ಕಾಳು ಮೆಣಸು ಬೆಳೆಗಾರರು ಉತ್ತಮ ಇಳುವರಿಯನ್ನು ಪಡೆಯಲು ಪ್ರತೀ ತಿಂಗಳು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳೇನು? ಯಾವ ರೀತಿಯ ಕೃಷಿ ಪದ್ಧತಿಯನ್ನು ಪಾಲಿಸಬೇಕು? ಬೆಳೆಯುವ ಹಂತದಲ್ಲಿ ಕೊಡಬೇಕಾದ ಪೋಷಕಾಂಶಗಳೆಷ್ಟು? ರೋಗ ಹತೋಟಿ ಮತ್ತು ಮುಂಜಾಗ್ರತಾ ಕ್ರಮಗಳಲ್ಲಿ ಬಳಸುವ ರೋಗನಾಶಕಗಳು, ಕೀಟನಾಶಕಗಳು ಯಾವುವು? ಎಂಬ ಸಮಗ್ರ ಮಾಹಿತಿ ಇಲ್ಲಿದೆ.…… ಮುಂದೆ ಓದಿ……
- ಜನವರಿ: ಎಳೆಯ ಕಾಳುಮೆಣಸಿನ ಬಳ್ಳಿಗಳಿಗೆ ನೆರಳು ಮತ್ತು ನೀರಿನ ನಿರ್ವಹಣೆ ಮಾಡುವುದು.
- ಫೆಬ್ರವರಿ: ಎಳೆಯ ಕಾಳುಮೆಣಸಿನ ಬಳ್ಳಿಗಳಿಗೆ ನೆರಳು ಮತ್ತು ನೀರಿನ ನಿರ್ವಹಣೆ ಮಾಡುವುದು. ಹಳದಿಯಾದ ಮತ್ತು ಬಿಸಿಲು ಬೀಳುವ ಬಳ್ಳಿಗಳಿಗೆ 3% ಸುಣ್ಣದ ದ್ರಾವಣ ಸಿಂಪಡಣೆ ಮಾಡುವುದು.
- ಮಾರ್ಚ್: ಕಾಳು ಮೆಣಸು ಬೆಳೆ ಕೊಯ್ಲು, 10 ದಿವಸಗಳ ಮಧ್ಯಂತರದಲ್ಲಿ 50- 80 ಲೀ ನೀರು ಪ್ರತೀ ಬಳ್ಳಿಗಳಿಗೆ ನೀಡುವುದು., ಕೊಯ್ಲಿನ ನಂತರ Scale insect ಗಳ ನಿಯಂತ್ರಣಕ್ಕಾಗಿ Dimethoate (2ml/Ltr) ಅಥವಾ Imidacloprid (0.4ml/Ltr) ಸಿಂಪಡಣೆ ಮಾಡುವುದು.
- ಎಪ್ರಿಲ್: ಮಳೆ ವಿಳಂಬವಾದಲ್ಲಿ, 10 ದಿನಗಳ ಮಧ್ಯಂತರದಲ್ಲಿ ಪ್ರತೀ ಬಳ್ಳಿಯ ಬುಡಕ್ಕೆ 50-80 ಲೀ ನೀರುಣಿಸುವುದು., ಕನಿಷ್ಠ 5-8 ಸಲದ ನೀರಾವರಿಯು ಬೇಗ ಕಾಳುಮೆಣಸಿನ ಗೆರೆ(spike) ಗಳನ್ನು ಬಿಡಲು, ಕಾಳು ಕಟ್ಟುವಿಕೆಗೆ ಮತ್ತು ಕಾಳು ಉದುರದಂತೆ ತಡೆಯಲು ಸಹಕಾರಿಯಾಗಿದೆ., ನೆರಳು ನಿರ್ವಹಣೆ., ಪ್ರತೀ ಬಳ್ಳಿಯ ಬುಡದ ಸುತ್ತಲೂ 1Kg ಕೃಷಿ ಸುಣ್ಣವನ್ನು ಹರಡುವುದು.
- ಮೇ : ನೀರಾವರಿ ಮುಂದುವರೆಸುವುದು., ನೆರಳು ನಿರ್ವಹಣೆ., 100g Urea + 50g DAP + 150g MOP ಪ್ರತೀ ಬಳ್ಳಿಗಳ ಬುಡಕ್ಕೆ ನೀಡುವುದು., ಮೈಕ್ರೋನ್ಯೂಟ್ರಿಯೆಂಟ್ (IISR ಪೆಪ್ಪರ್ ಸ್ಪೆಷಲ್ 1Kg) + ಫೋಲಿಯಾರ್ ನ್ಯೂಟ್ರಿಷನ್ (ಮೋನೋ ಅಮೋನಿಯಂ ಫಾಸ್ಫೇಟ್ (MAP) 12:61:0 1Kg) 200 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡುವುದು., ಬಳ್ಳಿಯ ಬುಡಕ್ಕೆ ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಹಾಕಿ ಮಣ್ಣು ಹಾಕುವುದು ಅಥವಾ ಮಲ್ಚಿಂಗ್ ಮಾಡುವುದು.
- ಜೂನ್ : ರನ್ನರ್ ಗಳು, ಟಾಪ್ ಶೂಟ್ ಗಳು ಅಥವಾ ಬೇರು ಬಂದ ಗಿಡಗಳನ್ನು ನಾಟಿ ಮಾಡುವುದು., ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು., Copper oxy chloride (0.5Kg/barrel) ಅಥವಾ Potassium phosphonate (600ml/barrel) ದ್ರಾವಣವನ್ನು 5 ಲೀಟರ್ ನಂತೆ ಪ್ರತೀ ಬಳ್ಳಿಗಳ ಬುಡ ನೆನೆಯುವಂತೆ ಹಾಕುವುದು.
- ಜುಲೈ : ನಾಟಿ ಮಾಡಿದ ಬಳ್ಳಿಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು., Phytophthora ಸೋಂಕು ಕಂಡುಬಂದಲ್ಲಿ Metalaxyl + Mancozeb (1.2g/Ltr) ದ್ರಾವಣವನ್ನು ಸೋಂಕು ಕಂಡುಬಂದ ಮತ್ತು ಸುತ್ತಮುತ್ತಲಿನ ಬಳ್ಳಿಗಳಿಗೆ ಸಿಂಪಡಿಸಿ (spot spray), ಬುಡ ಒದ್ದೆಯಾಗುವಂತೆ ಹಾಕುವುದು (drenching)., ಸೋಂಕಿನಿಂದಾಗಿ ಬಿದ್ದ ಎಲೆಗಳು ಮತ್ತು ಗೆರೆಗಳನ್ನು ಸ್ವಚ್ಛಗೊಳಿಸುವುದು., 10 ದಿನಗಳ ನಂತರ ಸಿಂಪಡಣೆಯನ್ನು ಪುನರಾವರ್ತಿಸುವುದು; ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ಬಳ್ಳಿಗಳಿಗೆ ಶೇಕಡಾ 1 ರ ಬೋರ್ಡೋ ದ್ರಾವಣದ ಎರಡನೇ ಸಿಂಪಡಣೆಯನ್ನು ಮಾಡುವುದು.
- ಆಗಸ್ಟ್ : Phytophthora ಸೋಂಕಿನ ಬಗ್ಗೆ ಎಚ್ಚರ ವಹಿಸುವುದು., ಶೀತ ಮತ್ತು ನೀರು ನಿಲ್ಲುವ ಪ್ರದೇಶಗಳಲ್ಲಿ ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು.
- ಸೆಪ್ಟೆಂಬರ್ : ಬೇರು ಬಂದ ಕಾಳುಮೆಣಸಿನ ಗಿಡಗಳನ್ನು ನಾಟಿ ಮಾಡುವುದು., ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು ಮತ್ತು Copper oxychloride (0.5Kg/barrel) 5 ಲೀಟರ್ ನಂತೆ ಪ್ರತೀ ಬಳ್ಳಿಯ ಬುಡ ನೆನೆಯುವಂತೆ ಹಾಕುವುದು ಅಥವಾ Potassium phosphonate (600ml/barrel) ಸಿಂಪಡಿಸಿ, 5 ಲೀಟರ್ ನಂತೆ ಪ್ರತೀ ಬಳ್ಳಿಯ ಬುಡ ನೆನೆಯುವಂತೆ ಹಾಕುವುದು., ಪ್ರತೀ ಬಳ್ಳಿಗಳ ಬುಡ ನೆನೆಯುವಂತೆ Flufyrom (1ml/Ltr) ದ್ರಾವಣವನ್ನು 4-5 ಲೀಟರ್ ಹಾಕುವುದು., 100g Urea + 50g DAP + 150g MOP ರಸಗೊಬ್ಬರ ನೀಡುವುದು., ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಮತ್ತು 0.5Kg ಟ್ರೈಕೋಡರ್ಮ ಮಿಶ್ರಿತ ಬೇವಿನ ಹಿಂಡಿ ಹಾಕುವುದು.
- ಅಕ್ಟೋಬರ್ : ಒಣ ಪ್ರದೇಶಗಳಲ್ಲಿ ಗೆದ್ದಲು ನಿಯಂತ್ರಣಕ್ಕಾಗಿ Chlorophyriphos (0.07%) ಅಥವಾ Imidacloprid (0.3ml/Ltr) ದ್ರಾವಣವನ್ನು 4-5 ಲೀಟರ್ ನಂತೆ ಬುಡದಿಂದ 3 ಅಡಿಗಳ ವರೆಗೆ ನೆನೆಯುವಂತೆ ಹಾಕುವುದು., ಇದು ಗೆದ್ದಲು, ಬೇರು ಹುಳ ಮತ್ತು ಮೆಲಿ ಬಗ್ ಗಳ ನಿಯಂತ್ರಣಕ್ಕೆ ಸಹಕಾರಿ.
- ನವೆಂಬರ್ : ಸ್ಕೇಲ್ ಇನ್ಸೆಕ್ಟ್ ಗಳು ಕಂಡುಬಂದಲ್ಲಿ Dimethoate (2ml/Ltr) ಅಥವಾ Imidacloprid (0.3ml/Ltr) ದ್ರಾವಣವನ್ನು ಸಿಂಪಡಿಸುವುದು.
- ಡಿಸೆಂಬರ್ : ಹೆಚ್ಚು ಕಾಳುಮೆಣಸು ಇರುವ ಬಳ್ಳಿಗಳಿಗೆ ರಕ್ಷಣಾತ್ಮಕ ನೀರಾವರಿಯನ್ನು ಒದಗಿಸುವುದು.
ಬರಹ :
ಅರುಣ್ ಕುಮಾರ್ ಕಾಂಚೋಡು
ಆಧಾರ: Calendar of operations in black pepper (Monthly). Published by: Head, IISR, Regional station, Appangala, Madikeri.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel