ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

June 7, 2025
7:15 AM

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ ಮಾಡಿದೆ. ವಿಶೇಷವಾಗಿ ಆಮ್ಲಜನಕದ ಕೊರತೆಯಿಂದಾಗಿ  ಪರಿಸರ ಸಂರಕ್ಷಣೆಯ ಕಡೆಗೆ  ಹೆಚ್ಚಿನ  ಒತ್ತು ನೀಡುವಂತಾಗಿದೆ ಎಂದರು. ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ.  ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹಲವು ರಂಗಗಳಲ್ಲಿ ಕೆಲಸ ಮಾಡಲಾಗುತ್ತಿದೆ.  ಭಾರತ ದೀರ್ಘಕಾಲದವರೆಗೆ  ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್  ಹೇಳಿದರು.

Advertisement

ಅವರು ಒಪಿ ಜಿಂದಾಲ್ ವಿಶ್ವವಿದ್ಯಾಲಯ ಮತ್ತು ಆರ್. ವಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವುದು ;  ಜ್ಞಾನ ಹಂಚಿಕೆ ಮತ್ತು ಸಹಕಾರದ ಮೂಲಕ ಬಹುಪಾಲುದಾರರ ಸಹಭಾಗಿತ್ವದ ಪರಿಣಾಮ  ಹೆಚ್ಚಿಸುವುದು’  ಕುರಿತ ವಿಚಾರ ಸಂಕಿರಣವನ್ನು  ಉದ್ಘಾಟಿಸಿದರು. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ, ಡಿಜಿಟಲ್ ಇಂಡಿಯಾ, ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ  ಯೋಜನೆ, ಕೌಶಲ್ಯ ಭಾರತ, ಪ್ರಧಾನ ಮಂತ್ರಿ ಕೃಷಿ ಸಿಂಚಾಯ್  ಯೋಜನೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ ಎಂದು ತಿಳಿಸಿದರು. ಭಾರತದ ಸಿಲಿಕಾನ್ ವ್ಯಾನ್ ಎಂದು  ಕರೆಯಲ್ಪಡುವ ಬೆಂಗಳೂರು ನಗರ ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ತ್ವರಿತ ನಗರೀಕರಣ, ಹವಾಮಾನ ಬದಲಾವಣೆ, ಸಂಪನ್ಮೂಲಗಳ ಮೇಲೆ  ಹೆಚ್ಚುತ್ತಿರುವ ಒತ್ತಡಗಳ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶುದ್ಧ ಗಾಳಿ, ಶುದ್ಧ ಇಂಧನ ಬಳಸಿ ನಗರವನ್ನು ಹಸಿರು ಮಾಡುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದರು.

ಈ ವೇಳೆ,  ಕೈಪಿಡಿ  ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ  ಓಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ  ಕುಲಪತಿ ಪ್ರೊ. ಸಿ. ರಾಜಕುಮಾರ್, ಆರ್.ವಿ. ವಿಶ್ವವಿದ್ಯಾಲಯದ ಕುಲಪತಿ ಎ.ವಿ.ಎಸ್. ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಮಯೂರ.ಕೆ
July 8, 2025
8:44 PM
by: The Rural Mirror ಸುದ್ದಿಜಾಲ
ನಾಳೆ ಭಾರತ್ ಬಂದ್ | ಭಾರತ್‌ ಬಂದ್‌ ಏಕೆ..?
July 8, 2025
8:15 PM
by: The Rural Mirror ಸುದ್ದಿಜಾಲ
ಗರ್ಭ ಸಂಸ್ಕಾರ ಎಂದರೇನು..? ಉತ್ತಮ ಸಮಾಜ ನಿರ್ಮಾಣ ಸಾಧ್ಯವೇ….?
July 8, 2025
8:01 PM
by: The Rural Mirror ಸುದ್ದಿಜಾಲ
ಆಧುನಿಕ ಸ್ಪರ್ಶವಿರುವ ಆಕರ್ಷಕ ಅಡುಗೆಮನೆ | ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ
July 8, 2025
7:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror