ಒಂಟೆಯ ಕೂದಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ರಾಜಸ್ಥಾನದ ಬಿಕಾನೇರ್ನಲ್ಲಿ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರದಲ್ಲಿ ಈವರೆಗೆ 10ರಿಂದ 15 ಬಗೆಯ ಉತ್ಪನ್ನಗಳನ್ನು ತಯಾರಿಸಲಾಗಿದೆ. ಕಂಬಳಿ, ಸೋಲ್, ಕಾಲು ಚಾಪೆ, ಸಿಂಗಲ್ ಫ್ಲವರ್ ಸ್ಟಿಕ್, ಜಾಕೆಟ್, ಯೋಗ ಮ್ಯಾಟ್, ಸ್ಯಾಂಡಲ್, ಬ್ಯಾಗ್, ಪರ್ಸ್, ಬಟ್ಟೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಇವುಗಳಲ್ಲಿ ಸಿದ್ಧಪಡಿಸಲಾಗಿದೆ.
ಜೂನ್ 22 ರಂದು ವಿಶ್ವ ಒಂಟೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರಾಜಸ್ಥಾನದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಪಶ್ಚಿಮ ರಾಜಸ್ಥಾನದಲ್ಲಿ ಇಂದಿಗೂ, ಒಂಟೆಗಳು ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ರಾಜಸ್ಥಾನದ ಬಿಕಾನೇರ್ನಲ್ಲಿ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರವೂ ಇದೆ.
ಇಲ್ಲಿ ಒಂಟೆ ತಳಿ ಅಭಿವೃದ್ಧಿ, ಸುಧಾರಣೆಗಳ ಕಾರ್ಯ ನಡೆಯುತ್ತಿವೆ. ಇದಲ್ಲದೆ, ಒಂಟೆ ಕೂದಲು ಮತ್ತು ಹಾಲಿನಿಂದ ವಿವಿಧ ಉತ್ಪನ್ನಗಳನ್ನು ಸಹ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ, ನೀವು ಜಾಕೆಟ್ಗಳು, ಸ್ಯಾಂಡಲ್ ಗಳು, ಬಟ್ಟೆ ಅಥವಾ ಇತರ ಪ್ರಾಣಿಗಳಿಂದ ಮಾಡಿದ ಬಗೆಬಗೆಯ ವಸ್ತುಗಳನ್ನು ನೋಡುತ್ತೀರಿ. ಅದೇ ರೀತಿ ಒಂಟೆ ಕೂದಲಿನಿಂದಲೂ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಸದ್ಯ ಪ್ರವಾಸಿಗರ ಕೊರತೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಾರಿ ಸೌಂಡ್ ಪ್ರೂಫ್ ಮತ್ತು ಫೈರ್ ಪ್ರೂಫ್ ಸೀಟುಗಳನ್ನೂ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯೋಗದ ಮ್ಯಾಟ್ ಕೂಡ ಸಿದ್ಧಪಡಿಸಲಾಗಿದೆ. ಯೋಗ ಮ್ಯಾಟ್ ಅನ್ನು ಸಂಪೂರ್ಣವಾಗಿ ಒಂಟೆ ಕೂದಲಿನಿಂದ ಮಾಡಲಾಗಿದೆ. ಬೆಂಕಿ ನಿವಾರಕ ಆಸನವನ್ನು ಒಂಟೆಯ ಕೂದಲು ಮತ್ತು ಕುರಿ ಕೂದಲಿನಿಂದ ಮಾಡಲಾಗಿದ್ದು ಅದು ಸಾಕಷ್ಟು ಬಲಿಷ್ಟವಾಗಿರುತ್ತದೆ.
ಬಿಕಾನೇರ್ನಲ್ಲಿರುವ ಒಂಟೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಸಂಸ್ಕರಣಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಒಂಟೆ ಕೂದಲಿನಿಂದ ಹೆಚ್ಚೆಚ್ಚು ಉತ್ಪನ್ನಗಳ ತಯಾರಿಕೆ ಆರಂಭವಾಗಲಿದೆ, ಈ ಉತ್ಪನ್ನಗಳ ಬಳಕೆಯಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬಹುದು.
(ಅಂತರ್ಜಾಲ ಸಂಗ್ರಹ)
ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.