ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದಾಗುತ್ತಿದ್ದು, ಇದರ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೋ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಡಿಕೆ ಆಮದು ತಡೆಗೆ ಕೇಂದ್ರ ಸರ್ಕಾರದ ನೆರವು ಅಗತ್ಯ ಇದೆ ಎಂದು ಪತ್ರದಲ್ಲಿ ಕ್ಯಾಂಪ್ಕೋ ತಿಳಿಸಿದೆ.
ಕಳೆದ ಕೆಲವು ಸಮಯಗಳಿಂದ ಅಡಿಕೆಯು ಈಶಾನ್ಯ ರಾಜ್ಯಗಳ ಮೂಲಕ ಆಗಮನವಾಗುತ್ತಿದ್ದರೆ, ಅಲ್ಲಿ ಬಿಗು ಕ್ರಮವಾಗುತ್ತಿದ್ದಂತೆಯೇ ಶ್ರೀಲಂಕಾ ಸೇರಿದಂತೆ ಇತರೆಡೆಗಳಿಂದ ಹಡಗಿನ ಮೂಲಕವೂ ಆಗಮನವಾಯಿತು. ಇಲ್ಲೂ ತೆರಿಗೆ ಇಲಾಖೆ ಚುರುಕಾಗದಂತೆ ವಿಮಾನದ ಮೂಲಕ ಅಡಿಕೆ ಆಮದಾಗುತ್ತದೆ. ವಿಮಾನದ ಮೂಲಕ ಬರುವ ಅಡಿಕೆಯು ಮಹಾರಾಷ್ಟ್ರದ ಮಾರುಕಟ್ಟೆಗೆ ಬಂದು ದೇಶದ ವಿವಿದೆಡೆಗೆ ರವಾನೆಯಾಗುತ್ತದೆ. ಹೀಗಾಗಿ ಅಡಿಕೆ ಆಮದು ತಡೆ ಬಹುದೊಡ್ಡ ಸವಾಲಾಗಿದೆ. ಇದಕ್ಕಾಗಿ ಸರ್ಕಾರದ ನೆರವು ಅಗತ್ಯ ಇದೆ.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕ್ಯಾಂಪ್ಕೋ ಸದಾ ಬದ್ಧವಾಗಿದ್ದು, ಕೇಂದ್ರ ಸರ್ಕಾರವೂ ಅಡಿಕೆ ಬೆಳೆಗಾರರ ಪರವಾಗಿರುವ ಕಾರಣದಿಂದ ಬೆಳೆಗಾರರ ಹಿತಕಾಯಲು ಅಡಿಕೆ ಆಮದು ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಅಡಿಕೆ ಆಮದು ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ಗಂಭೀರವಾದ ಪರಿಣಾಮ ಉಂಟು ಮಾಡುತ್ತದೆ ಮತ್ತು ರೈತರಿಗೆ ಗಣನೀಯ ನಷ್ಟವನ್ನು ಉಂಟುಮಾಡುತ್ತದೆ. ಆರಂಭದಲ್ಲಿ ವಿವಿಧ ಬಂದರುಗಳ ಮೂಲಕ ಅಡಿಕೆ ಆಮದು ಆಗುತ್ತಿತ್ತು, ನಂತರ ದೇಶದ ಗಡಿಭಾಗಗಳಾದ ಸಿಲ್ಚಾರ್ ಸೇರಿದಂತೆ ವಿವಿಧ ಕಡೆಗಳಿಂದ ಅಸ್ಸಾಂ ಮೂಲಕ ಅಡಿಕೆ ಬರುತ್ತಿತ್ತು.ನಂತರ ಇಂಫಾಲ್‌ನಂತಹ ವಿಮಾನ ನಿಲ್ದಾಣಗಳಿಂದ ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ನಾಗ್ಪುರ ಮತ್ತು ಅಹಮದಾಬಾದ್ ಗಳಿಗೆ ಬರುತ್ತವೆ. ಪ್ರತೀ ಬ್ಯಾಗ್ ನಲ್ಲಿ 30 ಕೆಜಿಯಂತೆ ರವಾನೆಯಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ವಿವರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.
ಈಚೆಗೆ ಡ್ರೈಫ್ರುಟ್, ಹುರಿದ ಅಡಿಕೆ , ಮೀನಿನ ಉತ್ಪನ್ನದ ಹೆಸರಿನಲ್ಲಿಯೂ ಅಡಿಕೆ ಆಮದು ಆರಂಭವಾಗಿದೆ. ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಹೀಗಾಗಿ ಅಡಿಕೆ ಆಮದು ತಡೆಗೆ ತಕ್ಷಣ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷರು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.
ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…
ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…