ಭಾರತೀಯ ಗೋತಳಿ ಉಳಿಯಬೇಕು ಎನ್ನುವ ಕಾಳಜಿ ಹಲವರಲ್ಲಿದೆ. ಅದರಲ್ಲೂ ರಾಜ್ಯದ ಮಲೆನಾಡು ಗಿಡ್ಡ ಗೋತಳಿ ಉಳಿಸುವ ಬಗ್ಗೆ ಅಭಿಯಾನ ನಡೆಯುತ್ತಿದೆ. ಇದೀಗ ಮಲೆನಾಡು ಗಿಡ್ಡ ತಳಿಯ ಹಸುಗಳ ಉಳಿಸೋಣ ಹೋರಾಟದ ಅಂಗವಾಗಿ “ಗೋ ಮನಸ್ಕ” ಆಸಕ್ತರೆಲ್ಲರೂ ಉಡುಪಿ ಕೃಷ್ಣ ಮಠದ ಅದಮಾರು ಕಿರಿಯ ಶ್ರೀ ಗಳ ಮಾರ್ಗದರ್ಶನದಲ್ಲಿ “ಸುರಕ್ಷಾ” ಎಂಬ ಮಲೆನಾಡು ಗಿಡ್ಡ ಗೋ ತಳಿ ಸಂರಕ್ಷಣೆ ಕುರಿತ ಟ್ರಸ್ಟ್ ಮತ್ತು ಸಂಘಟನೆಯೊಂದನ್ನು ಆರಂಭಿಸಿದ್ದಾರೆ.
ಅದಮಾರು ಶ್ರೀ ಗಳ ಮಾರ್ಗದರ್ಶನದಂತೆ ಮಲೆನಾಡಿನ ಯಾವುದಾದರೂ ಗ್ರಾಮವೊಂದನ್ನು ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆ ಕುರಿತಂತೆ ಕೇಂದ್ರಿಕರಿಸುವುದು ಹಾಗೂ ಅಲ್ಲಿ ಮಲೆನಾಡು ಗಿಡ್ಡ ತಳಿ ಹಸುಗಳ ಅಭಿವೃದ್ಧಿ ಮತ್ತು ಮಲೆನಾಡು ಗಿಡ್ಡ ಗೋ ತಳಿ ಹಸುಗಳ ಗೋಪಾಲಕರಿಗೆ ಮಲೆನಾಡು ಗಿಡ್ಡ ತಳಿ ಉಳಿಸಿ ಬೆಳೆಸಿಕೊಂಡು ಹೋಗಲು ಮಾರ್ಗದರ್ಶನ ನೀಡುವ ಬಗ್ಗೆ ಹೆಜ್ಜೆ ಇರಿಸಲಾಗಿದೆ. ಜೊತೆಗೆ ಮಲೆನಾಡು ಗಿಡ್ಡ ತಳಿ ಹಸುಗಳ ಗವ್ಯೋತ್ಪನ್ನ ತಯಾರಿಕೆಗೆ ತರಬೇತಿಯನ್ನು ನೀಡುವುದು, ಮಲೆನಾಡು ಗಿಡ್ಡ ತಳಿಗೆ ರುಚಿಸುವ ಮೇವಿನ ಬೀಜದ ಹಂಚಿಕೆ, ಗ್ರಾಮದ ಸರ್ವಸದಸ್ಯರನ್ನೂ ಕೂಡಿಸಿ ಸಂಘಟನೆ ಮಾಡಿ ಒಟ್ಟಾಗಿ ಮಲೆನಾಡು ಗಿಡ್ಡ ತಳಿ ಸಾಕಲು ಪ್ರೇರಣೆ ನೀಡುವುದು, ಮಲೆನಾಡು ಗಿಡ್ಡ ತಳಿಯಲ್ಲಿ ಸ್ಥಳೀಯ ಹೆಚ್ಚು ಹಾಲು ಕೊಡುವ ಗೋ ತಳಿ ಅಭಿವೃದ್ಧಿ ಇನ್ನೂ ಅನೇಕ ಗೊತ್ತು ಗುರಿ ಇಟ್ಟುಕೊಂಡು ಯೋಜನೆ ರೂಪಿಸುವುದೆಂದು ನಿರ್ಧರಿಸಲಾಗಿದೆ.
ಈ ಬಗ್ಗೆ ಇತ್ತೀಚಿನ ಗೂಗಲ್ ಮೀಟ್ ಸಭೆಯಲ್ಲಿ ಸುರಕ್ಷಾ ಟ್ರಸ್ಟ್ ನ ಮುಖ್ಯ ಸಂಚಾಲಕರಾದ ಜಗದೀಶ ಪ್ರಸಾದ್ ,ಉಜಿರೆ ಇವರ ಆಶಯಕ್ಕೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಸಗುಂಡಿ ಗ್ರಾಮದ ನಿವಾಸಿ ಮಲೆನಾಡು ಗಿಡ್ಡ ಗೋ ಸಂವರ್ಧಕ , ದೇಸಿ ತಳಿ ಸಂರಕ್ಷಕ ಯುವ ಉತ್ಸಾಹಿ ಗೋಪಾಲಕ
ದತ್ತಾತ್ರೇಯ ಭಟ್ ಹಲಗಾರು ಅವರು ತಮ್ಮ ಕಾರ್ಯಕ್ಷೇತ್ರವಾದ “ಕುಸಗುಂಡಿ” ಊರಿನಲ್ಲಿ ಸುರಕ್ಷಾ ಟ್ರಸ್ಟ್ ನ ಮೊದಲ
ಮಾದರಿ “ಗೋ ಗ್ರಾಮ” ವನ್ನಾಗಿ ರೂಪಿಸಲು ಬನ್ನಿ ಎಂದು ಸಂತಸದಿಂದ ಸುರಕ್ಷಾ ಟ್ರಸ್ಟ್ ನ ಸರ್ವ ಸದಸ್ಯರನ್ನು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ಮೊನ್ನೆ ಏಪ್ರಿಲ್ ಎರಡನೇ ತಾರೀಖಿನಂದು ಸುರಕ್ಷಾ ಟ್ರಸ್ಟ್ ನ ಪ್ರಥಮ ಸಭೆ ಹಾಗೂ ಮಲೆನಾಡು ಗಿಡ್ಡ ಗೋ ತಳಿ ಗೋಪಾಲಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗೋವು ಸಂಬಂಧಿಸಿದ ಕಾರ್ಯಕ್ರಮಗಳಿಗೆ ಭಾಗವಹಿಸುವಿಕೆಯ ಬಗ್ಗೆ ಜನರಿಗೆ ಸ್ವಲ್ಪ ಅನಾಸಕ್ತಿ. ಆ ನಡುವೆಯೂ ಕುಸ್ಕುಂಡಿ ಗ್ರಾಮಸ್ಥರು ನಮ್ಮ ನಿರೀಕ್ಷೆ ಮೀರಿ ಆಗಮಿಸಿದ್ದರು. ನಮ್ಮ ಸುರಕ್ಷಾದ ಚಿಕ್ಕ ಮಟ್ಟದ ಗೋ ಸಂಬಂಧಿಸಿದ ಕಾರ್ಯಕ್ರಮ ಮಾಡುವ ಪ್ರಯತ್ನಕ್ಕೆ ಚಿಕ್ಕ ಹಳ್ಳಿಯಲ್ಲಿ ಹೆಚ್ಚು ಗೋ ಪ್ರೇಮಿಗಳು ಹೆಚ್ಚು ಆಸಕ್ತಿಯಿಂದ ಬಂದಿರುವುದು ಭರವಸೆ ಮೂಡಿಸಿದೆ.
ನಿವೃತ್ತ ಪಶುವೈದ್ಯ ಮತ್ತು ಶ್ರೀ ರಾಮಚಂದ್ರಪುರ ಮಠ ದ ಗೋ ರಕ್ಷಣಾ ಹೋರಾಟ ದ ವಿಚಾರದಲ್ಲಿ ಹಲವಾರು ದಶಕದಿಂದ ಕಾರ್ಯ ನಿರ್ವಹಣೆ ಮಾಡಿದ ಡಾ ವೈ ವಿ ಕೃಷ್ಣಮೂರ್ತಿ ಯವರು ಮಲೆನಾಡು ಗಿಡ್ಡ ತಳಿ ಹಸುಗಳ ವೈವಿದ್ಯತೆ, ಗುಣ , ಸ್ವಭಾವ,ಹಾಲಿನ ಇಳುವರಿ, ಬಣ್ಣ ಇತರೆ ಎಲ್ಲಾ ವಿಷಯ ಗಳ ಬಗ್ಗೆ ನೆರೆದ ಗೋ ಪ್ರೇಮಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ನಂತರ ಗೋಸೇವಾ ಗತಿ ವಿಧಿ ಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿರುವ ಪ್ರವೀಣ ಸರಳಾಯರು ಸರಳವಾಗಿ ಮಲೆನಾಡು ಗಿಡ್ಡ ತಳಿ ಉಳಿಸೋಣ ವಿಚಾರದಲ್ಲಿ ಹಲವಾರು ವಿಷಯವನ್ನ ವಿವರಿಸಿದರು.
ಸುರಕ್ಷಾ ತಂಡದ ಮುಖ್ಯ ಸಂಚಾಲಕರಾದ ಜಗದೀಶ್ ಪ್ರಸಾದ್ , ಉಜರೆಯವರು “ಮಲೆನಾಡು ಗಿಡ್ಡ ತಳಿ ಅವಸಾನದಂಚಿನಲ್ಲಿರುವುದು, ಕಸಾಯಖಾನೆಗೆ ಹೋಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಗೋ ಉಳಿಸಲು ನಾವೆಲ್ಲರೂ ಯಾವ ರೀತಿಯ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ನಂತರ ನೆಡೆದ ಗೋಪಾಲಕರ ನಡುವಿನ ಸಂವಾದದಲ್ಲಿ ವೈದ್ಯ ಸುಪ್ರಿತ್ ಲೋಬೋ ಅವರು ಮಲೆನಾಡು ಗಿಡ್ಡ ತಳಿ ಗವ್ಯೊತ್ಪನ್ನ ಬಳಸಿ ಆರೋಗ್ಯ ವೃದ್ದಿ ಹೇಗೆ ಸಾದ್ಯ ಎಂಬುದನ್ನು ನೆರೆದ ಗೋಪಾಲಕರಿಗೆ ವಿವರಿಸಿದರು.
ಸುನೀತಾ ಗೋವಿನ ಗವ್ಯೋತ್ಪನ್ನದ ಮೌಲ್ಯವರ್ಧನೆ ಯ ಬಗ್ಗೆ ಕಿರು ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಸುರಕ್ಷಾ ಟ್ರಸ್ಟ್ ನ ಕಾನೂನು ಸಲಹೆಗಾರರೂ , ಟ್ರಸ್ಟ್ ನ ಸದಸ್ಯರೂ ಆದ ಸತೀಶ್ ಭಟ್ಟ ಮತ್ತು ಗೋ ಚಿಂತಕ ಮುರುಳಿಕೃಷ್ಣ ಭಟ್ ಆಗಮಿಸಿದ್ದರು.
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…
ತೆಲಂಗಾಣ ಹಾಗೂ ಹೈದ್ರಾಬಾದ್ ಪ್ರದೇಶದಲ್ಲಿ ಹೀಟ್‌ವೇವ್ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…