ಕ್ಯಾಂಪ್ಕೊ ಪ್ರತಿ ಹಂತದಲ್ಲೂ ಬೆಳೆಗಾರರ ಬೆಂಬಲಕ್ಕೆ | 5 ವರ್ಷಗಳಲ್ಲಿ ಶೇ. 70 ರಷ್ಟು ಬೆಳವಣಿಗೆ

November 29, 2025
9:41 PM

ಅಡಿಕೆ ಬೆಳೆಗಾರರ ಹಿತಕ್ಕಾಗಿ ವಾರಣಾಸಿ ಸುಬ್ರಾಯ ಭಟ್ಟರಿಂದ ಆರಂಭಗೊಂಡ ಕ್ಯಾಂಪ್ಕೊವು ಅಂದಿನಿಂದಲೂ ಅಡಿಕೆ ಬೆಳೆಗಾರರ ಪರವಾಗಿ ನಿಂತಿದೆ. ಈ ಬಾರಿ ಅಕ್ರಮ ಆಮದು ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆಯೂ, ಕ್ಯಾಂಪ್ಕೊ ಪ್ರತಿಹಂತದಲ್ಲೂ ಬೆಳೆಗಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಈ ವರ್ಗೀಕರಣವನ್ನು ಪ್ರಶ್ನಿಸಲು ಕ್ಯಾಂಪ್ಕೊ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಡಿಕೆಯು ಅದರ ನೈಸರ್ಗಿಕ ರೂಪದಲ್ಲಿ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಸಾಬೀತುಪಡಿಸಲು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಒಟ್ಟುಗೂಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಕ್ಯಾಂಪ್ಕೊ ನಿಯೋಗವು ಎಂ.ಎಸ್. ಸ್ವಾಮಿನಾಥನ್‌ ರೀಸರ್ಚ್‌ ಫೌಂಡೇಶನ್‌ನಲ್ಲಿ ಡಾ. ಸೌಮ್ಯಾಸ್ವಾಮಿನಾಥನ್ ಅವರನ್ನು ಭೇಟಿ ಮಾಡಿತು. ಡಾ. ಸ್ವಾಮಿನಾಥನ್ ಅವರು WHO  ಮತ್ತು IARC ಗೆ ಕ್ಯಾಂಪ್ಕೊದ ಮನವಿಯನ್ನುಸಲ್ಲಿಸಿ, ಮರು-ಮೌಲ್ಯಮಾಪನಕ್ಕೆವಿನಂತಿಸಿದ್ದಾರೆ. ಅಂತಾರಾಷ್ಟ್ರೀಯ ಏಜೆನ್ಸಿಗಳು ಪರಿಶೀಲನೆಗಾಗಿ ಅಡಿಕೆಯು ಕ್ಯಾನ್ಸರ್ ರಹಿತ ಎಂಬುದಕ್ಕೆ ವೈಜ್ಞಾನಿಕ ಡೇಟಾವನ್ನುಕೇಳಿವೆ.

ನಿಟ್ಟೆ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಅಂಶಗಳನ್ನು ಕೂಡಾ ಉಲ್ಲೇಖಿಸಿದ ಕಿಶೋರ್‌ ಕುಮಾರ್‌ ಅವರು,  ಅಡಿಕೆ ಸಾರವು ಕ್ಯಾನ್ಸರ್ ಕೋಶಗಳನ್ನು ಶಮನಗೊಳಿಸುತ್ತದೆ ಆದರೆ ಸಾಮಾನ್ಯಕೋಶಗಳಿಗೆ ಸುರಕ್ಷಿತವಾಗಿದೆ ಎಂದು ಅಧ್ಯಯನ ವರದಿ ಮಾಡಿದೆ. ಜೀಬ್ರಾ ಫಿಶ್ಮೇಲಿನ ಪ್ರಯೋಗಗಳಲ್ಲಿ ಅಡಿಕೆ ಸಾರವು ಸುರಕ್ಷಿತವೆಂದು ದೃಢಪಟ್ಟಿದೆ.  ಸಮುದಾಯ ಆಧಾರಿತ ಅಧ್ಯಯನದಲ್ಲಿ ಕೇವಲ ಅಡಿಕೆ ಜಗಿಯುವವರಲ್ಲಿ (ಶೇ. 0.15 ರಷ್ಟುಮಂದಿ)  ಬಾಯಿಯ ಕ್ಯಾನ್ಸರ್‌ ಪ್ರಕರಣಗಳು ಕಂಡುಬಂದಿಲ್ಲ ಎಂದರು.

ಅಡಿಕೆ  ಮತ್ತು ಮಾನವನ ಆರೋಗ್ಯದ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆಯು ಕ್ಯಾಂಪ್ಕೊದ ನಿರಂತರ ಮನವಿಯ ಮೇರೆಗೆ, “ಅಡಿಕೆ ಮತ್ತು ಮಾನವನ ಆರೋಗ್ಯದ ಮೇಲಿನ ಸಾಕ್ಷ್ಯಾಧಾರಿತ ಸಂಶೋಧನೆ” ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ ಎಂದು ಕೊಡ್ಗಿ ಉಲ್ಲೇಖಿಸಿದರು. ಇದರ ಜೊತೆಗೆ ಭಾರತಸರ್ಕಾರವು ICAR-CPCRI  ನೇತೃತ್ವದಲ್ಲಿ  ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಸಮಿತಿಯನ್ನು ರಚಿಸಿದೆ ಎಂದರು.

Advertisement

ಅಡಿಕೆಯಲ್ಲಿನ ತೇವಾಂಶ ಪ್ರಮಾಣದ ಬಗ್ಗೆ ಕ್ಯಾಂಪ್ಕೊ ಹೆಚ್ಚುನ ಗಮನಹರಿಸಿದ್ದು ಅಡಿಕೆಯಲ್ಲಿನ ತೇವಾಂಶದ ಮಿತಿಯನ್ನು ಪ್ರಸ್ತುತ ಇರುವ ಶೇ. 7 ರಿಂದಶೇ. 11 ±0.5% ಕ್ಕೆ ಹೆಚ್ಚಿಸಲು ಮತ್ತು ಅದನ್ನು ಸುರಕ್ಷಿತವೆಂದು ಪರಿಗಣಿಸಲು FSSAI ಗೆ ಮನವಿ ಮಾಡಲಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು CPCRI ಗೆ 14.87 ಲಕ್ಷ ರೂ. ಆರ್ಥಿಕ ನೆರವು ನೀಡಲು ಮಂಡಳಿ ನಿರ್ಧರಿಸಿದೆ.

ಅಡಿಕೆಗೆ ಸಂಬಂಧಿತ ರೋಗ ಉಲ್ಬಣಕ್ಕೆ ಸ್ಪಂದನೆ ಮತ್ತು ವೈಜ್ಞಾನಿಕ ಸಹಯೋಗವನ್ನು ಕೂಡಾ ಕ್ಯಾಂಪ್ಕೊ ಮಾಡಿದ್ದು,  ಹಳದಿ ಎಲೆರೋಗ ಮತ್ತು ಎಲೆಚುಕ್ಕೆ ರೋಗದ ಬಾಧೆ ಉಲ್ಬಣಗೊಂಡಾಗ, ವೈಜ್ಞಾನಿಕ ಕಾರಣಗಳನ್ನು ತನಿಖೆಮಾಡಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನುಅಭಿವೃದ್ಧಿ ಪಡಿಸಲು ಕ್ಯಾಂಪ್ಕೊ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ರೈತ ಗುಂಪುಗಳೊಂದಿಗೆ ಸಂವಹನ ನಡೆಸಿತು.

