Advertisement
ಸುದ್ದಿಗಳು

ಜ.10 ರಿಂದ ವಿಟ್ಲದಲ್ಲಿ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ | ಕಾರ್ಬನ್ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆಗಳ ತರಬೇತಿ |

Share

ಕ್ಯಾಂಪ್ಕೋ ನೇತೃತ್ವದಲ್ಲಿ ಜ.10 ರಿಂದ ವಿಟ್ಲದ ಸಿಪಿಸಿಆರ್‌ಐಯಲ್ಲಿ ಸಹಸಂಸ್ಥೆಗಳ ಜತೆ ಸೇರಿ ಕ್ಯಾಂಪ್ಕೋ ಜ.10 ರಿಂದ 12 ರ ವರೆಗೆ ವಿಟ್ಲ ಸಿಪಿಸಿಆರ್‌ ಐ ಯಲ್ಲಿ ಕಾರ್ಬನ್ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆಗಳ ತರಬೇತಿ ನಡೆಯಲಿದೆ. ಶಿಬಿರವನ್ನು ಕ್ಯಾಂಪ್ಕೋ ಮಾಜಿ ಅಧ್ಯಕ್ಷ , ಹಾಲಿನಿರ್ದೇಶಕ ಎಸ್‌ ಆರ್‌ ಸತೀಶ್ಚಂದ್ರ ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ವಹಿಸುವರು.

Advertisement
Advertisement

ಕ್ಯಾಂಪ್ಕೋ ಆಡಳಿತ ನಿರ್ದೇಶಕ ಎಚ್‌ ಎಂ ಕೃಷ್ಣಕುಮಾರ್‌ , ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ. ಸಿ ಟಿ ಜೋಸ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ ಹಾಗೂ ಕ್ಯಾಂಪ್ಕೋ ನಿರ್ದೇಶಕರುಗಳು ಉಪಸ್ಥಿತರಿರುವರು. ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಪ್ರಸ್ತಾವನೆಗೈಯಲಿದ್ದಾರೆ.  ಶಿಬಿರದಲ್ಲಿ ಔಷಧಿ ಸಿಂಪಡಣಾ ಕ್ರಮಗಳ ಬಗ್ಗೆ ಸಿಪಿಸಿಆರ್ ಐ ವಿಜ್ಞಾನಿ ಡಾ.ಭವಿಷ್ಯ ಅವರ ತಂಡ ಮಾಹಿತಿ ನೀಡುವರು.

Advertisement

ಜ.12 ರಂದು ಅಪರಾಹ್ಣ 2.3೦ ರಿಂದ ಸೊಸೈಟಿ ಪ್ರಮುಖರೊಡನೆ  ಸಂವಾದ ಕಾರ್ಯಕ್ರಮ ನಡೆಯಲಿದ್ದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ನಿರ್ವಹಣೆ ಮಾಡುವರು. ಬಳಿಕ ಶಿಬಿರದ ಸಮಾರೋಪ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಿಪಿಸಿಆರ್‌ಐ ನಿರ್ದೇಶಕಿ ಡಾ.ಅನಿತಾ ಕರುಣ್‌ ವಹಿಸಿಸುವರು.

Advertisement

ಅತಿಥಿಗಳಾಗಿ ಮಲೆನಾಡು ಕೃಷಿಕ ಸಮುದಾಯ ಸಂಘಟನೆ ಅಧ್ಯಕ್ಷ ಸತ್ಯನಾರಾಯಣ ಕೂಳೂರು ಭಾಗವಹಿಸುವರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಹಾಗೂ ಕ್ಯಾಂಪ್ಕೋ ನಿರ್ದೇಶಕರುಗಳು,  ಅಡಿಕೆ ಪತ್ರಿಕೆ ಪ್ರಕಾಶಕ, ಫಾರ್ಮರ್‌ ಫಸ್ಟ್‌ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಉಪಸ್ಥಿತರಿರುವರು. ಶಿಬಿರದ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಆಸಕ್ತರು ಸಂಘಟಕರಿಗೆ ಪೂರ್ವ ಮಾಹಿತಿ ನೀಡಿ ಆಗಮಿಸಲು ಶಿಬಿರ ನಿರ್ದೇಶಕ ಶಂ ನಾ ಖಂಡಿಗೆ ತಿಳಿಸಿದ್ದಾರೆ. ಆಗಮಿಸುವ ಆಸಕ್ತ ಕೃಷಿಕರು ಕ್ಯಾಂಪ್ಕೋ ಸಿಬಂದಿ ಈಶ್ವರ ನಾಯ್ಕ್ ಅವರಿಗೆ ಮಾಹಿತಿ ನೀಡಲು ಕೋರಲಾಗಿದೆ. ಸಂಪರ್ಕ 9449332906. 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !

ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.

3 mins ago

Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |

ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…

28 mins ago

ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |

ಮಿಲ್ಲೆಟ್ಸ್‌ ಬೆಳೆಯ ಕಾರಣದಿಂದ ನೀರಿನ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೃಷಿ ಉಳಿಸುವ, ಮಣ್ಣಿನ…

5 hours ago

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

1 day ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago