ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡಿಯವರು ತಿಳಿಸಿದ್ದಾರೆ.
ಪ್ರಸ್ತುತ ಸಂದಿಗ್ಥ ಪರಿಸ್ಥಿತಿಯಲ್ಲಿ ದೇಶದ ಗಡಿ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರಿಗೆ ನೆರವಾಗಲು ಕ್ಯಾಂಪ್ಕೊ ರಾಷ್ಟ್ರೀಯ ರಕ್ಷಣಾನಿಧಿಗೆ 5.00 ಕೋಟಿ (ಐದುಕೋಟಿರೂಪಾಯಿ) ಕೊಡುಗೆ ನೀಡುವ ಮೂಲಕ ರಾಷ್ಟ್ರದ ಹಿತ ಕಾಪಾಡುವಲ್ಲಿ ತನ್ನ ಬದ್ಧತೆಯನ್ನು ತೋರಿಸಿದೆ.
“ಕ್ಯಾಂಪ್ಕೋ ಯಾವಾಗಲೂ ರಾಷ್ಟ್ರೀಯ ಹಿತ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮುಂಚೂಣಿಯಲ್ಲಿರುವ ರೈತರ ಸಹಕಾರಿ ಸಂಸ್ಥೆಯಾಗಿದೆ. ಈ ಹಿಂದೆಯೂ, ನೈಸರ್ಗಿಕ ವಿಕೋಪಗಳು ಮತ್ತು ರಾಷ್ಟ್ರೀಯ ತುರ್ತುಪರಿಸ್ಥಿತಿಗಳ ಸಮಯದಲ್ಲಿ ನಾವು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ಬೆಂಬಲವನ್ನು ನೀಡಿದ್ದೇವೆ. ಈ ನಿರ್ಣಾಯಕ ಹಂತದಲ್ಲಿ, ನಮ್ಮ ಸಶಸ್ತ್ರ ಪಡೆಗಳು ಭಯೋತ್ಪಾದನೆ ಮತ್ತು ಬಾಹ್ಯಬೆದರಿಕೆಗಳ ವಿರುದ್ಧ ಧೈರ್ಯದಿಂದ ದೇಶವನ್ನು ರಕ್ಷಿಸುತ್ತಿರುವಾಗ, ಅವರೊಂದಿಗೆ ನಿಲ್ಲುವುದು ನಮ್ಮ ನೈತಿಕ ಕರ್ತವ್ಯ. ಕ್ಯಾಂಪ್ಕೋ ಮತ್ತು ನಾವು ಪ್ರತಿನಿಧಿಸುವ ಇಡೀ ರೈತ ಸಮುದಾಯದ ಪರವಾಗಿ, ರಾಷ್ಟ್ರೀಯ ರಕ್ಷಣಾನಿಧಿಗೆ 5 ಕೋಟಿ ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ.” ಎಂದು ಕ್ಯಾಂಪ್ಕೊಅಧ್ಯಕ್ಷರು ತಿಳಿಸಿದ್ದಾರೆ.
ಭಾರತ ಸರ್ಕಾರದಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ರಕ್ಷಣಾ ನಿಧಿಯು ಸಶಸ್ತ್ರಪಡೆಗಳು ಮತ್ತು ಪ್ಯಾರಾ-ಮಿಲಿಟರಿ ಸಿಬ್ಬಂದಿ ಹಾಗೂ ಅವರ ಅವಲಂಬಿತರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಕ್ಯಾಂಪ್ಕೊ ದೇಣಿಗೆಯನ್ನು ಬ್ಯಾಂಕ್ ಮೂಲಕ ರಾಷ್ಟ್ರೀಯ ರಕ್ಷಣಾನಿ ಧಿಗೆ ನೀಡಿದೆ.
ಇಂತಹ ಕಠಿಣ ಸನ್ನಿವೇಶದಲ್ಲಿ ದೇಶದ ಸಮಸ್ತ ರೈತರು ಒಗ್ಗಟ್ಟನ್ನು ಪ್ರ ದರ್ಶಿಸಿ, ಕೇಂದ್ರ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಎಲ್ಲಾ ರೈತರಲ್ಲಿ ಕ್ಯಾಂಪ್ಕೊ ಅಧ್ಯಕ್ಷರು ವಿನಂತಿ ಮಾಡಿದ್ದಾರೆ.
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…
ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್ ಮತ್ತು ಆಹಾರ ವಿತರಣೆ…
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…