ಅರಣ್ಯ ಉತ್ಪನ್ನ ಪಟ್ಟಿ ಅಡಿಕೆಯನ್ನುಅರಣ್ಯ ಉತ್ಪನ್ನ ಪಟ್ಟಿಗೆ ಸೇರಿಸಿದಾಗ ಕ್ಯಾಂಪ್ಕೊ ತಕ್ಷಣವೇ ಮಧ್ಯಪ್ರವೇಶಿಸಿ ಒಂದೇ ದಿನದಲ್ಲಿ ಅದನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಮಾಡಿತು. ಆಮದು ನೀತಿ ಪರಿಷ್ಕರಣೆಯ ಸಂದರ್ಭ ಹುರಿದ ಅಡಿಕೆಯ ಆಮದು ನೀತಿಯನ್ನು ಪರಿಷ್ಕರಿಸಲಾಗಿದ್ದು, “ಮುಕ್ತ” ವರ್ಗದಿಂದ “ನಿಷೇಧಿತ” ವರ್ಗಕ್ಕೆ ಬದಲಾಯಿಸಲಾಗಿದೆ.  ಕನಿಷ್ಠ ಆಮದು ಬೆಲೆಯು ಕ್ಯಾಂಪ್ಕೊದ ಪ್ರಯತ್ನದಿಂದ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಹೆಚ್ಚಿಸಲಾಗಿದೆ ಎಂದರು.

ಬೆಳೆಗಾರರಿಗೆ ನ್ಯಾಯಯುತ ಬೆಲೆ  ಕ್ಯಾಂಪ್ಕೊ ಬೆಳೆಗಾರರಿಗೆ ಸ್ಥಿರ ಮತ್ತು ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸಿದೆ ಎಂದು ಉಲ್ಲೇಖಿಸಿ ಕಿಶೋರ್‌ ಕುಮಾರ್‌ ಕೊಡ್ಗಿ.  ಹೊಸಅಡಿಕೆಗೆ 2020 ರಲ್ಲಿಕೆಜಿಗೆ 240-320 ರೂ. ಇತ್ತು,  2025 ರಲ್ಲಿ 360-485 ರೂ.ಗೆ ಏರಿಕೆಯಾಗಿದೆ.  ಚಾಲಿ ಅಡಿಕೆಗೆ 2020 ರಲ್ಲಿಕೆಜಿಗೆ 320-380 ರೂ. ಇತ್ತು, 2025 ರಲ್ಲಿ 360-525 ರೂ.ಗೆ ಏರಿಕೆಯಾಗಿದೆ.  ಕೆಂಪುಅಡಿಕೆಗೆ 2020 ರಲ್ಲಿಕೆಜಿಗೆ 350-398 ರೂ. ಇತ್ತು, 2025 ರಲ್ಲಿ 545-585 ರೂ.ಗೆ ಏರಿಕೆಯಾಗಿದೆ.

Advertisement

ಹೊಸ ಉತ್ಪನ್ನಗಳು ಮತ್ತು ಮಾರುಕಟ್ಟೆ ವಿಸ್ತರಣೆಯ ಬಗ್ಗೆಯೂ ಕ್ಯಾಂಪ್ಕೊ  ‘ಸೌಗಂಧ್’ ಕಾಜು ಸುಪಾರಿ ಮರುಬಿಡುಗಡೆ ಮತ್ತು ಮಾಲ್ಡೀವ್ಸ್ ಅಡಿಕೆ ರಫ್ತುಆರಂಭವಾಗಿದೆ. ಕಾಳುಮೆಣಸು ಬೆಲೆ ಕೆಜಿಗೆ 300-330 ರೂ.ನಿಂದ 565-665 ರೂ.ಗೆ ಏರಿಕೆಯಾಗಿದೆ. “ಕಾಲಾಸೋನಾ” ಬ್ರಾಂಡ್ ಅಡಿಯಲ್ಲಿ ಪೆಪ್ಪರ್‌ ಸ್ಯಾಚೆಟ್‌ ಗಳನ್ನುಬಿಡುಗಡೆ ಮಾಡಲಾಗಿದೆ. ಕ್ಯಾಂಪ್ಕೊ ಆಯುಷ್ (ಸಾವಯವ ಗೊಬ್ಬರ), ಪೌಷ್ಟಿಕ, ಡಾಲಮೈಟ್‌ ,  ಕೃಷಿಗೊಬ್ಬರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು.

ಚಾಕೋಲೇಟ್‌  ಹೊಸ ಉತ್ಪನ್ನಗಳಾದ ಡೈರಿಡ್ರೀಮ್, ಫಿಯೆಸ್ಟಾ, ಎಕ್ಲೇರ್ಸ್, ಡೋಮ್ಟ್ರಫಲ್ಸ್, ಮತ್ತು ಡಾರ್ಕ್ ಚಾಕೊಲೇಟ್ ಗಳನ್ನು ಬಿಡುಗಡೆ ಮಾಡಲಾಗಿದೆ.  ಸೌರ ವಿದ್ಯುತ್ ಯೋಜನೆಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ. ಹೊಸದಾಗಿ ತೆಂಗಿನಎಣ್ಣೆ ಸಂಸ್ಕರಣಾ ಘಟಕ ಸ್ಥಾಪನೆ ಮತ್ತು ‘ಕ್ಯಾಂಪ್ಕೊ ತೆಂಗಿನ ಎಣ್ಣೆ- ಕಲ್ಪ’ ಬಿಡುಗಡೆ ಮಾಡಲಾಗಿದೆ. ರೈತರ ಕಲ್ಯಾಣಕ್ಕಾಗಿ  ವೈದ್ಯಕೀಯ ಮತ್ತು ಶಿಕ್ಷಣ ನೆರವಿಗಾಗಿ 2.34 ಕೋಟಿ ರೂ.ಗಳನ್ನು  385 ಸದಸ್ಯರಿಗೆ ವಿತರಿಸಲಾಗಿದೆ.  ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಮತ್ತು ಕೃಷಿಯಂತ್ರ ಮೇಳ ಆಯೋಜನೆ ಮಾಡಲಾಗಿದ್ದು,   ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ಪೂರೈಸಲು 260 ಲಕ್ಷ ರೂ. ವೆಚ್ಚದಲ್ಲಿ ನೈಟ್ರೋಜನ್‌ ಪ್ಲಾಂಟ್‌ ಅಳವಡಿಕೆ ಮಾಡಲಾಗಿದೆ ಎಂದು ಕೊಡ್ಗಿ ತಿಳಿಸಿದರು.

ಕ್ಯಾಂಪ್ಕೊ ವ್ಯವಹಾರ 2020-21 ನೇ ಸಾಲಿನ 2,134.15 ಕೋಟಿ ರೂ.ಗಳಿಂದ 2024-25 ನೇ ಸಾಲಿನಲ್ಲಿ 3,631.00 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 5 ವರ್ಷಗಳಲ್ಲಿಶೇ. 70 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಶೋರ್‌ ಕುಮಾರ್ ಕೊಡ್ಗಿ ಹೇಳಿದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾನುವಾರುಗಳ ಶೆಡ್ ನಿರ್ಮಾಣಕ್ಕೆ MGNREGA ಯೋಜನೆಯಿಂದ ರೂ 57,000 ಸಹಾಯಧನ
December 4, 2025
9:46 PM
by: ರೂರಲ್‌ ಮಿರರ್ ಸುದ್ದಿಜಾಲ
ಕೂದಲು ಉದುರುವಿಕೆಗೆ ತಡೆಗೆ ಪ್ರೋಟಿನ್ ಭರಿತ ಆಹಾರ
December 4, 2025
9:43 PM
by: ರೂರಲ್‌ ಮಿರರ್ ಸುದ್ದಿಜಾಲ
ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂಆರ್ ಸ್ಕ್ಯಾನ್ ಅಳವಡಿಕೆ
December 4, 2025
9:41 PM
by: ರೂರಲ್‌ ಮಿರರ್ ಸುದ್ದಿಜಾಲ
ಬೆನ್ನು, ಮೊಣಕಾಲುಗಳನ್ನು ಬಲಪಡಿಸಲು ನೆರವಾಗುವ ಆಹಾರ ಕ್ರಮಗಳು
December 4, 2025
9:39 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror