Advertisement
ಸಾಹಿತ್ಯ

ಅಂತರಾಷ್ಟ್ರೀಯ ಮಟ್ಟ  ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸ್ಫರ್ಧೆಯಲ್ಲಿ ಬಹುಮಾನ |

Share

ಅಂತರಾಷ್ಟ್ರೀಯ ಮಟ್ಟ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇವರು ಆಯೋಜಿಸಿರುವ ಅಕ್ಷರದವ್ವ ಸಾವಿತ್ರಿ ಬಾಪುಲೆ ಬಗ್ಗೆ ನಡೆಯುವ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಡಾ | ವಾಣಿಶ್ರೀ ಕಾಸರಗೋಡು ಬರೆದಿರುವ  ಕವನಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ಈ ಕವನ ಇಲ್ಲಿದೆ….

ಸಾವಿರಾರು ದೀಪಗಳನ್ನು ಹಚ್ಚಿದ
ಆಧುನಿಕ ಶಿಕ್ಷಣದ ತಾಯಿ
ಅಕ್ಷರಸ್ತ ಪ್ರತೀ ಮಹಿಳೆಯ ಮನದಲ್ಲಿ
ನೆಲೆಸಿರುವ ಸಾವಿತ್ರಿ ಭಾಯಿ

ಧಮನಿತ ಸಮುದಾಯದ ಶಿಕ್ಷಣಕ್ಕಾಗಿ
ಶಾಲೆಯನ್ನು ಸ್ಥಾಪಿಸಿದ ಕ್ರಾಂತಿಕಾರಿ
ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ
ಅದ ನನಸಾಗಿಸಲು ಶ್ರಮಿಸಿದ ರೂವಾರಿ

ಬ್ರಿಟಿಷ್ ಸರಕಾರದಿಂದ ಭಾರತದ ಪ್ರಥಮ
ಒಳ್ಳೆಯ ಅದ್ಯಾಪಕಿ ಬಿರುದು ಪಡೆದ ಕೀರ್ತಿ
ವಿಧವೆಯರ ತಲೆ ಬೋಳಿಸುವ ಪದ್ದತಿಯ
ಪ್ರಭಲವಾಗಿ ವಿರೋಧಿಸಿದ ಹೋರಾಟಗಾರ್ತಿ

ಅನಾಥ ಮಕ್ಕಳ ಪಾಲನೆಗೈಯುವ ಪುನರ್ವಸತಿ
ಕೇಂದ್ರವ ಸ್ಥಾಪಿಸಿ ಬದುಕಿಗೆ ನೆಲೆಕೊಟ್ಟ ಸಾಧಕಿ
ಮೊಟ್ಟ ಮೊದಲು ಕಾನೂನು ಸಲಹೆ ಪಡೆದು
ಮದುವೆ ಮಾಡಿ ಇತಿಹಾಸ ಬರೆದ ಶಿಕ್ಷಕಿ

ಹೆಣ್ಣೊಬ್ಬಳು ಶಿಕ್ಷಕಿಯಾಗೋದು ಧರ್ಮಕ್ಕೂ
ಸಮಾಜಕ್ಕೂ ದ್ರೋಹ ಬಗೆದಂತೆ ಅನ್ನುವರಿಲ್ಲಿ
ತಳ ಸಮುದಾಯದ ಹೆಣ್ಣು ಮಕ್ಕಳ
ಶಾಲೆ ತೆರೆದರು ಪೂಣೆಯಲ್ಲಿ

ಬಾರತದ ದಿಟ್ಟ ಹೋರಾಟಗಾರ್ತಿ ಪ್ರಥಮ ಶಿಕ್ಷಕಿ
ಖಾದಿ ಸೀರೆಯಲಿ ದಣಿವರಿಯದ ಸತ್ಯಶೋಧಕಿ
ಸ್ತ್ರೀ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸಾಧಕಿ
ಪ್ಲೇಗ್ ರೋಗಿಗಳ ಸೇವೆಯಲ್ಲಿ ಪ್ಲೇಗಿಗೆ ಬಲಿಯಾದ ನಾಯಕಿ

# ಡಾ | ವಾಣಿಶ್ರೀ ಕಾಸರಗೋಡು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

7 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

2 days ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

2 days ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

2 days ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago