Advertisement
ವೆದರ್ ಮಿರರ್

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |

Share

10.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಬಿಡುವಿನ ಅವಧಿ ಸ್ವಲ್ಪ ಜಾಸ್ತಿ ಇರಬಹುದು. ಈಗಿನಂತೆ ಜುಲೈ 16 ರ ತನಕವೂ ಇದೇ ರೀತಿಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. IMD ನಕ್ಷೆಯಂತೆ ಜುಲೈ 17 ರಿಂದ ಸಣ್ಣ ಪ್ರಮಾಣದ ಮಳೆ ಇರಲಿದ್ದು, ಬಿಸಿಲು ಹಾಗೂ ಮೋಡದ ವಾತಾವರಣದ ಅವಧಿ ಹೆಚ್ಚಿರಿವಂತೆ ತೋರುತ್ತಿದೆ.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗದ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಈಗಿನಂತೆ ಜುಲೈ 16ರ ತನಕವೂ ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ನಂತರ ಮೋಡ ಹಾಗೂ ಬಿಸಿಲಿನ ವಾತಾವರಣದ ಸಾಧ್ಯತೆಗಳಿವೆ.

ಒಳನಾಡು : ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಕರಾವಳಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಧಾರವಾಡ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.  ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಜುಲೈ 16ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿಲ್ಲ.  ದಕ್ಷಿಣ ಧ್ರುವದ ಬಳಿ ಇದ್ದ ತಿರುವಿಕೆಯು ಕ್ಷೀಣಿಸಿದ್ದು, ಸೋಮಾಲಿಯನ್ ಜಟ್ ವೇವ್ಸ್ ನಂತಹ ಗಾಳಿಯ ಚಲನೆಯ ಪ್ರಭಾವವೂ ಕಡಿಮೆಯಾಗಿದ್ದು, ನೈಜ ಮುಂಗಾರು ಮಳೆಯ ಪುನರಾರಂಭಗೊಂಡಿದೆ. ಈಗಿನಂತೆ ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

14 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

14 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

15 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

15 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

15 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

1 day ago