Advertisement
Exclusive - Mirror Hunt

ಕ್ಯಾಂಪ್ಕೊ 5 ವರ್ಷದಲ್ಲಿ 210 ಕೋಟಿ ರೂಪಾಯಿ ಲಾಭ – ಅಡಿಕೆ ಧಾರಣೆ ಸ್ಥಿರತೆಗೆ ಪ್ರಯತ್ನ | ಕಿಶೋರ್‌ ಕುಮಾರ್‌ ಕೊಡ್ಗಿ

Share

ಕಳೆದ 5 ವರ್ಷದ ಆಡಳಿತದ ಅವಧಿಯಲ್ಲಿ ಕ್ಯಾಂಪ್ಕೊ 210 ಕೋಟಿ ರೂಪಾಯಿ ಲಾಭ ಗಳಿಸಿದೆ. ಒಂದು ವರ್ಷದಲ್ಲಿ 12 ಕೋಟಿ ನಷ್ಟ ಅನುಭವಿಸಿದೆ.  ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಸತತ ಪ್ರಯತ್ನ ನಡೆಸಿದೆ. ಕಳೆದ 5 ವರ್ಷದ ಆಡಳಿತವು ತೃಪ್ತಿ ತಂದಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್ ಕೊಡ್ಗಿ ಹೇಳಿದ್ದಾರೆ.

“ದ ರೂರಲ್‌ ಮಿರರ್.ಕಾಂ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಕಳೆದ 5 ವರ್ಷದ ಆಡಳಿತದಲ್ಲಿ ತೃಪ್ತಿ ಇದೆ. ವಿಶೇಷವಾಗಿ  ಆಡಳಿತ ಮಂಡಳಿ ಸದಸ್ಯರಿಗೆ ಧನ್ಯವಾದಗಳನ್ನು ಹೇಳಬೇಕು. ಈ ರೀತಿ ಸದಸ್ಯರು ಸಿಗುವುದು ಕಷ್ಟ. ಬೇರೆ ಬೇರೆ ಸಂಘ ನೋಡುವಾಗ, ಈ ಬೃಹತ್‌ ಸಂಸ್ಥೆಯ ನಿರ್ದೇಶಕರು ಮಾದರಿಯಾಗಿದ್ದಾರೆ. ಅವರಿಗೆ ಕೃತಜ್ಞತೆ  ಹೇಳಬೇಕು. ಪ್ರಜಾಪ್ರಭುತ್ವದಲ್ಲಿ ಚರ್ಚೆ ಸಹಜ, ಆಡಳಿತದಲ್ಲಿ ಭಿನ್ನಾಭಿಪ್ರಾಯ ಬಂದಿದೆ. ಆದರೆ ನಿರ್ಣಯಕ್ಕೆ ಬರುವಾಗ ಒಮ್ಮತದ ನಿರ್ಧಾರ ಇತ್ತು, ಇದು ಸಂಸ್ಥೆಯ ಹೆಮ್ಮೆ.  ಕಳೆದ 5 ವರ್ಷದಲ್ಲಿ ರೈತರಿಗೆ ಯೋಗ್ಯ ದರ ಸಿಗುವ ಪ್ರಯತ್ನ ಆಗಿದೆ.  ನೌಕರರಿಂದ ಪ್ರಾಮಾಣಿಕ ಕೆಲಸ ಆಗಿದೆ, ಕೆಲವು ಕುಂದು ಕೊರತೆ ಆಗಿದೆ, ನಿಜ. ಅದನ್ನು ಸರಿಪಡಿಸುವ ಕೆಲಸವೂ ಆಗಿದೆ.  ಅಡಿಕೆ ಧಾರಣೆ ಹೆಚ್ಚು ಮಾಡುವ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದೆ ಎಂದರು.

ಕಳೆದ 5  ವರ್ಷದ ಆಡಳಿತದ ಅವಧಿಯಲ್ಲಿ ಕ್ಯಾಂಪ್ಕೊ 210 ಕೋಟಿ ರೂಪಾಯಿ ಲಾಭ ಗಳಿಸಿದೆ. ಒಂದು ವರ್ಷದಲ್ಲಿ 12 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ವಿವಿಧ ಕಾರಣ ಿದೆ. ಮಾರುಕಟ್ಟೆ ಅಸ್ಥಿರ, ಸತತ ಮಳೆಯ ಕಾರಣದಿಂದ ಗುಣಮಟ್ಟದ ಕೊರತೆಯಿಂದ ನಷ್ಟ ಆಗಿದೆ. ಆದರೆ ರೈತರಿಗೆ ಲಾಭ ಆಗಿದೆ. ಸಂಸ್ಥೆಗೆ ನಷ್ಟವಾದರೂ ರೈತರಿಗೆ ಲಾಭವಾಗಿದೆ. ರೈತರನ್ನು ಸೋಲುವುದಕ್ಕೆ ಬಿಡಲಿಲ್ಲ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು. ಸಂಸ್ಥೆಯ ಮುಂದಿನ ಬೆಳವಣಿಗೆಯ ದೃಷ್ಟಿಯಿಂದ ಒಟ್ಟು 50 ಕೋಟಿ ಆಸ್ಥಿ ಖರೀದಿ ಮಾಡಲಾಗಿದೆ, ಮುಂದಿನ 25 ವರ್ಷದ ಚಿಂತನೆ ಇರಿಸಿಕೊಂಡು ಹೆಜ್ಜೆ ಇಡಲಾಗಿದೆ.  ಕ್ಯಾಂಪ್ಕೊ  ಪ್ಯಾಕ್ಟರಿ ವಿಸ್ತರಣೆ,  ಪ್ಯಾಕ್ಟರಿ ಉನ್ನತೀಕರಣ ನಡೆದಿದೆ. ಸಂಸ್ಥೆಯ ಕಟ್ಟಡಗಳ ದುರಸ್ತಿ ಮಾಡಿ ವ್ಯವಹಾರಕ್ಕೆ ಯೋಗ್ಯವಾಗುವ ರೀತಿ ಮಾಡಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಕಳೆದ 5 ವರ್ಷದ ಅವಧಿಯಲ್ಲಿ ಸಾಕಷ್ಟು ಸವಾಲುಗಳು ಇದ್ದವು. ಅಡಿಕೆ ಮಾತ್ರವಲ್ಲ ಚಾಕೋಲೇಟ್‌ ವಿಭಾಗದಲ್ಲೂಈ ಸವಾಲುಗಳು ಇದ್ದವು. ಅನಧಿಕೃತವಾಗಿ ಅಡಿಕೆ  ಆಮದಾಗಿ ಮಾರುಕಟ್ಟೆ ಅಸ್ಥಿರ ಮಾಡುವ ಪ್ರಯತ್ನ ನಡೆದಿದೆ. ಆದರೆ ಕೇಂದ್ರ ಸರ್ಕಾರದ ನೆರವಿನಿಂದ ಅಸ್ಥಿರಗೊಳಿಸುವ ಪ್ರಯತ್ನವನ್ನು ತಡೆಯಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಹೇಳಬೇಕು. ಬೆಳೆಗಾರರು ಕೂಡಾ ಕೇಂದ್ರ ಸರ್ಕಾರಕ್ಕೆ ಕೃತಜ್ಞರಾಗಿರಬೇಕು. ಪ್ರತೀ ಹಂತದಲ್ಲೂ ಅಡಿಕೆ ಅಕ್ರಮ ಆಮದು ಗೊತ್ತಾದಾಗ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ನಿಂತಿದೆ.  ಬೇರೆ ಬೇರೆ ಹಂತದಲ್ಲಿ ನೆರವಿಗೆ ಬಂದಿದೆ.  ಎಲ್ಲಾ ಸವಾಲುಗಳನ್ನೂ ಕ್ಯಾಂಪ್ಕೊ ಮೆಟ್ಟಿ ನಿಂತಿದೆ. ಆದರೆ, ಯಾವುದೇ ಮಾರುಕಟ್ಟೆಯಲ್ಲಿ ಏರುಪೇರು ಸಹಜ. ಅಡಿಕೆಯೂ ಅದಕ್ಕೆ ಹೊರತಾಗಿರಲಿಲ್ಲ. ಆದರೆ ಸ್ಥಿರತೆಗೆ ಸಾಕಷ್ಟು ಪ್ರಯತ್ನ ನಡೆದಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು.

ಅಂದು ಅಮಿತ್‌ ಶಾ ಅವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾನಸಿಕವಾಗಿ ಕಿರಿಕಿರಿ ಆಗಿದ್ದು ನಿಜ. ಆದರೆ ಹಿರಿಯರ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಇದೆಲ್ಲಾ ಸ್ವಾಭಾವಿಕವಾದ್ದೇ ಎಂದು ಹಿಂದಿನ ಘಟನೆಯನ್ನು ಕೊಡ್ಗಿ ನೆನಪಿಸಿಕೊಂಡರು.

Advertisement

ಕೊರೋನಾ ಸಮಯದಲ್ಲಿ ಅಡಿಕೆ ಧಾರಣೆ ಸ್ಥಿರತೆ ಇತ್ತು. ಇದೊಂದು ಸಂದಿಗ್ಧ ಕಾಲ. ಅಡಿಕೆಗೆ  ವಿಚಿತ್ರ ಸನ್ನಿವೇಶ. ಅಡಿಕೆ ಮಾರಾಟ, ಸಾಗಾಟ ಸಾಧ್ಯ ಆಗುತ್ತಿರಲಿಲ್ಲ. ಆದರೆ ಅದೃಷ್ಟ ಚೆನ್ನಾಗಿತ್ತು. ಅಡಿಕೆ ಬೆಳೆಗಾರರಿಗೆ ರಕ್ಷಣೆ ಕೊಡಲು ಕ್ಯಾಂಪ್ಕೊಗೆ ಆಗ ಸಾಧ್ಯವಾಯಿತು. ವಿಶೇಷ  ಅನುಮತಿ ಸಹಿತ ಅಡಿಕೆ ಖರೀದಿ ಮಾಡುವ ಮೂಲಕ ಬೆಳೆಗಾರರಿಗೆ ಧೈರ್ಯ ನೀಡಿದೆ, ಹಂತ ಹಂತವಾಗಿ ಅಡಿಕೆ ಖರೀದಿ ನಡೆಸಿದೆ. ಇಂತಹ ಸಮಯದಲ್ಲಿ ಕ್ಯಾಂಪ್ಕೊ ಸಿಬಂದಿಗಳ ಪ್ರಾಮಾಣಿಕತೆ,  ಖರೀದಿಗೆ ಸಮಯ  ನೀಡಿರುವುದು ಕೂಡಾ ಗಮನಿಸಬೇಕಾದ ಅಂಶ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಕೊರೋನಾ ಕಾಲವನ್ನು ನೆನಪಿಸಿಕೊಂಡರು.

ಕೊರೋನಾದ ಆ ಕಾಲದಲ್ಲಿ ಅಡಿಕೆ ಮಾರುಕಟ್ಟೆ ಇರಲಿಲ್ಲ. ಮುಂದೆ ಅದೃಷ್ಟವೋ ಏನೋ, ಕ್ಯಾಂಪ್ಕೊದ ಇತಿಹಾಸದಲ್ಲಿಯೇ ಅಡಿಕೆಗೆ ಎಡ್ವಾನ್ಸ್‌ ಬುಕಿಂಗ್‌ ಆಗಿತ್ತು. ಇತಿಹಾಸಲ್ಲಿ ಮೊದಲ ಬಾರಿಗೆ ಈ ರೀತಿ ಆಗಿತ್ತು.  ಕೊರೋನಾ ಸಮಯದಲ್ಲಿ ಇದೊಂದು  ಅದೃಷ್ಟ.  ಆ ಬಳಿಕ ಹಂತ ಹಂತವಾಗಿ ಅಡಿಕೆ ಧಾರಣೆ ಏರಿಕೆಯಾಯಿತು. ಅದೇ ಸಮಯದಲ್ಲಿ 251 ರೂಪಾಯಿ ಇದ್ದ ಆಮದು ಸುಂಕ 351 ರೂಪಾಯಿಗೆ ಏರಿಕೆ ಮಾಡಲಾಯಿತು. ಸರ್ಕಾರವೂ ಸ್ಪಂದನೆ ನೀಡಿತ್ತು ಎಂದು ನೆನಪಿಸಿಕೊಂಡರು ಕಿಶೋರ್‌ ಕುಮಾರ್‌ ಅವರು.

ಕಾಳುಮೆಣಸು ವಿಭಾಗದಲ್ಲಿ ಈಗ ಕ್ಯಾಂಪ್ಕೊ ಲಾಭದಲ್ಲಿ ಇದೆ.  ಆರಂಭದಲ್ಲಿ ನಷ್ಟ ಇತ್ತು ನಿಜ, ಈಗ ಲಾಭದತ್ತ ಸಾಗಿದೆ.   ರಬ್ಬರ್‌ ಖರೀದಿಯಲ್ಲಿ ನಷ್ಟವಾಗಿದೆ ಹೌದು. ಈಗ ತೆಂಗಿನೆಣ್ಣೆ ವಹಿವಾಟಿನಲ್ಲಿ ಸುಧಾರಣೆ ಕಾಣುತ್ತಿದೆ. ಇದಕ್ಕಾಗಿಯೂ ಪ್ರಯತ್ನ ನಡೆಯುತ್ತಿದೆ. ಮುಂದೆ ಸರಿ ಆಗಬಹುದು ಎನ್ನುವ ನಿರೀಕ್ಷೆ ಇದೆ.  ತೆಂಗಿನೆಣ್ಣೆ ಮಾರುಕಟ್ಟೆಗೆ ಸವಾಲುಗಳೂ ಇದೆ, ಮಾರುಕಟ್ಟೆ, ಧಾರಣೆ ಏರಿಳಿತ ಇದಕ್ಕೆ ಮುಖ್ಯ ಕಾರಣ. ಈಗ ತೆಂಗಿನೆಣ್ಣೆ ಉದ್ಯಮಕ್ಕೆ ಒಂದು ವರ್ಷ ಆಗಿದೆಯಷ್ಟೆ.  ಕ್ಯಾಂಪ್ಕೊ ಗುಣಮಟ್ಟದ ತಯಾರಿಕೆ ಮಾಡುತ್ತಿದೆ. ಯಾವುದೇ ಕಲಬೆರಕೆ ಇಲ್ಲ. ಕ್ವಾಲಿಟಿಯಲ್ಲಿ ಭರವಸೆ ಇದೆ. ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ “ಗ್ರೋವರ್ಸ್ ಆಪ್‌” ಬರಲಿದೆ, ‌ ಈ ಆಪ್ ಮೂಲಕ ಮಾರುಕಟ್ಟೆ ಸಹಿತ ಎಲ್ಲಾ  ಅನುಕೂಲ ಅದರಲ್ಲಿ ಸಿಗಲಿದೆ ಎಂದು ಯೋಜನೆಗಳನ್ನು ವಿವರಿಸಿದರು.

ಅಡಿಕೆ ಮಾರುಕಟ್ಟೆ , ಧಾರಣೆ ಸದ್ಯ ಕಡಿಮೆಯಾಗದು. ಆದರೆ ಸದ್ಯ ಮಾನಸಿಕವಾದ ಭಯ ಇರುವುದು ಬರ್ಮಾ ಅಡಿಕೆಯದ್ದು. ಕಳೆದ ವರ್ಷ ಬರ್ಮಾ ಅಡಿಕೆ ಬರಲಿಲ್ಲ. ಹೆಚ್ಚಾಗಿ ಅಡಿಕೆ ಚೀನಾಕ್ಕೆ ಹೋಗಿದೆ. ಈ ವರ್ಷ ಇದುವರೆಗೆ ಬರ್ಮಾ ಅಡಿಕೆ ಚೀನಾಕ್ಕೆ ಹೋಗಿಲ್ಲ.  ಹೀಗಾಗಿ ಆತಂಕ.  ಆದರೆ, ಕಾನೂನು ಮಾರ್ಗದಲ್ಲಿ ಬರ್ಮಾ ಅಡಿಕೆ ಬಂದರೆ ಭಯವಿಲ್ಲ. ಅಕ್ರಮವಾಗಿ ಅಡಿಕೆ ಆಮದು ಆರಂಭವಾದರೆ ಕಷ್ಟ ಇದೆ. ಇದಕ್ಕಾಗಿ ಕ್ಯಾಂಪ್ಕೊ ದೇಶದ ವಿವಿಧ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ, ಅಡಿಕೆ ಆಮದು ಆಗದಂತೆ ತಡೆಯಲು ಎಲ್ಲಾ ಪ್ರಯತ್ನ ಮಾಡುತ್ತಿದೆ.  ಅಡಿಕೆ ಬೆಳೆಗಾರರು ಕೂಡಾ ಸಣ್ಣ ಆಸೆಗಾಗಿ ಬರ್ಮಾ ಅಡಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು. ಆದಷ್ಟು , ತೆರಿಗೆ ಪಾವತಿ ಮಾಡುವ ಅಡಿಕೆ ವ್ಯಾಪಾರಿಗಳಿಗೆ, ಸಂಸ್ಥೆಗಳಿಗೇ ಅಡಿಕೆಯನ್ನು ಮಾರಾಟ ಮಾಡಿ ಎಂದು ಇದೇ ವೇಳೆ ಸಲಹೆ ನೀಡಿದರು.

ಅಡಿಕೆ ಬೆಳೆಗಾರರಿಗೆ ಮುಂದೆ ಸವಾಲುಗಳು ಇವೆ ನಿಜ. ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು ಪ್ರದೇಶದಲ್ಲಿ ಅಡಿಕೆ ಬೆಳೆ ವಿಸ್ತರಣೆ ವ್ಯಾಪಕವಾಗಿ ಆಗುತ್ತಿದೆ. ಅದರ ಜೊತೆಗೆ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ, ಇದು ದುರಂತ. ಮುಂದೆ ಇದು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಅಲ್ಲೆಲ್ಲಾ ಅಡಿಕೆಗೆ ಪರ್ಯಾಯವಾದ ಬೇರೆ ಬೆಳೆಗೆ ಗಮನ ನೀಡಬೇಕಾಗಿತ್ತು. ಸರ್ಕಾರಗಳು ಈಗಲೇ ಗಮನಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಅಡಿಕೆ ಬೆಳೆ 16 ಲಕ್ಷ ಮೆಟ್ರಿಕ್‌ ಟನ್‌ ಇದೆ. ಮುಂದೆ ಇನ್ನಷ್ಟು ಹೆಚ್ಚಾಗಲಿದೆ. ಸದ್ಯ ನಮ್ಮಲ್ಲಿಯಂತೆ ಸಂಘಟಿತವಾದ ಮಾರುಕಟ್ಟೆ ವ್ಯವಸ್ಥೆಗಳು ಅಲ್ಲಿ ಆರಂಭವಾಗಿಲ್ಲ. ಒಂದು ವೇಳೆ ಅಂತಹ ಸಂಘಟಿತ ವ್ಯವಹಾರ ಆರಂಭವಾಗಿ ಉತ್ತರಭಾರತದಲ್ಲಿ ಅಡಿಕೆ ಮಾರುಕಟ್ಟೆಗೆ ಇಳಿದರೆ ನಮಗೆ ಸಂಕಷ್ಟ ಇದೆ. ಸರ್ಕಾರ ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಭತ್ತದ ನಾಡಿನಲ್ಲೂ ಅಡಿಕೆ ವಿಸ್ತರಣೆಗೆ ಕಡಿವಾಣ ಅಗತ್ಯ ಇದೆ ಎಂದು ಕೊಡ್ಗಿ ಅಭಿಪ್ರಾಯಪಟ್ಟರು.

Advertisement

ಮುಂದಿನ ಆಡಳಿತ ಮಂಡಳಿಗೆ, ಆಡಳಿತಕ್ಕೆ ಅಡಿಕೆಯ ಗುಣಮಟ್ಟ ಕಾಪಾಡಿಕೊಳ್ಳಲು ಸವಾಲುಗಳು ಇದೆ. ಕ್ಯಾಂಪ್ಕೊಗೆ ಅದರದ್ದೇ ಆದ ಬ್ರಾಂಡ್‌ ಇದೆ.ಇದನ್ನು ಉಳಿಸಿಕೊಳ್ಳಬೇಕು. ಅದರ ಜೊತೆಗೆ ಹೊಸತನಕ್ಕೆ ಯಾವತ್ತೂ ಒಡ್ಡಿಕೊಳ್ಳಬೇಕು, ತಕ್ಷಣವೇ ತೆರೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಂಸ್ಥೆಯ ಬೆಳವಣಿಗೆಗೆ ಇಂತಹ ಕೆಲವು ಸೂತ್ರಗಳನ್ನೂ ಅಳವಡಿಸಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ಸದಸ್ಯರು ಹೆಚ್ಚು ಸಕ್ರಿಯರಾಗಬೇಕು, ಅಡಿಕೆಯನ್ನು ಕ್ಯಾಂಪ್ಕೊ ಮೂಲಕ ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

2 minutes ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

39 minutes ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

50 minutes ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

53 minutes ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

58 minutes ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

18 hours ago