ರಾಜ್ಯರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ರಿಯಾಯಿತಿ ದರದ ಬಸ್ಸುಪಾಸು, ವಿಕಲಚೇತನರ ರಿಯಾಯಿತಿ ಬಸ್ಸುಪಾಸು, ಅಂಧರ ಉಚಿತ ಬಸ್ಸುಪಾಸು, ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ಸುಪಾಸು, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್, ಅಪಘಾತ ಪರಿಹಾರ ನಿಧಿ ಇವುಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತದೆ.
ನಿಗಮದ ಬಸ್ಸುಪಾಸು ಪಡೆಯುವ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸೇವಾಸಿಂಧು ಪೋರ್ಟಲ್‍ಗೆ ಅಪ್‍ಲೋಡ್ ಮಾಡಿದ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಶಾಲಾ/ಕಾಲೇಜುಗಳಲ್ಲಿ ನೀಡಬೇಕಾಗಿರುತ್ತದೆ. ಪಾಸಿನ ಶುಲ್ಕವನ್ನು ಶಾಲಾ/ಕಾಲೇಜಿನಲ್ಲಿ ಪಾವತಿಸಿ ಶಾಲಾ/ಕಾಲೇಜು ಮುಖಾಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸು ನಿಲ್ದಾಣದ ಪಾಸ್ ಕೌಂಟರ್‍ನಲ್ಲಿ ಮಾತ್ರ ಪಾವತಿಸಲು ಅವಕಾಶವಿರುತ್ತದೆ.
ಸಂಬಂಧಪಟ್ಟಎಲ್ಲಾ ದಾಖಲೆಗಳನ್ನು JPEG ಹಾಗೂ PDF ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್ ನಲ್ಲಿಅಪ್‍ಲೋಡ್ ಮಾಡಿ ಸದರಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್‍ನ ಶುಲ್ಕವನ್ನು ನಿಗಮದ ಪಾಸ್‍ಕೌಂಟರ್‍ನಲ್ಲಿ ನೀಡಿ ಪಾಸುಗಳನ್ನು ಪಡೆಯಬಹುದು ಎಂದು ಕರಾರಸಾಸಂ, ಮಂಗಳೂರು, ವಿಭಾಗೀಯ ನಿಯಂತ್ರಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…