ಅಡಿಕೆ-ಕಾಳುಮೆಣಸು ಅಕ್ರಮ ಆಮದು ತಡೆಗೆ ಒತ್ತಾಯ | ಅಡಿಕೆ ಮೇಲಿನ ಜಿಎಸ್‌ಟಿ ಇಳಿಕೆಗೆ ಕೇಂದ್ರ ಹಣಕಾಸು ಸಚಿವರಿಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ

July 2, 2024
8:16 PM
ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಅಡಿಕೆ ಮೇಲಿನ ಜಿಎಸ್‌ಟಿ ದರಗಳನ್ನು ಕಡಿತಗೊಳಿಸುವಂತೆ ಮನವಿ ಮಾಡಿದರು, ಅಕ್ರಮ ಆಮದುಗಳನ್ನು ನಿಲ್ಲಿಸಲು ಕ್ರಮವಾಗಬೇಕು ಎಂದು ಮನವಿ ಮಾಡಿದರು.

ಅಡಿಕೆಯ ಮೇಲಿನ ಜಿಎಸ್ಟಿ ಯನ್ನು5% ನಿಂದ 2 % ಗೆ ಇಳಿಕೆ ಮಾಡಬೇಕು, ಅಡಿಕೆ ಮತ್ತು ಕಾಳುಮೆಣಸಿನ ಅಕ್ರಮ ಆಮದುಗಳನ್ನು ತಡೆಯಲು ಕ್ರಮಗಳನ್ನು ಬಲಪಡಿಸಬೇಕು ಸೇರಿದಂತೆ ವಿವಿಧ ರೈತ ಪರವಾದ ಬೇಡಿಕೆಯ ಮನವಿಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.

Advertisement
Advertisement

ಅಡಿಕೆ ಮೇಲಿನ ಜಿಎಸ್ಟಿ ಕಡಿತ ಮಾಡುವುದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹರಿಸಲು ಉತ್ತೇಜನ ಸಿಗುವುದು, ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದ್ದು ಸರಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದೆ. ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಇದೇ ರೀತಿ ಮೈಲುತುತ್ತದ ಮೇಲಿನ ಜಿಎಸ್ಟಿಯನ್ನು 18% ನಿಂದ 5%ಗೆ ಇಳಿಸಲು ಮನವಿ, ಕಾರ್ಬನ್‌ ಫೈಬರ್‌ ದೋಟಿಯ ಆಮದು ಸುಂಕ ಇಳಿಕೆಗೆ ಕ್ರಮ,  ವಿದೇಶಿ ಅಡಿಕೆಗೆ ಕನಿಷ್ಠ ಆಮದು ಬೆಲೆ ಘೋಷಣೆ ಮಾಡಿದರೂ, ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮರುಹರಾಜು ಹಾಕಲಾಗುತ್ತಿದೆ.ಇದು ದೇಶೀ ಮಾರುಕಟ್ಟೆಗೆ ಹೊಡೆತ ಬೀಳಲಿದೆ.ವಶಪಡಿಸಿಕೊಂಡ ಅಡಿಕೆಯನ್ನು ಮರುಹರಾಜಿಗೆ ಅನುವು ಮಾಡಿಕೊಡದೆ ಅದನ್ನು ನಾಶಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದೆ.

Advertisement

ಅಡಿಕೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೇಶದಲ್ಲಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಜನರ ಜನಹೀವನದಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಅಡಿಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಿಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವನ್ನು ಕ್ಯಾಂಪ್ಕೊ ಅಧ್ಯಕ್ಷರು ಎಲ್ಲಾ ರೈತರ ಪರವಾಗಿ ಮನವಿ ಮಾಡಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಒತ್ತಾಯಿಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ತಿಳಿಸಿದ್ದಾರೆ.

CAMPCO President A. Kishore Kumar Kodgi has submitted a detailed letter to Union Finance Minister Nirmala Sitharaman, congratulating her on her reappointment and seeking her intervention to support farmers and ensure fair practices in the agricultural sector.

Advertisement
  1.  Reducing GST on Arecanut from 5% to 2% and on Copper Sulphate used as pesticide
    in farming from 18% to 5%.
  2. To make advanced agricultural tools more affordable reducing Customs Duty on
    Carbon Fibre Poles.
  3. Strengthening measures to curb illegal imports of Arecanut and Pepper, with a call to
    incinerate illegal imports to prevent health risks.

President Mr.Kodgi emphasized the urgent need for these measures to protect farmers ; livelihoods, ensure market integrity, and promote sustainable agriculture. Illegal imports compromise our Market and endanger public health, stated President Mr.Kodgi, We must burn these illegal imported goods to prevent them from re-entering the market. Additional proposals include setting a minimum auction price for seized Arecanut, simplifying the GST structure, and funding research on the medicinal benefits of Arecanut and combating Yellow Leaf Disease.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 04-07-2024 | ಕರಾವಳಿ ಜಿಲ್ಲೆಗಳಾದ್ಯಂತ ಮಳೆ | ಜು.9 ರಿಂದ ರಾಜ್ಯದಲ್ಲೂ ಮಳೆ ಕ್ಷೀಣಿಸುವ ಸಾಧ್ಯತೆ |
July 4, 2024
2:08 PM
by: ಸಾಯಿಶೇಖರ್ ಕರಿಕಳ
ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೇಂದ್ರ ಸರ್ಕಾರದ ಭಾರತ್‌ ರೈಸ್‌ ಮಾರಾಟ | ಭತ್ತದ ಉತ್ಪಾದನೆ ಕುಂಠಿತ | ಹೊಸ ನೀತಿ ಜಾರಿಗೆ ತರಲು ಚಿಂತನೆ
July 4, 2024
1:18 PM
by: The Rural Mirror ಸುದ್ದಿಜಾಲ
ಮಂಗಳೂರಿಗೆ ಬೇಕು ಪ್ರತ್ಯೇಕ ರೈಲ್ವೆ ವಿಭಾಗ | ಸಂಪರ್ಕ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಉದ್ದೇಶ | ರೈಲ್ವೆ ಬಳಕೆದಾರರ ಸಮಿತಿಯಿಂದ ಸಹಿ ಅಭಿಯಾನ!
July 4, 2024
1:05 PM
by: The Rural Mirror ಸುದ್ದಿಜಾಲ
ಹಲವು ವಿಶೇಷ ದಿನಗಳ ಆಷಾಡ ಮಾಸ | ದೇವರ ಕೃಪೆಗೆ ಪಾತ್ರರಾಗಲು ಹೆಚ್ಚು ಮಹತ್ವ ಇರುವ ಮಾಸ
July 4, 2024
12:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror