೂಲಕ ವಿವರಿಸಿದ್ದಾರೆ. ಪತ್ರಕರ್ತ ನಾ.ಕಾರಂತ ಪೆರಾಜೆ ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಅದರ ಆಡಿಯೋ ಇಲ್ಲಿದೆ….
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel