ಲಕ್ಷ್ಮಣ ರಾವ್ ಇನಾಮದಾರ್‌ ಪ್ರಶಸ್ತಿಗೆ ಕ್ಯಾಂಪ್ಕೋ ಆಯ್ಕೆ

December 3, 2021
11:20 AM

ಲಕ್ಷ್ಮಣ ರಾವ್ ಇನಾಮದಾರ್‌ ಪ್ರಶಸ್ತಿಗೆ ಕ್ಯಾಂಪ್ಕೋ ಅವಿರೋಧವಾಗಿ ನಾಮನಿರ್ದೇಶನಗೊಂಡಿದೆ. ತನ್ನ ಸದಸ್ಯರು ಮತ್ತು ಪ್ರದೇಶಕ್ಕೆ ಅದ್ಭುತವಾದ ಸೇವೆಗಳಲ್ಲಿ ತೊಡಗಿರುವ ಪ್ರಖ್ಯಾತ ಸಹಕಾರಿ ಸಂಘಕ್ಕೆ ನೀಡುವ ಪ್ರಶಸ್ತಿ ಇದು.  ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ವಿವಿಧ ಕೃಷಿಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡುವ ರಾಷ್ಟ್ರೀಯ ನೀತಿಯ ಹಿನ್ನೆಲೆಯಲ್ಲಿ, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ರಚಿಸಿರುವ ಸಮಿತಿಯು ಈ ವರ್ಷ ಸರ್ವಾನುಮತದಿಂದ ಕ್ಯಾಂಪ್ಕೋಗೆ ಅದರ ಗಮನಾರ್ಹ ಸೇವೆಗಳಿಗಾಗಿ ಪ್ರಶಸ್ತಿಯನ್ನು ನೀಡುವಂತೆ ಶಿಫಾರಸು ಮಾಡಿದೆ.

ಕ್ಯಾಂಪ್ಕೋ ವೃತ್ತಿಪರವಾಗಿ ಮತ್ತು ಸಹಕಾರ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿರುವುದರೊಂದಿಗೆ, ಗ್ರಾಮೀಣ ಸಮೂದಾಯ, ವಿಶೇಷವಾಗಿ ಅಡಿಕೆ, ಕೊಕ್ಕೋ ಮತ್ತು ರಬ್ಬರ್‌ ಕೃಷಿಯಲ್ಲಿ ತೊಡಗಿರುವ ರೈತರಿಗೆ ಗಮನಾರ್ಹ ಸೇವೆಗಳನ್ನು ನೀಡುತ್ತಿದೆ ಹಾಗೂ ವಿಶ್ವದರ್ಜೆಯ ವಿವಿಧ ಚಾಕಲೇಟ್ ಗಳನ್ನು ತಯಾರಿಸಿ ರಫ್ತುಮಾಡುತ್ತದೆ.

2021 ರ ಡಿಸೆಂಬರ್ 17 ರಿಂದ 19 ರವರೆಗೆ  ಲಕ್ನೋದಲ್ಲಿ ನಡೆಯಲಿರುವ ಸಹಕಾರ ಭಾರತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವಾನ್ವಿತ ಒಕ್ಕೂಟದ ಕೇಂದ್ರ ಸಹಕಾರ ಸಚಿವ   ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆಯಲಿರುವ ಸಹಕಾರ ಭಾರತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಜಿ ಸರಕಾರ್ಯವಾಹ ಭೈಯಾಜಿ ಜೋಶಿ  ಅವರು ಕ್ಯಾಂಪ್ಕೊಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror