ಕ್ಯಾಂಪ್ಕೋ ನೇತೃತ್ವದಲ್ಲಿ ಜ.10 ರಿಂದ ವಿಟ್ಲದ ಸಿಪಿಸಿಆರ್‌ಐಯಲ್ಲಿ ಸಹಸಂಸ್ಥೆಗಳ ಜತೆ ಸೇರಿ ಕ್ಯಾಂಪ್ಕೋ ಜ.10 ರಿಂದ 12 ರ ವರೆಗೆ ವಿಟ್ಲ ಸಿಪಿಸಿಆರ್ ಐ ಯಲ್ಲಿ ಕಾರ್ಬನ್ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆಗಳ ತರಬೇತಿ ನಡೆಯಲಿದೆ. ಶಿಬಿರವನ್ನು ಕ್ಯಾಂಪ್ಕೋ ಮಾಜಿ ಅಧ್ಯಕ್ಷ , ಹಾಲಿನಿರ್ದೇಶಕ ಎಸ್ ಆರ್ ಸತೀಶ್ಚಂದ್ರ ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಹಿಸುವರು.
ಕ್ಯಾಂಪ್ಕೋ ಆಡಳಿತ ನಿರ್ದೇಶಕ ಎಚ್ ಎಂ ಕೃಷ್ಣಕುಮಾರ್ , ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ. ಸಿ ಟಿ ಜೋಸ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕ್ಯಾಂಪ್ಕೋ ನಿರ್ದೇಶಕರುಗಳು ಉಪಸ್ಥಿತರಿರುವರು. ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಪ್ರಸ್ತಾವನೆಗೈಯಲಿದ್ದಾರೆ. ಶಿಬಿರದಲ್ಲಿ ಔಷಧಿ ಸಿಂಪಡಣಾ ಕ್ರಮಗಳ ಬಗ್ಗೆ ಸಿಪಿಸಿಆರ್ ಐ ವಿಜ್ಞಾನಿ ಡಾ.ಭವಿಷ್ಯ ಅವರ ತಂಡ ಮಾಹಿತಿ ನೀಡುವರು.
ಜ.12 ರಂದು ಅಪರಾಹ್ಣ 2.3೦ ರಿಂದ ಸೊಸೈಟಿ ಪ್ರಮುಖರೊಡನೆ ಸಂವಾದ ಕಾರ್ಯಕ್ರಮ ನಡೆಯಲಿದ್ದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ನಿರ್ವಹಣೆ ಮಾಡುವರು. ಬಳಿಕ ಶಿಬಿರದ ಸಮಾರೋಪ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿಪಿಸಿಆರ್‌ಐ ನಿರ್ದೇಶಕಿ ಡಾ.ಅನಿತಾ ಕರುಣ್ ವಹಿಸಿಸುವರು.
ಅತಿಥಿಗಳಾಗಿ ಮಲೆನಾಡು ಕೃಷಿಕ ಸಮುದಾಯ ಸಂಘಟನೆ ಅಧ್ಯಕ್ಷ ಸತ್ಯನಾರಾಯಣ ಕೂಳೂರು ಭಾಗವಹಿಸುವರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಹಾಗೂ ಕ್ಯಾಂಪ್ಕೋ ನಿರ್ದೇಶಕರುಗಳು, ಅಡಿಕೆ ಪತ್ರಿಕೆ ಪ್ರಕಾಶಕ, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಉಪಸ್ಥಿತರಿರುವರು. ಶಿಬಿರದ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆಸಕ್ತರು ಸಂಘಟಕರಿಗೆ ಪೂರ್ವ ಮಾಹಿತಿ ನೀಡಿ ಆಗಮಿಸಲು ಶಿಬಿರ ನಿರ್ದೇಶಕ ಶಂ ನಾ ಖಂಡಿಗೆ ತಿಳಿಸಿದ್ದಾರೆ. ಆಗಮಿಸುವ ಆಸಕ್ತ ಕೃಷಿಕರು ಕ್ಯಾಂಪ್ಕೋ ಸಿಬಂದಿ ಈಶ್ವರ ನಾಯ್ಕ್ ಅವರಿಗೆ ಮಾಹಿತಿ ನೀಡಲು ಕೋರಲಾಗಿದೆ. ಸಂಪರ್ಕ 9449332906.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…